Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಿ.ಟಿ.ಎಸ್‌ನಲ್ಲಿ ಕಿಡಿ
Posted date: 13 Thu, Apr 2017 09:10:01 AM

ಮಾಸ್ಟರ್ ಛಾಯ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಟಿ. ನಾಗರಾಜ್ ಅವರು ನಿರ್ಮಿಸುತ್ತಿರುವ ‘ಕಿಡಿ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಆಗುಂಬೆ, ಪುಕ್ಕೆಟ್ ಮುಂತಾದ ಕಡೆ ಐವತ್ತು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯ ಚಾಂಮುಂಡೇಶ್ವರಿ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.

ಮುಂಗಾರು ಮಳೆ ಚಿತ್ರದಿಂದ ನೃತ್ಯ ನಿರ್ದೇಶಕರಾಗಿ ಹೆಸರಾಗಿದ್ದ ಮತ್ತು ಕಳೆದ ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ರಘು ಮಾಸ್ಟರ್ ‘ಕಿಡಿ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಆರ್. ಗಿರಿ ಅವರೊಂದಿಗೆ ಸಹಾಯಕರಾಗಿದ್ದ ಬೆನಕರಾಜು ಛಾಯಾಗ್ರಹಣ, ಎಮಿಲ್ ಸಂಗೀತ ನಿರ್ದೇಶನ ಹಾಗೂ ವಿಶ್ವ ಸಂಕಲನ ‘ಕಿಡಿ‘ ಚಿತ್ರಕ್ಕಿದೆ

ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿರುವ ಭುವನ್ ಚಂದ್ರ ಈ ಹಿಂದೆ ‘ಸಿರಿವಂತ ಚಿತ್ರದಲ್ಲಿ ವಿಷ್ಣು ಅವರ ಹಿರಿಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ವಿಜಯ ರಾಘವೇಂದ್ರ ಅವರೊಂದಿಗೆ ‘ಶ್ರಾವಣ ಚಿತ್ರದಲ್ಲಿ ಎರಡನೇ ನಾಯಕನಾಗಿ ಕೂಡಾ ಅಭಿನಯಿಸಿದ್ದರು. ಭುವನ್ ಚಂದ್ರ ಅವರೊಟ್ಟಿಗೆ ನಾಯಕಿಯಾಗಿ ಪಲ್ಲವಿ ನಟಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಿ.ಟಿ.ಎಸ್‌ನಲ್ಲಿ ಕಿಡಿ - Chitratara.com
Copyright 2009 chitratara.com Reproduction is forbidden unless authorized. All rights reserved.