Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರೀತಿ ಸಂಕೇತದ ಸೇರು ನನ್ನ ತೋಳಲ್ಲಿ
Posted date: 16 Mon, Mar 2020 10:09:04 AM

ಲೈಫ್ 360 ಚಿತ್ರದಲ್ಲಿ ನಟಿಸಿದ್ದ  ಅರ್ಜುನ್ ಕಿಶೋರ್‌ಚಂದ್ರ  ಸೇರು ನನ್ನ ತೋಳಲ್ಲಿ ಐದು ನಿಮಿಷದ ವಿಡಿಯೋ ಆಲ್ಬಂಗೆ ಗೀತೆಗೆರಚನೆ ಮಾಡಿ ನಾಯಕನಾಗಿ ನಟಿಸಿದ್ದು, ಭಿನ್ನ ಸಿನಿಮಾದ ನಾಯಕಿ ಪಾಯಲ್ ರಾಧಕೃಷ್ಣ ಜೋಡಿಯಾಗಿದ್ದಾರೆ. ವೈದ್ಯರಾಗಿ ವಿನಾಯಕ್‌ಜೋಷಿ ಕಾಣಿಸಿಕೊಂಡಿದ್ದಾರೆ.

ರ‍್ಯಾಪರ್ ಸಿದ್ದ್  ಆಲ್ಬಂನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಸೇರು ನನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ ಸಾಹಿತ್ಯವಿರುವ ಗೀತೆಯಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿದ ನಿಜವಾದ ಪ್ರೀತಿ ಏನೆಂಬುದನ್ನು ಹೇಳಲಾಗಿದೆ.  ಚಿಕ್ಕಮಗಳೂರು, ಬೆಂಗಳೂರು  ಸುಂದರ ತಾಣಗಳಲ್ಲಿ ಮೂರು ದಿನಗಳ ಕಾಲ  ಚಿತ್ರೀಕರಿಸಿದ್ದು, ಸುಮಾರು ಏಳು ಲಕ್ಷ ಖರ್ಚು ಆಗಿರುತ್ತದೆ. ಸಂಗೀತ, ಗಾಯನ ಹಾಗೂ ನಿರ್ದೇಶನ ಅದ್ವಿಕ್, ಛಾಯಾಗ್ರಹಣ ಅಭಿಮನ್ಯು ಸದಾನಂದ್ ಅವರದಾಗಿದೆ. ಗಗನ್.ಜೆ.ಗೌಡ-ಸುನಿಲ್‌ಕುಮಾರ್ ಜಂಟಿಯಾಗಿ ಕ್ರಾಂತಿ ಕ್ರಿಯೇಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ.  

ಸದರಿಗೀತೆಯು ಇತ್ತೀಚೆಗಷ್ಟೆ ಪ್ರಾರಂಭಗೊಂಡಿರುವ ಭಾನುಪ್ರತಾಪ್.ಎಸ್. ಒಡೆತನದ 50 ಎಂಎಂ ಸ್ಟುಡಿಯೋದಲ್ಲಿ ಚಿತ್ರೀಕರಣೋತ್ತರ ಕೆಲಸಗಳು ನಡೆದಿದೆ. ಸ್ಟುಡಿಯೋ ಅತ್ಯಾಧುನಿ ತಂತ್ರಜ್ಘಾನ ಒಳಗೊಂಡಿದ್ದು, ಇದರಲ್ಲಿ ಡಿಐ, ಎಡಿಟಿಂಗ್, ಕಲರ್ ಗ್ರೇಡಿಂಗ್, ವಿಎಫ್‌ಎಕ್ಸ್, ಡಬ್ಬಿಂಗ್ ಮುಂತಾದ ಸೌಲಭ್ಯಗಳು ಆಕರ್ಷಕದರದಲ್ಲಿ ಲಭ್ಯವಿರುತ್ತದೆ. ಮುಂದೆ ಕ್ರಾಂತಿ ಕ್ರಿಯೇಶನ್ಸ್ ಹಾಗೂ 50 ಎಂಎಂ ಸ್ಟುಡಿಯೋ ಸೇರಿಕೊಂಡು ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಅಪಾರ ಜನ ಮೆಚ್ಚುಗೆ ದೊರಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೀತಿ ಸಂಕೇತದ ಸೇರು ನನ್ನ ತೋಳಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.