Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಿಸೆಂಬರ್ 10 ರಂದು ಸೀರಿಯಲ್ ಹಬ್ಬ
Posted date: 06 Wed, Dec 2017 08:43:19 AM
ಹಲವು ವರ್ಷಗಳಿಂದ ಕನ್ನಡಿಗರ ಮನರಂಜನೆಯದಾಹವನ್ನುನೀಗಿಸುತ್ತಿರುವ ವಾಹಿನಿ ಉದಯ ಟಿವಿ. ಚಲನಚಿತ್ರ, ಧಾರಾವಾಹಿ, ರಿಯಾಲಿಟಿ ಷೋ ಹೀಗೆ ಪ್ರತಿಯೊಂದು ಮನರಂಜನಾ ಆಯಾಮಗಳಲ್ಲೂ ತನ್ನ ಹೆಗ್ಗುರುತು ಮೂಡಿಸಿದೆ. ಈ ಎಲ್ಲವುಗಳ ಸಾಲಿಗೆ ಹೊಸ ಸೇರ್ಪಡೆಸೀರಿಯಲ್ ಹಬ್ಬ. ದೀಪಾವಳಿಯ ಸಂದರ್ಭದಲ್ಲಿಧಾರವಾಡದಲ್ಲಿ ನಡೆಸಿದ ಸೀರಿಯಲ್ ಹಬ್ಬದ ಯಶಸ್ಸಿನ ಬೆನ್ನಲ್ಲೇದಾವಣಗೆರೆಯಲ್ಲೂ ಹಬ್ಬದ ಸಂಭ್ರಮವನ್ನಾಚರಿಸಿದೆ.ಈ ‘ಸೀರಿಯಲ್ ಹಬ್ಬ’ಡಿಸೆಂಬರ್ ೧೦(ಭಾನುವಾರ)ರಂದು ಮಧ್ಯಾಹ್ನ ೩ ಗಂಟೆಗೆಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಸಲ ಮುಖ್ಯವಾಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡವರುಕಾವೇರಿ ಮತ್ತುದೊಡ್ಮನೆ ಸೊಸೆ ಧಾರಾವಾಹಿಯತಾರೆಯರು ಮತ್ತುತಂತ್ರಜ್ಞರು. ಬೆಣ್ಣೆದೋಸೆಗೆ ಹೆಸರಾದದಾವಣಗೆರೆಯಲ್ಲಿ ವೀಕ್ಷಕರೊಂದಿಗೆ ಬೆರೆತು ಹಾಡಿ, ಕುಣಿದು ನಲಿದಾಡಿದರು.ಕಾವೇರಿ ಹಾಗೂ ದೊಡ್ಮನೆ ಸೊಸೆ ಎರಡೂ ಧಾರಾವಾಹಿಗಳು ಕೌಟುಂಬಿಕಜೀವನದಕನ್ನಡಿಯ ಬಿಂಬಗಳಾಗಿದ್ದು, ಸಂಬಂಧಗಳ ಸಂಕೀರ್ಣಗಳು ಹಾಗೂ ಮೌಲ್ಯವನ್ನು ಸಾರುತ್ತಿವೆ. ಕಾವೇರಿತ್ಯಾಗಮಯಿ ಹುಡುಗಿಯೊಬ್ಬಳ ಕಥೆಯಾಗಿದ್ದು, ಅವಳ ಆ ಸ್ವಭಾವದಿಂದಲೇ ಸಂಕಷ್ಟಕ್ಕೆ ಸಿಲುಕಿದರೂ, ತನ್ನ ಮೂಲ ಸ್ವಭಾವವನ್ನು ಬಿಡದೇ, ಎಲ್ಲತೊಂದರೆ, ತೊಡಕುಗಳನ್ನೂ ಮೀರಿ, ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾಳೆ ಎಂಬುದುಕಥಾಹಂದರ.

