Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೃವಸರ್ಜಾ ರಿಂದ ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ
Posted date: 09 Wed, Oct 2019 12:50:01 PM

ಇಬ್ಬರು ಸ್ನೇಹಿತರು ಹಾಗೂ ಯುವತಿಯ ನಡುವಿನ ತ್ರಿಕೋನ ಪ್ರೇಮ ಕಥಾ ಹಂದರ ಹೊಂದಿರುವ ಮಹಿಷಾಸುರ ಚಿತ್ರದ ಬಹುತೇಕ ಕೆಲಸಗಳು ಈಗಾಗಲೇ ಮುಕ್ತಾಯ ಹಂತದಲ್ಲಿದ್ದು ಮೊನ್ನೆ ದೃವ ಸರ್ಜಾ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ದಸರಾ ಹಬ್ಬದ ಕೊಡಿಗೆಯಾಗಿ ಚಿತ್ರದ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಲಾಯಿತು.  ನಟ ದೃವ ಸರ್ಜಾರವರು ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿ ಹಾಡು ತುಂಬಾ ಚೆನ್ನಾಗಿದೆ ಅದೇ ರೀತಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.  ಉದಯ ಪ್ರಸನ್ನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿದಶನ ಮಾಡಿದ್ದಾರೆ. ಪ್ರೀತಿಸಿದ ಹುಡುಗಿಗಾಗಿ ಮಹಿಷಾಸುರನಾಗುವ ಯುವಕ ಇಬ್ಬರಲ್ಲಿ ಯಾರಾಗುತ್ತಾರೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.  ಸದ್ಯದಲ್ಲೇ ಸೆನ್ಸಾರ್‌ಗೆ ತೆರಳಿರುವ ಮಹಿಷಾಸುರ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಮೆಳೇಕೋಟೆ  ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಶ್ರೀಮತಿ. ಲೀಲಾವತಿ ಸುರೇಶ್ ಕುಮಾರ್, ಶ್ರೀಮತಿ. ಪ್ರೇಮ ಚಂದ್ರಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಆರ್.ಆರ್.ರಾಘವೇಂದ್ರ, ಸಾಯಿಕಿರಣ್, ಸುನೀಲ್ ಜೋಷಿ ಸಂಗೀತ, ರಾಕಿ ರಮೇಶ್ ಸಾಹಸ, ವೆಂಕಿ ಯು.ಡಿ.ವಿ. ಸಂಕಲನ, ವೇಣು ಸಾಹಿತ್ಯ, ಸುಜೀತ್- ಕಿಶೋರ್ ನೃತ್ಯ ನಿರ್ದೇಶನವಿದೆ.  ರಾಜ್ ಮಂಜು, ಬಿಂದುಶ್ರೀ, ಸುದರ್ಶನ್, ರಘುಪಾಂಡೆ, ಶ್ವೇತ, ರಾಕ್‌ಲೈನ್ ಸುಧಾಕರ್, ತುಷಾರ್, ಶ್ರೀನಿವಾಸಚಾರಿ, ರವೀಂದ್ರ, ಚಂದ್ರಣ್ಣ, ರವಿ ಮೆಳೇಕೋಟೆ ಇನ್ನೂ ಮುಂತಾದವರ ತಾರಾಬಳಗವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೃವಸರ್ಜಾ ರಿಂದ ಮಹಿಷಾಸುರ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.