Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಿಯಾ ನಾಯಕನ ನೂತನ‌ ಚಿತ್ರ For Regn ‍
Posted date: 22 Sun, Mar 2020 08:44:42 AM
ಇತ್ತೀಚೆಗೆ ಕನ್ನಡ‌‌ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ದಿಯಾ... ಈ ಚಿತ್ರದಲ್ಲಿ ನಾಯಕನಾಗಿ‌ ನಟಿಸಿದ್ದ ಪೃಥ್ವಿ ಅಂಬರ್ ಅಭಿನಯಿಸುತ್ತಿರುವ For regn ಚಿತ್ರ ಮೇ ತಿಂಗಳಿಂದ ಆರಂಭವಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
 
ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ ಕೂಡ ನಿರ್ದೇಶಕರದೆ... ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಅವರಿಗೆ ಸುಮಾರು ೫, ೬ ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ...
 
ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್ ಸಂಗೀತ ನಿರ್ದೇಶನ For regn ಚಿತ್ರಕ್ಕಿದೆ..

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಿಯಾ ನಾಯಕನ ನೂತನ‌ ಚಿತ್ರ For Regn ‍ - Chitratara.com
Copyright 2009 chitratara.com Reproduction is forbidden unless authorized. All rights reserved.