Chief Editor
Manohar. R (Manu)
Photo Journalist
chitrataramanu@gmail.com
+91 9845549026
ನೀವು ಕರೆ ಮಾಡಿರುವ ಚಂದಾದಾರರು ಬಿಜ಼ಿಯಾಗಿದ್ದಾರೆಗೆ ಭವ್ಯಾ ಬಂದಿದ್ದಾರೆ...
Posted date: 20 Wed, Sep 2017 04:17:08 PM
ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೊಂದರಂತೆ ಹೊಸಾ ಆಲೋಚನೆಯ, ಹೊಸಾ ಅಲೆಯ ಚಿತ್ರಗಳ ಪರ್ವ ಆರಂಭವಾಗಿದೆ. ಇಂಥಾ ಸಾಲಿಗೆ ಸೇರುವ ಎಲ್ಲ ಲಕ್ಷಣಗಳೂ ಇರುವ ‘ನೀವು ಕರೆ ಮಾಡಿರುವ ಚಂದಾದಾರರು ಬಿಜ಼ಿಯಾಗಿದ್ದಾರೆ. ಎಂಬ ಚಿತ್ರ ಅಕ್ಟೋಬರ್ ೧೦ರಿಂದ ಆರಂಭವಾಗಲಿದೆ. 
 
ಹೆಸರಲ್ಲಿಯೇ ಪಾಸಿಟಿವ್ ಅಲೆ ಹೊಂದಿರೋ ಈ ಚಿತ್ರ ಪ್ಲಸ್ ಸರ್ವೇಸ್ ಮೂವೀಸ್ ಲಾಂಛನದಡಿಯಲ್ಲಿ ಮೂಡಿ ಬರಲಿದೆ. ಅಗಾಧವಾದ ಸಿನಿಮಾ ಪ್ರೇಮ ಮತ್ತು ಒಂದೊಳ್ಳೆ ಚಿತ್ರ ಮಾಡಬೇಕೆಂಬ ಕನಸು ಹೊತ್ತಿರೋ ಮಧುಸೂಧನ್ ತಮ್ಮ ಗೆಳೆಯರ ತುಂಬು ಸಹಕಾರದೊಂದಿಗೆ, ಅವರ ಜೊತೆಗೂಡಿಯೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
 
ಆಧುನಿಕ ಜಂಜಡಗಳ ಪರಿಣಾಮವಾಗಿ ಸವಕಲಾಗುತ್ತಿರೊ ಸಂಬಂಧಗಳ ಸುತ್ತಾ ಒಂದು ಚೆಂದದ ಕಥೆ ಹೆಣೆದು ಈ ಚಿತ್ರವನ್ನು ನಿರ್ದೇಶನ ಮಾಡಲು ತಯಾರಾಗಿರುವವರು ಸ್ಯಾಮ್‌ವೆಲ್ ಟೋನಿ. ಈ ಹಿಂದೆ ದೂದ್‌ಸಾಗರ್ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಟೋನಿ ಅವರಿಗಿದು ಎರಡನೇ ಚಿತ್ರ.
 
ದೇವರಾಜ್, ಶೃತಿ, ತಾರಾ, ತಿಥಿ ಖ್ಯಾತಿಯ ಪೂಜಾ, ಶೀತಲ್ ಶೆಟ್ಟಿ ಮುಂತಾದವರ ತಾರಾಗಣ ಹೊಂದಿರೋ ಈ ಚಿತ್ರಕ್ಕೆ ಹಿರಿಯ ನಟಿ ಭವ್ಯ ಸೇರ್ಪಡೆಯಾಗಿದ್ದಾರೆ.  ಕಥಾ ಹಂದರ ಕೂಡಾ ಟೈಟಲ್ಲಿಗೆ ತಕ್ಕ ಹಾಗಿದೆಯಂತೆ. ಇದು ಹೇಳಿ ಕೇಳಿ ಸ್ಪೀಡು ದುನಿಯಾ. ಇಲ್ಲಿ ಎಲ್ಲರೂ ಒಂದೊಂದು ಮಾಯೆಯ ಬೆಂಬಿದ್ದು ಬ್ಯುಸಿಯಾಗಿರುವವರೇ. ಇಂಥಾ ಒತ್ತಡದ ನಡುವೆ ಬಹುತೇಕರು ತಮಗೆ ಅರಿವಿಲ್ಲದಂತೆ ಹತ್ತಿರದ ಸಂಬಂಧಗಳ ವ್ಯಾಪ್ತಿ ಪ್ರದೇಶದಿಂದ ಹೊರ ನಿಂತಿರುತ್ತಾರೆ. ಹಿಗೆ ಸಂಬಂಧಗಳೇ ಸಡಿಲವಾದರೆ ಅದನ್ನು ಮತ್ತೆ ಸರಿಯಾಗಿಸೋದು ಎಷ್ಟು ಕಷ್ಟ ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ಮಜವಾಗಿ ಹೇಳಲು ಸಜ್ಜಾಗಿದ್ದಾರೆ.
 
