Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರಥಮ ಹಂತ ಮುಗಿಸಿದ ಫೇಸ್ 2 ಫೇಸ್
Posted date: 23 Thu, Nov 2017 07:51:58 AM
ಶ್ರೀ ಬನಶಂಕರಿ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ಸುಮಿತ್ರ ಬಿ.ಕೆ. ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಫೇಸ್ 2 ಫೇಸ್ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಮುಕ್ತಾಯಗೊಂಡಿತು. 
 
ಇಪ್ಪತ್ತು ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ನಟ ರೋಹಿತ್, ಭಾನು ಪ್ರಕಾಶ್, ಪೂರ್ವಿ ಜೋಷಿ, ದಿವ್ಯಾ ಹುರುಡುಗ ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ವಿಶ್ವಜಿತ್ ರಾವ್ ಛಾಯಾಗ್ರಹಣದಲ್ಲಿ ನಿರ್ದೇಶಕ ಸಂದೀಪ್ ಜನಾರ್ಧನ್ ಚಿಕ್ಕಮಗಳೂರು ಸುತ್ತಮುತ್ತ ಚಿತ್ರಿಸಿಕೊಂಡರು. 
ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. 
 
ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‌ರಾವ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಡಾ||ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯ, ನಿಕ್ಸ್ ಸಂಗೀತ, ಕ್ರೇಜಿ ಮೈಂಡ್ಸ್ ಸಂಕಲನ, ಬಾಬು ಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್ ಜನಾರ್ಧನ್.  
 
ತಾರಾಗಣದಲ್ಲಿ ರೋಹಿತ್ ಭಾನುಪ್ರಕಾಶ್, ಪೂರ್ವಿ ಜೋಷಿ, ದಿವ್ಯಾ ಹುರುಡುಗ, ವೀಣಾಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಗೌಡ, ಯಮುನಾ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಥಮ ಹಂತ ಮುಗಿಸಿದ ಫೇಸ್ 2 ಫೇಸ್ - Chitratara.com
Copyright 2009 chitratara.com Reproduction is forbidden unless authorized. All rights reserved.