Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಾನಿಪುರಿ ಟೀಸರ್ ಅನಾವರಣ
Posted date: 28 Thu, Sep 2017 08:37:17 AM
ಈ ಹಿಂದೆ ಜಿಂಕೆಮರಿ ಎಂಬ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಿದ್ದ ಕೆ.ಪಿ.ನವೀನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರ ಪಾನಿಪುರಿ. ೬ ಜನ ಸ್ನೇಹಿತರ ನಡುವೆ ನಡೆಯುವ ತರಲೆ, ಗಲಾಟೆ, ತಮಾಷೆಯಂತ ವಿಷಯಗಳನ್ನಿಟ್ಟುಕೊಂಟು ಒಂದು ಥ್ರಿಲ್ಲರ್ ಕಥಾನಕವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ಮೊನ್ನೆ ಎಸ್.ಆರ್.ವಿ. ಥಿಯೇಟರ್‌ನಲ್ಲಿ ನಡೆಯಿತು. 
 
ಪುಟ್ಟರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ, ಲಕ್ಷ್ಮೀ ಪುಟ್ಟರಾಜ್ ಈ ಚಿತ್ರದ ಸಹ ನಿರ್ಮಾಪಕರು, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೈಭವ್, ಸಂಜಯ್ ಹಾಗೂ ಜಗದೀಶ್ ಕುಮಾರ್ ಮೂವರು ನಾಯಕರಾಗಿ ಕಾಣಿಸಿಕೊಂಡಿದ್ದು, ಕರ್ವ ಖ್ಯಾತಿಯ ಅನು, ದರ್ಶಿತ ಹಾಗೂ ಸ್ವಾತಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಂದಂರ್ಭದಲ್ಲಿ ಮಾತಾನಾಡಿದ ನವೀನ್ ಕುಮಾರ್ ಕಷ್ಟ ಬಂದಾಗ ಸ್ನೇಹಿತರೆಲ್ಲರೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಎಂತಹ ಸಂಕಷ್ಟ ಎದುರಾಗುತ್ತದೆ ಅದರಿಂದ ಅವರೆಲ್ಲಾ ಹೇಗೆ ಹೊರಬರುತ್ತಾರೆ ಅಂತ ಈ ಚಿತ್ರದಲ್ಲಿ ಹೇಳಿದ್ದೇವೆ. 
 
ಪಾನಿಪುರಿ ಇಡೀ ಚಿತ್ರಕ್ಕೆ ಒಂದು ಟರ್ನಿಂಗ್ ಕೊಡುವಂತಹ ಪದ ಪಾನಿಪುರಿ. ಪಾನಿಪುರಿ ಜಾಗದಲ್ಲಿ ಒಂದು ಪ್ರಮುಖವಾದ ಘಟನೆ ನಡೆಯುತ್ತದೆ. ಹಾಗಾಗಿ ಚಿತ್ರಕ್ಕೆ ಪಾನಿಪುರಿ ಹೆಸರನ್ನಿಟ್ಟಿದ್ದೇವೆ. ರಕ್ತ ಹಾಗೂ ಬ್ಯಾಂಕ್ ರಾಬರಿಯಂತಹ ಕಂಟೆಂಟ್ ಇರು ಕಾರಣದಿಂದ ಚಿತ್ರಕ್ಕೆ ಎ ಸರ್ಟಿಫಿಕೆಟ್ ನೀಡಿದ್ದಾರೆ. ಎಂದು ಬೇಸರದಿಂದ ಹೇಳಿದರು. ನಂತರ ಮಾತಾನಾಡಿದ ಉಮೇಶ್ ಬಣಕಾರ್ ಇತ್ತೀಚಿನ ದಿನಗಳಲ್ಲಿ ಸೆನ್ಸಾರ್ ಮಂಡಳಿಯಿಂದ ನಿರ್ಮಾಪಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಅಲ್ಲದೇ ಹೊಸ ಪಾರ್ಮೆಟಿನಿಂದ 22,000/- ಸಾವಿರ ರೂಗಳ ಹೆಚ್ಚಿನ ಹೊರೆ ನಿರ್ಮಾಪಕನ ಮೇಲೆ ಬೀಳುತ್ತದೆ. ಇದನ್ನೆಲ್ಲಾ  ಪರಿಗಣಿಸಿ ಸೆನ್ಸಾರ್‌ನೊಂದಿಗೆ ಚರ್ಚೆ ನಡೆಸುತ್ತೇವೆ. ಅಲ್ಲದೇ ಕಲಾವಿದರಿಂದ ತೊಂದರೆಯಾದಗ ಛೇಂಬರ್‌ಗೆ ದೂರು ನೀಡಬೇಕು ಎಂದು ಹೇಳಿದರು. 
 
ಸಂತೋಷ್ ಬಾಗಲಕೋಟೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿರುವ 5 ಹಾಡುಗಳು ವಿಭಿನ್ನ ಶೈಲಿಯಲ್ಲಿವೆ. ಉತ್ತರ ಕರ್ನಾಟಕ ಶೈಲಿಯ ಸಾಹಿತ್ಯವಿರುವ  ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು. ಮುಂದಿನ ತಿಂಗಳು ಚಿತ್ರವು ರಾಜ್ಯಾಂದ್ಯಂತ ಬಿಡುಗಡೆಯಾಗಲಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಾನಿಪುರಿ ಟೀಸರ್ ಅನಾವರಣ - Chitratara.com
Copyright 2009 chitratara.com Reproduction is forbidden unless authorized. All rights reserved.