ಕಲರ್ಸ್‌ಕನ್ನಡ ವಾಹಿನಿಯ ಕುಲವಧುಧಾರಾವಾಹಿಯಧನ್ಯಾ ಮತ್ತು ವಚನಾ ಎಲ್ಲರಿಗೂ ಮನೆಮಾತಾದ ಹೆಸರುಗಳೇ ವಚನಾಳ ಸಂತೋಷಕ್ಕೋಸ್ಕರ ಏನು ಬೇಕಾದರೂ ಮಾಡುವತ್ಯಾಗಮಯಿಧನ್ಯಾಪ್ರೀತಿಸಿದ ಗಂಡನನ್ನೇ ಅವಳಿಗೆ ಬಿಟ್ಟುಕೊಟ್ಟವಳು. ಈಗ ವಚನಾ ಮತ್ತುಧನ್ಯಾಇಬ್ಬರುಗರ್ಭವತಿಯರಾಗಿದ್ದಾರೆ. ವಚನಾ ತಾಯ್ತನದ ಸಂಭ್ರಮದತುತ್ತತುದಿಯಲ್ಲಿದ್ದರೆ, ಧನ್ಯಾಆತಂಕದೊಡಲಿನಲ್ಲಿದ್ದಾಳೆ.
ವಚನಾ ಹುಚ್ಚು ಹಟದಿಂದತಾನೇ ಮೊದಲುತಾಯಿಯಾಗಬೇಕೆಂದು ಧನ್ಯಾಳಿಂದ ತೆಗೆದುಕೊಂಡ ಭಾಷೆ, ಡಾಕ್ಟರ್ ಹೇಳಿಕೆಯಂತೆ ವಚನಾಳಿಗಿಂತಲೂ ಮೊದಲೇ ಮಗುವಿನ ತಾಯಿಯಾಗುತ್ತಿರುವ ಸತ್ಯ ಧನ್ಯಾಳನ್ನು ಗೊಂದಲಕ್ಕೀಡು ಮಾಡಿದೆ. ಪ್ರತಿಯೊಂದು ಹೆಣ್ಣಿಗೆತಾಯ್ತನವೇ ಅವಳ ಬಾಳಿನ ಮಹತ್ತರಘಟ್ಟ, ಆನಂದ, ಅನುಭವ ಹಾಗೂ ಭಾಗ್ಯ. ಇಂತಹಅನುಭವವನ್ನುಎಲ್ಲರಿಗೂ ಹೇಳಿ ಸಂಭ್ರಮಿಸುವ ಸಮಯದಲ್ಲಿ, ತಾಯಿಯಾಗುತ್ತಿರುವ ಸುದ್ದ್ದಿಯನ್ನೇ ಒಡಲೊಳಗೆ ಬಚ್ಚಿಟ್ಟ ಸತ್ಯಒಂದು ದಿನ ಪ್ರಪಂಚಕ್ಕೆ ತಿಳಿಯಲೇಬೇಕು. ಎಲ್ಲಿಯವರೆಗೂಧನ್ಯಾ ಈ ಸತ್ಯವನ್ನು ಮುಚ್ಚಿಡುತ್ತಾಳೆ? ಈ ಸತ್ಯ ವಚನಾಳಿಗೆ ತಿಳಿದರೆ ಪರಿಸ್ಥಿತಿ ಹೇಗಿರುತ್ತದೆ? ವಚನಾಳ ಸ್ವಾರ್ಥ ಧನ್ಯಾಳ ಬಾಳಿಗೆ ಮತ್ಯಾವ ಸವಾಲೊಡ್ಡುತ್ತದೆ? ತನ್ನಜೀವನದಎಲ್ಲ ಸಂತೋಷವನ್ನು ಬಿಟ್ಟು ಅವಳ ಖುಷಿಯನ್ನೇತನ್ನ ಖುಷಿ ಎಂದುಕೊಂಡಿದ್ದಧನ್ಯಾತಾಯ್ತನವನ್ನೇ ತ್ಯಾಗಮಾಡುತ್ತಾಳೆಯೇ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ನೋಡುಗನ ಭಾವನೆಗಳಿಗೆ ಹತ್ತಿರವಾಗುತ್ತಿದೆಕತೆ.
ಧನ್ಯಾಳ ಬದುಕಿನತಾಯ್ತನದತಲ್ಲಣವನ್ನು ತಿಳಿಯಲು ಮಿಸ್ ಮಾಡ್ದೇ ನೋಡಿ "ಕುಲವಧು" ಧಾರಾವಾಹಿ, ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ನಿಮ್ಮ ಕಲರ್ಸ್‌ಕನ್ನಡ ವಾಹಿನಿಯಲ್ಲಿ ಮಾತ್ರ!