ಈ ಚಿತ್ರದ ಕಥೆ ತುಂಬಾ ಗಟ್ಟಿಯಾಗಿದೆ ಎಂಬುದನ್ನು ಆರಂಭಿಕ ವಿದ್ಯಮಾನಗಳೇ ಸಾಕ್ಷೀಕರಿಸುತ್ತವೆ. ನಿರ್ದೇಶಕರು ಕಥೆ ಹೇಳಿದಾಗ ಈ ಚಿತ್ರದ ನಾಯಕ ನಾಯಕಿಯರಾದ ದೇವರಾಜ್, ಶೃತಿ ಮತ್ತು ತಾರಾ ಒಂದೇ ಸಲಕ್ಕೆ ಇಂಪ್ರೆಸ್ ಆಗಿದ್ದರಂತೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ಸಂಪೂರ್ಣ ಸಹಕಾರ ನೀಡೋದಾಗಿ ಭರವಸೆ ಕೊಟ್ಟು ಒಪ್ಪಿಕೊಂಡರಂತೆ. ಇದು ಇಡೀ ಚಿತ್ರ ತಂಡದಲ್ಲಿ ಮತ್ತಷ್ಟು ಭರವಸೆ ಹುಟ್ಟಿಸಿದೆ.
 
ಈ ಚಿತ್ರದಲ್ಲಿ ದೇವರಾಜ್ ಅವರದ್ದು ವಿಭಿನ್ನವಾದ ಪಾತ್ರ. ಅವರನ್ನು ಈ ಹಿಂದೆಂದೂ ನೋಡಿರದಿದ್ದ ಗೆಟಪ್ಪಿನಲ್ಲಿ ತೋರಿಸಲು ನಿರ್ದೇಶಕರು ಸಜ್ಜಾಗಿದ್ದಾರೆ. ದೇವರಾಜ್ ಅವರ ಗೆಟಪ್ಪು ಬದಲಿಸಲು ಬಾಂಬೆಯಿಂದ ನುರಿತ ಮೇಕಪ್ ಟೀಂ ಕೂಡಾ ಬಂದಿದೆ. ಇದಕ್ಕೆ ದೇವರಾಜ್ ಅವರೂ ಕೂಡಾ ಕವಾಯತು ಆರಂಭಿಸಿದ್ದಾರೆ. ಸುಬ್ಬಯ್ಯ ಕುಟ್ಟಪ್ಪ ಛಾಯಾಗ್ರಹಣ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಇರೋ ಈ ಚಿತ್ರಕ್ಕೆ ಅಕ್ಟೋಬರ್ ಹತ್ತರಿಂದ ಚಿತ್ರಿಕರಣ ಶುರುವಾಗಲಿದೆ. ಐದು ಹಾಡುಗಳಿಗೆ ಈ ಹಿಂದೆ ಊರ್ವಿ ಚಿತ್ರಕ್ಕೆ ಸಂಗೀತ ನಿಡಿದ್ದ ಮನೋಜ್ ಜಾರ್ಜ್ ರಾಗ ಸಂಯೋಜನೆ ಮಾಡಲಿದ್ದಾರೆ. ಬೆಂಗಳೂರು, ಗೋವಾ, ಕೇರಳ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ತಯಾರಿ ಮಾಡಿಕೊಳ್ಳುತ್ತಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನೀವು ಕರೆ ಮಾಡಿರುವ ಚಂದಾದಾರರು ಬಿಜ಼ಿಯಾಗಿದ್ದಾರೆಗೆ ಭವ್ಯಾ ಬಂದಿದ್ದಾರೆ... - Chitratara.com
Copyright 2009 chitratara.com Reproduction is forbidden unless authorized. All rights reserved.