Chief Editor
Manohar. R (Manu)
Photo Journalist
chitrataramanu@gmail.com
+91 9845549026
ದರ್ಶನ್ ಕುಟುಂಬದ ಮನೋಜ್ ಅಭಿನಯದ ಟಕ್ಕರ್‌ಗೆ ಚಾಲನೆ
Posted date: 26 Thu, Apr 2018 01:49:00 PM
 
ನಾಗೇಶ್ ಕೋಗಿಲು ಅವರ ನಿರ್ಮಾಣದ ಎರಡನೇ ಚಿತ್ರ ಟಕ್ಕರ್, ಮೊನ್ನೆ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ನಡೆದ ಸರಳ ಪೂಜೆಯೊಂದಿಗೆ ಆರಂಭವಾಯಿತು.  ಚಕ್ರವರ್ತಿ ಖ್ಯಾತಿಯ ಎ.ವಿ. ಚಿಂತನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದ ನಾನಾ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ, ಯಲಹಂಕ ಬಳಿಯ ಕೋಗಿಲು ಮೂಲದ ನಾಗೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಸ್.ಎಲ್.ಎನ್. ಕ್ರಿಯೇಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದವರ್ಷವಷ್ಟೇ ಹುಲಿರಾಯ ಎಂಬ ಸಿನಿಮಾವನ್ನು ಅವರು  ನಿರ್ಮಿಸಿದ್ದರು.
 
ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಅಭಿನಯದ ರನ್ ಆಂಟನಿ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ಈ ಚಿತ್ರಕ್ಕೆ ಆಯಕ್ಷನ್-ಕಟ್ ಹೇಳುತ್ತಿದ್ದಾರೆ. ಎಪ್ಪತ್ತೈದಕ್ಕೂ ಹೆಚ್ಚು ಜನಪ್ರಿಯ ಹಾಡುಗಳನ್ನು ರಚಿಸಿರುವ ಇವರು, ತೆರೆಗೆ ಬರಲು ಸಿದ್ದಗೊಳ್ಳುತ್ತಿರುವ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಸೆಲ್ಫಿ ಚಿತ್ರಕ್ಕೆ ಸಂಭಾಷಣೆಯನ್ನೂ ಸಹ ರಚಿಸಿದ್ದಾರೆ. ‘ಟಕ್ಕರ್ ಸಿನಿಮಾಗೆ ಕತೆ, ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
 
ಕರ್ನಾಟಕ ಮಾತವಲ್ಲದೆ ಜಗತ್ತಿನ ಎಲ್ಲ ಭಾಗಗಳಲ್ಲಿ ಅಪಾರ ಅಭಿಮಾನಿವರ್ಗವನ್ನು ಹೊಂದಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬದ ಕುಡಿ ಮನೋಜ್. ದರ್ಶನ್ ಅವರು ನಾಯಕನಟನಾಗಿ ನಟಿಸಿದ್ದ ಅಂಬರೀಶ ಮತ್ತು ಚಕ್ರವರ್ತಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಮನೋಜ್ ನಾಯಕನಟನಾಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ ಟಕ್ಕರ್. ದರ್ಶನ್ ಅವರ ಕುಟುಂಬದ ಹುಡುಗ ಎಂಬ ಕಾರಣದ ಜೊತೆಗೆ ಅಪಾರ ಪ್ರತಿಭಾವಂತರೂ ಆಗಿರುವ ಮನೋಜ್ ಟಕ್ಕರ್ ಸಿನಿಮಾದ ನಾಯಕನಟರಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
 