ದೊಡ್ಮನೆ ಸೊಸೆ - ದೊಡ್ಮನೆ ಹೆಸರೇ ಹೇಳುವಂತೆ ಸಂಪತ್ತಿನಲ್ಲೂ, ಶಾಸ್ತ್ರ ಸಂಪ್ರದಾಯದಲ್ಲೂ ನಿಜಕ್ಕೂದೊಡ್ಮನೆಯೇ. ಹೆಣ್ಣುಮಗು ಹುಟ್ಟಿದರೆ, ಅವಳಿಗೆ ಸನ್ಯಾಸ ದೀಕ್ಷೆಕೊಡುವ ಸಂಪ್ರದಾಯವನ್ನು ತಲತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಾರೆ. ಹೀಗಿರುವಾಗ, ಜನ್ಮತಳೆದ ಹೆಣ್ಮಗುವೊಂದನ್ನುಗುಟ್ಟಾಗಿ ಮನೆಯಿಂದ ಹೊರಗೆ ಬಿಡಲಾಗುತ್ತದೆ. ಬೇರೆಯವರಆಶ್ರಯದಲ್ಲಿ ಬೆಳೆದ ಆ ಮಗು ವಿವಿಧ ಘಟನೆಗಳ ತರುವಾಯಇದೇ ಮನೆಗೆ ಸೊಸೆಯಾಗಿ ಬರುತ್ತಾಳೆ. ಹುಟ್ಟಿದ ಮನೆಗೇ ಸೊಸೆಯಾಗಿ ಬರುವ ವಿನೂತನಕಥೆಜನಮಾನಸದಲ್ಲಿಅಚ್ಚೊತ್ತಿ ಕುಳಿತಿದೆ. 
ಸೀರಿಯಲ್ ಹಬ್ಬದಲ್ಲಿ ಪಾಲ್ಗೊಳ್ಳುವ ನಿಮಿತ್ತ ಹೊತ್ತರಳುವ ಮುನ್ನವೇಎರಡೂಧಾರಾವಾಹಿ ತಂಡಗಳು ಬೆಂಗಳೂರಿನಿಂದ ಬಸ್ ಹತ್ತಿದ್ದವು.. ಆಗಲೇ ಎಲ್ಲರಕಣ್ಣಲ್ಲೂ ಹಬ್ಬದ ಸಂಭ್ರಮ. ಹಾಡು, ಕುಣಿತಗಳು ಆಗಲೇ ಶುರುವಾಗಿದ್ದವು. ಒಬ್ಬರ ಬಳಿಕ ಇನ್ನೊಬ್ಬರಂತೆ ಹಾಡುತ್ತಾಕುಣಿಯುತ್ತಾ ಸ್ಪರ್ಧೆಯೇಏರ್ಪಟ್ಟಿತ್ತು. ಹೊರಗೆ ಹೊತ್ತೇರುತ್ತಿದ್ದರೂ, ಸಮಯಜಾರಿದ್ದೇಗೊತ್ತಾಗಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ದಾವಣಗೆರೆ ಬಂದಿತ್ತು. ದಾವಣಗೆರೆತಲುಪುತ್ತಿದ್ದಂತೆ ಸ್ಟೇಜ್‌ರಿಹರ‍್ಸಲ್.. ಸಂಜೆ ನಾಲ್ಕುಗಂಟೆಗೆ ಹಬ್ಬ ಶುರು! ಎಲ್ಲವೂಅಂದುಕೊಂಡಂತೆಆಗಿ.. ಬಹು ನಿರೀಕ್ಷಿತ ಸೀರಿಯಲ್ ಹಬ್ಬ ಶುರುವಾಯಿತು. ಖ್ಯಾತ ನಿರೂಪಕರಾದ ಶಾಲಿನಿ, ನಿರಂಜನ್‌ದೇಶಪಾಂಡೆದಾವಣಗೆರೆಯ ವೀಕ್ಷಕ ಪ್ರಭುಗಳಿಗೆ ಸ್ವಾಗತಕೋರ್ತಿದ್ದಂತೆ ಮುಗಿಲು ಮುಟ್ಟುವ ಚಪ್ಪಾಳೆ ಸಪ್ಪಳ. ಬಹು ನಿರೀಕ್ಷಿತಕಾರ್ಯಕ್ರಮ ಶುರು..
