Chief Editor
Manohar. R (Manu)
Photo Journalist
chitrataramanu@gmail.com
+91 9845549026
ಫೇಸ್ 2 ಫೇಸ್ಚಿತ್ರೀಕರಣ ಸಂಪೂರ್ಣ
Posted date: 14 Wed, Mar 2018 09:41:51 AM
ಶ್ರೀ ಬನಶಂಕರಿಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ಸುಮಿತ್ರ ಬಿ.ಕೆ. ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಫೇಸ್ ೨ ಫೇಸ್  ಚಿತ್ರೀಕರಣವು ಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು. 
ಮೂವತ್ತು ದಿವಸಗಳ ಕಾಲ ನಡೆದಚಿತ್ರದ ಚಿತ್ರೀಕರಣದಲ್ಲಿ ನಟ ರೋಹಿತ್, ಭಾನು ಪ್ರಕಾಶ್, ಪೂರ್ವಿಜೋಷಿ, ದಿವ್ಯಾ ಹುರುಡುಗ ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಹಾಗೂ ಐದು ಗೀತೆಗಳ ಚಿತ್ರೀಕರಣವನ್ನುವಿಶ್ವಜಿತ್‌ ರಾವ್‌ ಛಾಯಾಗ್ರಹಣದಲ್ಲಿ ನಿರ್ದೇಶಕ ಸಂದೀಪ್‌ ಜನಾರ್ಧನ್‌ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಮತ್ತು ನಂದಿಬೆಟ್ಟದ ಸುತ್ತ ಮುತ್ತ ಚಿತ್ರಿಸಿಕೊಂಡರು. 
ಚಿತ್ರದ ಮಾತಿನ ಮರುಲೇಪನ ಕಾರ್ಯವು ಈವಾರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. 
ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‌ ರಾವ್‌ ಛಾಯಾಗ್ರಹಣ, ಜಯಂತ್‌ಕಾಯ್ಕಿಣಿ, ಡಾ||ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್‌ಕ್ವಾಬ್ ಸಂಗೀತ, ಕ್ರೇಜಿ ಮೈಂಡ್ಸ್ ಸಂಕಲನ, ಬಾಬು ಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್‌ ಜನಾರ್ಧನ್. 
ತಾರಾಗಣದಲ್ಲಿ ರೋಹಿತ್ ಭಾನುಪ್ರಕಾಶ್, ಪೂರ್ವಿಜೋಷಿ, ದಿವ್ಯಾ ಹುರುಡುಗ, ವೀಣಾಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್‌ಅಲೆಕ್ಸಾಂಡರ್,ಯಮುನಾ ಮುಂತಾದವರಿದ್ದಾರೆ. 
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಫೇಸ್ 2 ಫೇಸ್ಚಿತ್ರೀಕರಣ ಸಂಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.