ಪುಟ್ಟಗೌರಿ ಮದುವೆ ಎನ್ನುವ ಕಿರುತೆರೆ ಧಾರಾವಾಹಿನ ಮೂಲಕ ಕರ್ನಾಟಕದ ಮನೆಮಗಳಾಗಿರುವ ಹುಡುಗಿ ರಂಜನಿ ರಾಘವನ್. ರಾಜಹಂಸ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾರಂಕ್ಕೆ ಬಂದಿರುವ ರಂಜನಿ ನಟನೆಯ ಎರಡನೇ ಸಿನಿಮಾ ಟಕ್ಕರ್. ಧಾರಾವಾಹಿಗಳಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ರಂಜನಿ ರಾಘವನ್ ‘ಟಕ್ಕರ್ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪ್ರೇಕ್ಷಕವಲಯದಲ್ಲೂ ಕೌತುಕ ಸೃಷ್ಟಿಸಿದೆ.
ಜಟ್ಟ, ಅಮರಾವತಿ, ಗೊಂಬೆಗಳ ಲವ್, ಬ್ಯೂಟಿಫುಲ್ ಮನಸುಗಳು, ಮಡಮಕ್ಕಿ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಅಭಿರುಚಿಯ ಸಿನಿಮಾಗಳು ಎನಿಸಿಕೊಂಡ ಸಾಕಷ್ಟು ಚಿತ್ರಗಳಿಗೆ ಕ್ಯಾಮೆರಾ ಕೆಲಸ ನಿಭಾಯಿಸಿರುವವರು ಕಿರಣ್ ಹಂಪಾಪುರ. ಹೊಸ ಬಗೆಯ ಛಾಯಾಗ್ರಹಣದೊಂದಿಗೆ ನೈಜವಾಗಿ ದೃಷ್ಯಗಳನ್ನು ಕಟ್ಟಿಕೊಡುವ ಮಾಂತ್ರಿಕ ಛಾಯಾಗ್ರಾಹಕ ಕಿರಣ್ ಹಂಪಾಪುರ ಟಕ್ಕರ್ ಚಿತ್ರದ ಕಣ್ಣಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 
ಪೃಥ್ವಿ, ಸವಾರಿ, ಮಾರ್ಚ್ ೨೨, ರನ್ ಆಂಟನಿ ಮುಂತಾದ ಯಶಸ್ವೀ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ತಮ್ಮ ಸಿನಿಮಾಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಬರುವಲ್ಲಿ ಶ್ರಮಿಸಿರುವ ಉದಯೋನ್ಮುಖ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ವಿಶ್ವವಿಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪುತ್ರನಾಗಿರುವ ಮಣಿಕಾಂತ್ ಕನ್ನಡ ಚಿತ್ರರಂಗದ ಹೆಮ್ಮೆಯ ಸಂಗೀತ ನಿರ್ದೇಶಕ. ಇಂಥ ಪ್ರತಿಭಾವಂತ ಮ್ಯೂಸಿಕ್ ಡೈರೆಕ್ಟರ್ ಈಗ ಟಕ್ಕರ್ ಸಿನಿಮಾದ ಮೂಲಕ ಹೊಸ ಬಗೆಯ ಹಾಡುಗಳಿಗೆ ಸ್ವರ ಸಂಯೋಜಿಸುತ್ತಿದ್ದಾರೆ.
 
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಸಂಭಾಷಣೆ ರಚಿಸಿ, ಅಭಿಮಾನಿಗಳನ್ನು ಅಪಾರವಾಗಿ ರಂಜಿಸಿದವರು ಸಂಭಾಷಣೆಕಾರ ಚಿಂತನ್. ಅವರು ಟಕ್ಕರ್ ಸಿನಿಮಾಗೆ ಸಂಭಾಷಣೆ ರಚಿಸಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ಯಶಸ್ವೀ ಮತ್ತು ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೆ ಸಂಕಲ ಕೆಲಸ ನಿರ್ವಹಿಸುತ್ತಾ ಬಂದಿರುವ ಕೆ.ಎಂ. ಪ್ರಕಾಶ್ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಟಕ್ಕರ್ ಸಿನಿಮಾಗಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದರ್ಶನ್ ಕುಟುಂಬದ ಮನೋಜ್ ಅಭಿನಯದ ಟಕ್ಕರ್‌ಗೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.