ಸಂವಾದ: ಸೀರಿಯಲ್ ಹಬ್ಬ ಬರೇ ಹಾಡುಕುಣಿತಕ್ಕಷ್ಟೆ ಸೀಮಿತವಾಗಿಲ್ಲ. ವೀಕ್ಷಕರುತಮ್ಮ ಸಂದೇಹಗಳ ಬಗ್ಗೆ ಕಲಾವಿದರು, ತಂತ್ರಜ್ಞರಜತೆ ಸಂವಾದವನ್ನೂ ನಡೆಸಿದರು. ಧಾರಾವಾಹಿಯಕಥೆಯ ಬಗ್ಗೆ ತಮ್ಮಕುತೂಹಲವನ್ನು ಹಂಚಿಕೊಂಡರು. 
ಹೊಸ ಕಾವೇರಿ:  ಕಾವೇರಿಧಾರಾವಾಹಿಯ ಹೊಸ ನಾಯಕಿಯನ್ನುಇದೇ ವೇದಿಕೆ ಮೂಲಕ ವೀಕ್ಷಕರಿಗೆ ಪರಿಚಯಿಸಲಾಯಿತು. ಹೊಸಾ ನಾಯಕಿ ಶೋಭಾ ಪರ್ಫಾರ್ಮೆನ್ಸ್‌ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಬರೇಧಾರಾವಾಹಿ ಕಲಾವಿದರಷ್ಟೇಅಲ್ಲ, ಉದಯ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ, ’ಕಿಲಾಡಿಕಿಡ್ಸ್’ ನ ವಿಜೇತತಂಡದವರು ಪ್ರಸ್ತುತಪಡಿಸಿದ ನೃತ್ಯ ವೀಕ್ಷಕರ ಮನಸೂರೆಗೊಂಡಿತು. 
ಈಗಾಗಲೇ ಕನ್ನಡಕಿರುತೆರೆಯಲ್ಲಿಅದ್ಧೂರಿಯಾಗಿ ಹೆಸರು ಮಾಡಿರುವ ಈ ಎರಡು ಧಾರಾವಾಹಿಗಳು ಅತೀದೊಡ್ಡ ತಾರಾಬಳಗವನ್ನೇ ಹೊಂದಿದೆ. ಅಶ್ವಿನಿ ಗೌಡ, ಸುರೇಶ್‌ರೈ, ಸಂಗೀತಾ ಭಟ್, ವಿನಯ್‌ರಾಮ್ ಪ್ರಸಾದ್, ಶ್ರೀಧರ್ ಸೇರಿದಂತೆಇನ್ನೂ ಅನೇಕ ಹೆಸರಾಂತಕಲಾವಿದರದಂಡೇದಾವಣಗೆರೆಯಲ್ಲಿ ನೆರೆದಿತ್ತು. 

ಸೀರಿಯಲ್ ಹಬ್ಬ ಬರೇ ಹಾಡು, ಕುಣಿತ, ಗಿಮಿಕ್‌ಗಳಷ್ಟೇ ಸೀಮಿತವಾಗಿರಲಿಲ್ಲ. ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆಗೌರವವನ್ನೂ ಸಲ್ಲಿಸಲಾಯಯ್ತು. ಶೈಕ್ಷಣಿಕಕ್ಷೇತ್ರದಲ್ಲಿಕ್ರಾಂತಿಯನ್ನೇ ಮಾಡಿದ ಶಾಸಕ, ಶಾಮನೂರು ಶಿವಶಂಕರಪ್ಪ ಹಾಗೂ ಖ್ಯಾತಜ್ಯೋತಿಷಿ ರವಿಶಂಕರ್‌ಗುರೂಜಿಅವರಿಗೆ ’ಉದಯ ಪುರಸ್ಕಾರ’ ನೀಡಿಗೌರವಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ವಿನುತಾ. ಆರ್ ಇವಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. 

ಅಂದದಚಂದದ‘ಸೀರಿಯಲ್ ಹಬ್ಬ’ ಡಿಸೆಂಬರ್ ೧೦ (ಭಾನುವಾರ) ಮಧ್ಯಾಹ್ನ ೩ ಗಂಟೆಗೆಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಿಸೆಂಬರ್ 10 ರಂದು ಸೀರಿಯಲ್ ಹಬ್ಬ - Chitratara.com
Copyright 2009 chitratara.com Reproduction is forbidden unless authorized. All rights reserved.