Chief Editor
Manohar. R (Manu)
Photo Journalist
chitrataramanu@gmail.com
+91 9845549026
ಧಾರಾವಾಹಿ ಕಲಾವಿದರಿಂದ ಡಾನ್ಸ್ ಕರ್ನಾಟಕ ಡಾನ್ಸ್
Posted date: 08 Tue, Aug 2017 12:13:45 PM
  ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮ  ‘ಡಾನ್ಸ್ ಕರ್ನಾಟಕ ಡಾನ್ಸ್’ ಈಗ ಮತ್ತೆ  ಶುರುವಾಗ್ತಿದೆ. ಕನ್ನಡಿಗರನ್ನು ರಂಜಿಸುವ ನಿಟ್ಟಿನಲ್ಲಿ ಸದಾ ವಿನೂತನ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ಜೀ ಕನ್ನಡ ವಾಹಿನಿ   ಈಗ ಡಾನ್ಸ್ ಕರ್ನಾಟಕ ಡಾನ್ಸ್‌ನ ಎರಡನೇ ಅವತರಣಿಕೆಯನ್ನು ಆರಂಭಿಸುತ್ತಿದೆ. ಈ ಸಲದ ಕಾರ್ಯಕ್ರಮ ತುಸು ವಿಭಿನ್ನವಾಗಿದ್ದು, ಧಾರಾವಾಹಿಗಳ ಮೂಲಕವಷ್ಟೇ ನೋಡುತ್ತಿದ್ದ ಕಲಾವಿದರಲ್ಲಿ ಅಡಗಿರುವ ಮತ್ತೊಂದು ಪ್ರತಿಭೆಯನ್ನು ನೋಡುವ ಅವಕಾಶ ಇಲ್ಲಿ ವೀಕ್ಷಕರಿಗೆ ಸಿಗಲಿದೆ.  ಈ ಬಾರಿಯ ಡಾನ್ಸ್‌ನ ಕಲ್ಪನೆಯೇ ವಿಭಿನ್ನವಾಗಿದ್ದು, ಇಲ್ಲಿ ಜೀ ಕುಟುಂಬದ ಬಹುತೇಕ ಕಲಾವಿದರು ಭಾಗವಹಿಸುತ್ತಿದ್ದಾರೆ. ವಿವಿಧ ಧಾರಾವಾಹಿಗಳ  ಕಲಾವಿದರೆ ಒಟ್ಟಿಗೆ ಸೇರಿ ಇಲ್ಲಿ ಭಾಗವಹಿಸುತ್ತಿದ್ದು,  ಅವರೆಲ್ಲಾ ತಮ್ಮ  ನೃತ್ಯಪ್ರದರ್ಶನದಿಂದ ವೀಕ್ಷಕರ ಮನರಂಜಿಸಲಿzರೆ.
 
ಈ ಎರಡನೇ ಸೀಸನ್‌ನ್ನು  ಜೀ ಕುಟುಂಬದ ನೃತ್ಯದ ಹಬ್ಬ ಎಂದೇ ಹೇಳಬಹುದು. ಇಲ್ಲಿ ಜೀ ಕನ್ನಡದ ಬೇರೆ ಬೇರೆ ಕಾರ್ಯಕ್ರಮಗಳ ನಾಯಕ ನಾಯಕಿಯರು, ಗಾಯಕರು, ಡ್ರಾಮಾ ಜೂನಿಯರ‍್ಸ್ ಮಕ್ಕಳು ಅಲ್ಲದೆ ಕಾಮಿಡಿ ಕಿಲಾಡಿಗಳು ಇವರೆಲ್ಲಾ ಇದರಲ್ಲಿ  ಭಾಗವಹಿಸುವುದರಿಂದ ಇದೊಂದು ಫ್ಯಾಮಿಲಿ ವಾರ್ ಎಂದೇ ಹೇಳಬಹುದು. ಇಲ್ಲಿ ಮುಖ್ಯವಾಗಿ ಕಿರುತೆರೆ ಕಲಾವಿದರ ಮಧ್ಯೆಯಷ್ಟೇ ಪೈಪೋಟಿ ನಡೆಯುತ್ತಿರುವುದರಿಂದ, ಇದರಲ್ಲಿ ಬಹುತೇಕರು ಡಾನ್ಸ್‌ನಲ್ಲಿ ಪಳಗಿದವರಾಗಿರುವುದಿಲ್ಲ.  ಆದರೂ ತಮಗೆ ತಿಳಿದ ಪ್ರಾಕಾರದಲ್ಲಿ ಕುಣಿಯುತ್ತ  ಮನಸ್ಸಿಗೆ ಮುದ ನೀಡುವುದಂತೂ ಗ್ಯಾರಂಟಿ. ಡಾನ್ಸ್ ಕರ್ನಾಟಕ ಡಾನ್ಸ್‌ನ ಈ ಸೀಸನ್ನಿನ  ತೀರ್ಪುಗಾರರಾಗಿ ನಟ ವಿಜಯ ರಾಘವೇಂದ್ರ, ಅರ್ಜುನ್ ಜನ್ಯ ಹಾಗು ರಕ್ಷಿತಾ ಪ್ರೇಮ್ ಭಾಗವಹಿಸುತ್ತಿzರೆ. 
 
