Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪರಸಂಗ ಡಬ್ಬಿಂಗ್ ಮುಗೀತು
Posted date: 23 Thu, Nov 2017 08:04:48 AM
ಅಂದು ೧೯೭೮ ರಲ್ಲಿ ಹಿರಿಯ ನಟ ಲೋಕೇಶ್ ಅವರು ಅಭಿನಯಿಸಿದ್ದ ‘ಪರಸಂಗದ ಗೆಂಡೆತಿಮ್ಮ’  ಯಾರಿಗೆ ತಾನೆ ಗೊತ್ತಿಲ್ಲ. ಈಗ ‘ಪರಸಂಗ’ ಎನ್ನು ಚಿತ್ರ ಆದ್ಯ ಸಿನಿ ಹೌಸ್ ಅಡಿಯಲ್ಲಿ ತಯಾರಾಗಿ ಮಾತುಗಳ ಜೋಡಣೆ ಹಂತಕ್ಕೆ ಬಂದು ನಿಂತಿದೆ. ಪರಸಂಗ ಪ್ರೇಕ್ಷಕರ ಸಂಗ ಮಾಡಲು ಇನ್ನೇನು ಕೆಲವೇ ದಿವಸಗಳು ಕಾಯಬೇಕು ಅಂತ ಹೇಳುತ್ತಾರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕೆ ಎಂ ರಘು.
 
ಈ ಸಿನಿಮಾ ವಿಶೇಷ ಕಥೆಯನ್ನು ಒಳಗೊಂಡಿದೆ. ಎಚ್ ಕುಮಾರ್, ಎಂ ಮಹಾದೇವ ಗೌಡ, ಕೆ ಎಂ ಲೋಕೇಶ್ ನಿರ್ಮಾಣಕ್ಕೆ ಸಹ ನಿರ್ಮಾಪಕರಾಗಿ ಪ್ರಕಾಶ್ ಮಂಡ್ಯ, ಸಿದ್ದೇಗೌಡ ಎಸ್ ಸೇರಿಕೊಂಡಿದ್ದಾರೆ.
 
ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಖ್ಯಾತ ನಗೆ ನಟ ಮಿತ್ರ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ  ಕಿಲಾಡಿಗಳು ನಟರುಗಳಾದ  ಗೋವಿಂದೇ ಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ.
 
ಹರ್ಷ ವರ್ಧನರಾಜ್ ಸಂಗೀತ, ಸುಜೈ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಈ ‘ಪರಸಂಗ’ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪರಸಂಗ ಡಬ್ಬಿಂಗ್ ಮುಗೀತು - Chitratara.com
Copyright 2009 chitratara.com Reproduction is forbidden unless authorized. All rights reserved.