Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಂದಿನಿಯಲ್ಲಿ ಮಾಸ್ಟರ್ ಪೀಸ್ಸಾನ್ವಿ ಶ್ರೀವಾತ್ಸವ್
Posted date: 19 Fri, Jul 2019 06:37:21 PM

ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ "ನಂದಿನಿ" ಧಾರಾವಾಹಿಯು 700 ಕಂತುಗಳತ್ತ ಸಾಗುತ್ತಿದ್ದರೂ, ಇನ್ನೂ ಹೊಚ್ಚ ಹೊಸ ಕಥೆಯಂತೆತನ್ನ ಪ್ರೇಕ್ಷಕರನ್ನುರಂಜಿಸುತ್ತಾ ಹಿಡಿದಿಡುವುದರಲ್ಲಿ ಯಶಸ್ವಿಯಾಗಿದೆ. ನಂದಿನಿ ಧಾರಾವಾಹಿಯು ಸದಾಅದ್ಭುತ ದೃಶ್ಯಗಳು, ಭವ್ಯತಾರಾಗಣ ಮತ್ತುರೋಚಕ ತಿರುವುಗಳೊಂದಿಗೆ ಹೊರಹೊಮ್ಮುತ್ತಲೇಇದೆ. ಇದೀಗ ನಂದಿನಿ ಕಥೆಯುಅಂತಹುದೇಒಂದುಕುತೂಹಲಕಾರಿಘಟ್ಟತಲುಪಿದೆ.
ಕಥಾನಾಯಕಿಜನನಿ ತಾನು ಇಷ್ಟ ಪಡುತ್ತಿರುವುದು ನಾಯಕ ವಿರಾಟ್‌ನನ್ನು, ಆದರೆ ಅವಳ ಮದುವೆ ನಿಶ್ಚಯಆಗುತ್ತಿರುವುದು ಮಾತ್ರ ಖಳನಾದ ಡಾಕ್ಟರ್‌ರಾಮ್ ಎಂಬುವನ ಜೊತೆ. ಸೋಜಿಗವೆಂದರೆಇದು ಸ್ವತ: ಜನನಿಗೇ ತಿಳಿದಿಲ್ಲ. ಜನನಿ ಇಷ್ಟ ಪಡುತ್ತಿರುವುದುರಾಮ್‌ನನ್ನುಎಂದು ಭಾವಿಸಿ ಮನೆಯವರುಅದ್ದೂರಿಯಾಗಿ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದಾರೆ. ಕಥೆಯುರೋಚಕವಾಗುವುದೇಇಲ್ಲಿ. ಮಾಯಾಂಗಿನಿಯಾದ ಶರಭಾಜನನಿಯರೂಪ ತಳೆದು, ಜನನಿಯಾಗಿರಾಮ್ ನನ್ನು ಪ್ರೀತಿಸುವಂತೆ ನಟಿಸಿ, ಕಡೆಗೆತನ್ನಚಿಕ್ಕಪ್ಪನಾದ ಪುರುಷೋತ್ತಮನ ಬಳಿ ತನ್ನ ಮನದಾಸೆಯನ್ನು ಹೇಳಿಕೊಂಡು ಮದುವೆಯನ್ನೂ ನಿಶ್ಚಯಿಸಿಕೊಂಡಿರುತ್ತಾಳೆ. ಇದಾವುದರಅರಿವೂಇಲ್ಲದಜನನಿ ತಾನುಕಥಾನಾಯಕನಾದ ವಿರಾಟ್‌ನನ್ನು ಪ್ರೀತಿಸುತ್ತಿದ್ದಾಳೆ. ತನ್ನ ಮದುವೆಯ ಬಗ್ಗೆ ಪುರುಷೋತ್ತಮ ಮಾತನಾಡಿದಾಗ, ಸಹಜವಾಗಿಯೇಅದು ವಿರಾಟ್‌ಜೊತೆಗೆಂದು ತಿಳಿದಿರುವ ಜನನಿಗೆ, ಶರಭಾ ಸೃಷ್ಟಿಸಿರುವ ಮಾಯಾಜಾಲದಅರಿವೇಇಲ್ಲ. ಶರಭಾ ಮತ್ತುಡಾ. ರಾಮ್‌ಇಬ್ಬರೂ ಸೇರಿಜನನಿಯ ಬಳಿಯಿರುವ ನಾಗಮಣಿಯನ್ನು ವಶಪಡಿಸಿಕೊಳ್ಳಬೇಕೆಂಬ ಹುನ್ನಾರವೇಇದಕ್ಕೆಲ್ಲ ಮೂಲ ಕಾರಣ. ನಿಶ್ಚಿತಾರ್ಥದ ಕಂತುಗಳಲ್ಲಿ ತೆರೆಯ ಮೇಲೆ ಇಬ್ಬಿಬ್ಬರುಜನನಿಯರು ಬರುವರೋಮಾಂಚನ ದೃಶ್ಯಗಳು ವೀಕ್ಷಕರನ್ನುರಂಜಿಸುವುದರಲ್ಲಿ ಸಂಶಯವೇಇಲ್ಲ.
