Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಹು ನಿರೀಕ್ಷಿತ ಉದ್ಘರ್ಷ ನಾಳೆಯಿಂದ ತೆರೆಕಾಣಲಿದೆ
Posted date: 21 Thu, Mar 2019 12:14:09 PM

ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹು ನಿರೀಕ್ಷಿತ ಉದ್ಘರ್ಷ ಚಿತ್ರ ಇದೇ ತಿಂಗಳು 22 ರಂದು ನಾಳೆಯಿಂದ  ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಬಹು ಸಮಯದ ನಂತರ ಮತ್ತೆ ತಮ್ಮ ಫೆವರೀಟ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ಗೆ ಮರಳಿರೋ ದೇಸಾಯಿ, ಬಾರಿ ಆ್ಯಕ್ಷನ್ ಅನ್ನು ಸಹ ಸಾಕಷ್ಟು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಉದ್ಘರ್ಷ ಚಿತ್ರದ ನಾಲ್ಕೂ ಭಾಷೆಯ ಟ್ರೇಲರ್ಕೂಡ ಸಖತ್ ಹಿಟ್ ಆಗಿದ್ದು, ಜನರಲ್ಲಿ ನಿರೀಕ್ಷೆ ಮಟ್ಟವನ್ನು ಹೆಚ್ಚಿಸಿವೆ. ಉದ್ಘರ್ಷ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಇದೇ ಶುಕ್ರವಾರ ದಕ್ಷಣಭಾರತದಾದ್ಯಂತ ರಿಲೀಸ್ ಆಗಲಿದ್ದು, ಸಿನಿ ರಸಿಕರನ್ನು ಸೀಟಿನ ತುದಿಗೆ ಕೂರಿಸೋದು ಪಕ್ಕಾ ಆಗಿದೆ. r QæAiÉÄõÀ£ïì ¯ÁAbÀ£ÀzÀ°è zÉêÀgÁeï Dgï CªÀgÀÄ F avÀæªÀ£ÀÄß ¤«Äð¹zÁÝgÉ

ಚಿತ್ರದಲ್ಲಿ ಬಹುಭಾಷಾ ತಾರೆಗಳ ದೊಡ್ಡ ತಂಡವೇ ಇದೆ. ಉದ್ಘರ್ಷ ಚಿತ್ರದ ನಾಯಕನಾಗಿ ಬಹುಭಾಷಾ ತಾರೆ, ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ನಾಯಕರಾಗಿ ಅಭಿನಯಿಸಿದ್ದಾರೆ, ಬಹುಭಾಷಾ ತಾರೆಗಳಾದ ಯಜಮಾನಾ, ತಡಂ ಚಿತ್ರಗಳ ಖ್ಯಾತಿಯ ತಾನ್ಯಾ ಹೋಪ್, ಕಬಾಲಿ ಖ್ಯಾತಿಯ ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಮೋಸ್ಟ್ ಸ್ಟೈಲಿಶ್ ವಿಲನ್ ಎಂದೇ ಖ್ಯಾತರಾಗಿರೋ ಕಬೀರ್ ದುಹಾನ್ ಸಿಂಗ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕನ್ನಡದವರೇ ಆದ ಕಿಶೋರ್, ವಂಶಿ ಕೃಷ್ಣ, ಶ್ರವಣ್ ರಾಘವೇಂದ್ರ ಮುