Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಮಿಳಿನಲ್ಲೂ `ಟಕ್ಕರ್`
Posted date: 18 Thu, Jul 2019 11:57:04 AM

ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಚಿತ್ರ ಟಕ್ಕರ್. ವಿ.ರಘುಶಾಸ್ತ್ರಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ನಾಯಕನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಅನ್ನು ನಿರ್ದೇಶಕ ದಿನಕರ್ ತೂಗುದೀಪ ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿದ್ದರು. ಛಾಲೆಂಜಿಂಗ್ ಸ್ಟಾರ್ ದರ್ಶನ್ ಟೀಸರನ್ನು ಮೆಚ್ಚಿದ್ದರು. ದರ್ಶನ್ ಅವರ ಕುಟುಂಬದಿಂದ ಹೊರಬರುತ್ತಿರುವ ಮನೋಜ್ ಕುಮಾರ್ ಅವರ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಇವರ ನಟನೆಯಲ್ಲಿ ಇನ್ನೂ ಎರಡು ಚಿತ್ರಗಳು ಆರಂಭವಾಗುತ್ತಿದೆ. ಇದರ ಜೊತೆಗೆ ಟಕ್ಕರ್ ಕೂಡಾ ಕನ್ನಡದೊಂದಿಗೆ ತಮಿಳಿನಲ್ಲೂ ಏಕಕಾಲದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ಮೂವತ್ತು ನಿಮಿಷಗಳ ಕಾಲದ ಗ್ರಾಫಿಕ್ಸ್ ಇದ್ದು ಅದಕ್ಕಾಗಿ ನುರಿತ ತಂಡ ಈಗಾಗಲೇ ಕಾರ್ಯ ನಿರ್ವಹಿಸಿದೆ.

ಮೊಬೈಲ್ ಮತ್ತು ಇಂಟರ್‌ನೆಟ್ಟಿನಿಂದ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿವೆ, ಮಹಿಳೆಯರಿಗೆ ಅದು ಹೇಗೆ ಮಾರಕವಾಗುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ಟಕ್ಕರ್ ಚಿತ್ರವನ್ನೂ ರೂಪಿಸಲಾಗಿದೆ. ಪಕ್ಕಾ ಆಕ್ಷನ್, ಸೆಂಟಿಮೆಂಟ್ ಜೊತೆಗೆ ಮಾಸ್ ಚಿತ್ರವಾಗಿ ಟಕ್ಕರ್ ಹೊರಹೊಮ್ಮುತ್ತಿದೆ. ಜಾಗತಿಕ ಸಮಸ್ಯೆಯ ಸುತ್ತ ಚಿತ್ರದ ಕತೆ ಹೆಣೆದಿರುವುದರಿಂದ ತಮಿಳಿನಲ್ಲಿ ಈ ಚಿತ್ರವನ್ನು ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸಲು ನಿರ್ಮಾಪಕ ನಾಗೇಶ್ ಕೋಗಿಲು ತೀರ್ಮಾನಿಸಿದ್ದು “ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆರಂಭವಾಗಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

ಈಟಿವಿ ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಜೈಜಗದೀಶ್ ಜೊತೆಗೆ ಮನೋಜ್ ಕುಮಾರ್ ಮತ್ತು ರಂಜನಿರಾಘವನ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಕದ್ರಿ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ವಿ. ರಘುಶಾಸ್ತ್ರಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಮಿಳಿನಲ್ಲೂ `ಟಕ್ಕರ್` - Chitratara.com
Copyright 2009 chitratara.com Reproduction is forbidden unless authorized. All rights reserved.