Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟಿ.ನರಸೀಪುರದಲ್ಲಿ ಪ್ರಭುತ್ವ ಚಿತ್ರದ ಸಾಹಸ ಸನ್ನಿವೇಶ
Posted date: 20 Wed, Dec 2017 10:32:56 AM
ಮೇಘರಾಜ್ ಮೂವೀಸ್ ಲಾಂಛನದಲ್ಲಿ ಎಸ್.ರವಿರಾಜ್ ಹಾಗೂ ಎಸ್ ಕುಮಾರ್ ಅವರು ನಿರ್ಮಿಸುತ್ತಿರುವ ‘ಪ್ರಭುತ್ವ’ ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ ಟಿ.ನರಸೀಪುರದಲ್ಲಿ ನಡೆದಿದೆ. ಒಂದು ಎಕರೆ ಬತ್ತದ ಗದ್ದೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಚೇತನ್‌ಚಂದ್ರ, ನಾಜರ್(ಬಾಹುಬಲಿ), ರೂಪಾದೇವಿ, ಆದಿಲೋಕೇಶ್, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದರು. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ಈ ಸನ್ನಿವೇಶ ಮೂಡಿಬಂದಿದೆ.
    ಆರ್.ರಂಗನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ಸೋಸಲೆ ಗಂಗಾಧರ್ ಅವರ ಸಂಗೀತ ನಿರ್ದೇಶನವಿದೆ.  ಈ ಚಿತ್ರಕ್ಕೆ ಎಮಿಲ್ ಹಿನ್ನಲೆ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್, ಮಾಸ್‌ಮಾದ, ವಿಕ್ರಂ ಸಾಹಸ ನಿರ್ದೇಶನ, ಮೋಹನ್, ಕಲೈ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ನರಸಿಂಹ ಜಾಲಹಳ್ಳಿ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಹಾಡುಗಳನ್ನು ಕವಿರಾಜ್, ಯೋಗರಾಜ್ ಭಟ್ ರಚಿಸಿದ್ದಾರೆ. ಸಂಭಾಷಣೆಯನ್ನು ವಿನಯ್ ಬರೆದಿದ್ದಾರೆ. ಮೇಘದಹಳ್ಳಿ ಶಿವಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. 
  ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಪಾವನ. ನಾಜರ್, ರೂಪಾದೇವಿ, ಮುನಿ, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ, ಆದಿಲೋಕೇಶ್, ಹೊನ್ನವಳ್ಳಿ ಕೃಷ್ಣ, ಗಿರಿ, ಹರೀಶ್ ರೈ, ಪೂಜಾಲೋಕೇಶ್, ಅವಿನಾಶ್, ವೀಣಾಸುಂದರ್, ವಿಜಯ್ ಚೆಂಡೂರ್, ಅಮಿತಾ ಕುಲಾಳ್, ಅನಿತಾ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಿ.ನರಸೀಪುರದಲ್ಲಿ ಪ್ರಭುತ್ವ ಚಿತ್ರದ ಸಾಹಸ ಸನ್ನಿವೇಶ - Chitratara.com
Copyright 2009 chitratara.com Reproduction is forbidden unless authorized. All rights reserved.