ಪ್ರಸಕ್ತಯುವಜನಾಂಗದಲ್ಲಿ ಪ್ರೀತಿಎಂಬುದು ಮಳೆ ಬಿಲ್ಲು ನಂತೆಕಂಡು ಬರುತ್ತದೆ.ಅದಕ್ಕೆಂದೇಸಾಹಿತಿನಾಗರಾಜಹಿರಿಯೂರುಇದೇ ಹೆಸರಿನ ಮೇಲೆ ಚಿತ್ರವೊಂದನ್ನುಜನರಿಗೆ ತೋರಿಸಿದ್ದಾರೆ. ಚಿತ್ರದಕುರಿತು ಹೇಳುವುದಾದರೆ ಹೈಸ್ಕೂಲ್ ವಿದ್ಯಾರ್ಥಿಸೂರ್ಯನಿಗೆ ಭಾರ್ಗವಿ ಎನ್ನುವ ಹುಡುಗಿಯ ಪರಿಚಯವಾಗುತ್ತದೆ. ಇಬ್ಬರ ಪ್ರೀತಿಯುಸರಿಯಾಗಿ ಹೋಗುತ್ತಿರುವಾಗಒಂದುಘಟನೆಯಿಂದ ಇವಳಿಂದ ದೂರ ಹೋಗಬೇಕಾಗುತ್ತದೆ.ಅಲ್ಲಿಯವರೆಗೂ ಮಿಂಚುತ್ತಿದ್ದ ಸೂರ್ಯನ ಪ್ರೀತಿಗೆಗ್ರಹಣತಗಲುತ್ತದೆ.ಅದುಕೊನೆಯಲ್ಲಿಹೋಗುತ್ತದಾ?ಭಾರ್ಗವಿ ಸಿಗುತ್ತಾಳಾ?ಎನ್ನುವುದೇಒಂದು ಏಳೆಯ ಸಾರಾಂಶವಾಗಿದೆ.ಜೀವನದಲ್ಲಿ ಹುಡುಗನ ಬದುಕುಕಪ್ಪು-ಬಿಳಿಪು ಆಗಿರುತ್ತದೆ.ಮಳೆಬಿಲ್ಲಿನಂತೆ ಹುಡುಗಿಯೊಬ್ಬಳು ಪ್ರವೇಶ ಮಾಡಿದಾಗಆತನುಏನಾಗುತ್ತಾನೆಎಂಬುದನ್ನುಕಾಲ್ಪನಿಕವಾಗಿ ಹೇಳಲಾಗಿದೆ.
ಪ್ರೌಡಶಾಲೆ, ಕಾಲೇಜು ಹುಡುಗನಾಗಿಶರತ್‌ನಾಯಕ.ಕೆಮಿಸ್ಟ್ರೀ ಆಫ್‌ಕರಿಯಪ್ಪಖ್ಯಾತಿಯ ಸಂಜನಾಆನಂದ್ ಬಜಾರಿಯಾಗಿ ಸ್ಕೂಲ್ ಸ್ಟುಡೆಂಟ್.ಇಬ್ಬರಿಗೂ ಹೊಸ ಅನುಭವವಾಗಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಕಾಲೇಜು ಹುಡುಗಿ, ಪ್ರೀತಿ ಬಯಸುವ ನಯನ, ಸ್ನೇಹಿತೆಯಾಗಿ ಸೌಮ್ಯ.ಖಳನಟರುಗಳಾಗಿ ರವಿತೇಜ್,ಪ್ರಜ್ವಲ್‌ಉಳಿದಂತೆ ಶ್ರೀನಿವಾಸಪ್ರಭು, ಮೈಕೋನಾಗರಾಜುಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ನಿರ್ದೇಶಕಗಣೇಶ್‌ನಾರಾಯಣ್.ಆರ್.ಎಸ್. ಅವರನಾಲ್ಕು ಹಾಡುಗಳ ಪೈಕಿ ಎಂಬತ್ತರದಶಕದ ಗೀತೆಗಳಿಗೆ ಹೋಲುವಂತಸಂಗೀತ ಒದಗಿಸಿರುವುದು ವಿಶೇಷವಾಗಿದೆ. ಮೊದಲ ಪ್ರಯತ್ನದಲ್ಲೆ ನಿಂಗಪ್ಪ.ಎಲ್ ಒಳ್ಳೆಯಚಿತ್ರವನ್ನು ನಿರ್ಮಾಣ ಮಾಡಿದ್ದಾರೆಎನ್ನಬಹುದು.