ಅಲ್ಲದೆ ಈ ಸೀಸನ್ನಿನಲ್ಲಿ ಸ್ಪರ್ಧಿಗಳಾಗಿ ಒಟ್ಟು ೧೧ ತಂಡಗಳು ಭಾಗವಹಿಸುತ್ತಿವೆ. ನಾಗಿಣಿ ಧಾರಾವಾಹಿಯ ಅರ್ಜುನ್ ಮತ್ತು ಅಮೃತ, ಶ್ರೀಮಾನ್ ಶ್ರೀಮತಿ ಧಾರಾವಾಹಿಯ ಗೌಡ್ರು ಮತ್ತು ಮಧುರ, ಪತ್ತೇದಾರಿ ಪ್ರತಿಭಾ ಧಾರಾವಾಹಿಯಿಂದ ಪ್ರತಿಭಾ ಮತ್ತು ಪ್ರಶಾಂತ್, ಬ್ರಹ್ಮಗಂಟು ಧಾರಾವಾಹಿಯ ಗೀತಾ ಮತ್ತು ಲಕ್ಕಿ, ಜೋಡಿಹಕ್ಕಿಯ ರಾಮ ಹಾಗೂ ಜಾನಕಿ, ಜನುಮದ ಜೋಡಿಯಿಂದ ಸಂಜು ಮತ್ತು ವಸುಂಧರ, ಸರಿಗಮಪ ಜೂನಿಯರ‍್ಸ್ ತಂಡದಿಂದ ವೇಣುಗೋಪಾಲ ಮತ್ತು ಸಾನ್ವಿ, ಸರಿಗಮಪ ಸೀನಿಯರ‍್ಸ್‌ನಿಂದ  ಸುನಿಲ ಹಾಗೂ ಇಂಪನ, ಕಾಮಿಡಿ ಕಿಲಾಡಿಗಳು ತಂಡದಿಂದ ಶಿವರಾಜ ಮತ್ತು ನಯನ, ಡ್ರಾಮಾ ಜೂನಿಯರ‍್ಸ್‌ನಿಂದ ತುಷಾರ್ ಹಾಗೂ ಅಮೋಘ, ಹಾಗೂ ವಿಶೇಷ ಜೋಡಿಯಾಗಿ ನಿಹಾಲ ಹಾಗೂ ಅಂಜಲಿ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿ ಪೈಪೋಟಿ ನಡೆಸಲಿzರೆ.
 
ಒಟ್ಟಾರೆ ಇದನ್ನು ಪ್ರತಿವಾರ ಜೀ ಕುಟುಂಬ ಒಟ್ಟಿಗೆ ಸೇರಿ ನಡೆಸುವ ಡ್ಯಾನ್ಸ್ ಹಬ್ಬ, ಡಾನ್ಸ್‌ನ ಫ್ಯಾಮಿಲಿ ವಾರ್ ಎಂದೇ ಹೇಳಬಹುದು. ಡಾನ್ಸ್ ಕರ್ನಾಟಕ ಡಾನ್ಸ್‌ನ ಈ ಫ್ಯಾಮಿಲಿ ವಾರ್ ಇದೇ ಶನಿವಾರ ಮತ್ತು ಭಾನುವಾರ ಸಂಜೆ ೭.೩೦ರಿಂದ ಪ್ರತಿ ವಾರ ಪ್ರಸಾರವಾಗಲಿದೆ. ಅಲ್ಲದೆ ಇದರ ಮೊದಲ ಸಂಚಿಕೆ ಇದೇ ಶನಿವಾರ ಸಂಜೆ  ಬಿತ್ತರಗೊಳ್ಳಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಧಾರಾವಾಹಿ ಕಲಾವಿದರಿಂದ ಡಾನ್ಸ್ ಕರ್ನಾಟಕ ಡಾನ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.