ಈಗ ಶರಭಾಅಂದುಕೊಂಡಂತೆ, ಜನನಿ ಮತ್ತುಡಾಕ್ಟರ್‌ರಾಮ್‌ನ ನಿಶ್ಚಿತಾರ್ಥದ ದಿನ ಬಂದಿದೆ. ಆದರೆ ಖಳನಾಯಕಿ ನೀಲಿ ನಾಯಕ ವಿರಾಟ್‌ನನ್ನು ಬಲವಂತವಾಗಿ ಮದುವೆಯಾಗುವಆಸೆಯಲ್ಲಿಅವನ್ನುಕಿಡ್ನಾಪ್ ಮಾಡಿಸಿ ಬಂಧಿಸಿಟ್ಟಿದ್ದಾಳೆ. ಒಂದೆಡೆಜನನಿ ತಾನುತಾನಿಷ್ಟ ಪಟ್ಟ ವಿರಾಟ್‌ನನ್ನೇಮಾದುವೆಯಾಗುತ್ತೇನೆಂಬ ಆಸೆಯಲ್ಲಿ ನಿಶ್ಚಿತಾಥಕ್ಕೆ ಸಿದ್ಧವಾಗುತ್ತಿದ್ದರೆ, ಕಿಡ್ನಾಪ್‌ಆಗಿರುವ ನಾಯಕ ವಿರಾಟ್ ಬಂಧನದಿಂದ ಬಿಡಿಸಿಕೊಳ್ಳುವ ಸಾಹಸದಲ್ಲಿದ್ದಾನೆ.
ಜನನಿ ಮತ್ತುಡಾ.ರಾಮ್‌ನ ನಿಶ್ಚಿತಾರ್ಥ ನಿಜವಾಗಿಯೂ ನಡೆದೇ ಬಿಡುತ್ತದೆಯೇ ಎಂಬ ಕುತೂಹಲಕಾರಿ ಸನ್ನಿವೇಶದಲ್ಲಿ, ಕಥೆಗೆತಿರುವುಕೊಡಲೆಂದೇಕನ್ನಡ ಸಿನೆಮಾ ನಟಿ, ಮಾಸ್ಟರ್‌ಪೀಸ್‌ಖ್ಯಾತಿಯ ಸಾನ್ವಿ ಶ್ರೀವಾತ್ಸವ್ ಎಂಟ್ರಿಕೊಟ್ಟಿದ್ದಾರೆ.
ವಾರಣಾಸಿ ಮೂಲದ ಈ ಚೆಲುವೆ, ಕನ್ನಡದಲ್ಲಿ?ಚಂದ್ರಲೇಖ?ದಲ್ಲಿನಾಯಕಿಯಾಗಿಎಂಟ್ರಿಕೊಟ್ಟುತನ್ನನಟನೆಯಿಂದಜನಮನಸೆಳೆದುಸತತವಾಗಿನಟಿಸುತ್ತಿರುವ ಈ ಮೋಹಕನಟಿ, ?ಮಾಸ್ಟರ್‌ಪೀಸ್?ನಡ್ಯುಯಟ್‌ಟಪಾಂಗುಚಿ?ಐಕಾಂಟ್‌ವೈಟ್‌ಬೇಬಿ?ಮೂಲಕತಮ್ಮನೃತ್ಯ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿದ್ದಾರೆ.
ಕತೆಯಲ್ಲಿಡಾ.ರಾಮ್‌ಕುಟುಂಬಕ್ಕೆ ಹತ್ತಿರವಿರುವ ಶಾನ್ವಿ, ತನ್ನ ಮೋಹಕ ಚೆಲುವಿಂದ, ಸಖತ್ ಸ್ಮೈಲಿನಿಂದ, ತಮ್ಮ ಹಾಡುಕುಣಿತದಿಂದಇಡೀ ನಿಶ್ಚಿತಾರ್ಥದ ಕಳೆಯನ್ನೇ ಇಮ್ಮಡಿಗೊಳಿಸಲಿದ್ದಾರೆ. ಇದಷ್ಟೇಅಲ್ಲದೆ, ಕಥೆಯಒಂದು ಮುಖ್ಯವಾದತಿರುವಿಗೆಕಾರಣವಾಗಲಿದ್ದಾರೆ ಶಾನ್ವಿ. ತೆರೆಯ ಮೇಲೆ ಅದ್ದೂರಿಯಾಗಿತಯಾರಾಗಿರುವ ವೇದಿಕೆ, ಡ್ಯಾನ್ಸ್ ಪರ್‌ಫಾರ್‌ಮೆನ್ಸ್‌ಗಳು ಮತ್ತು ಹೈಡ್ರಾಮಾ ಸನ್ನಿವೇಶಗಳೊಂದಿಗೆ "ನಂದಿನಿ" ಧಾರಾವಾಹಿಯ ಕಂತುಗಳು ನಿಮ್ಮ ಮುಂದೆ ಬರಲಿದೆ
ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ 8.30ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಂದಿನಿಯಲ್ಲಿ ಮಾಸ್ಟರ್ ಪೀಸ್ಸಾನ್ವಿ ಶ್ರೀವಾತ್ಸವ್ - Chitratara.com
Copyright 2009 chitratara.com Reproduction is forbidden unless authorized. All rights reserved.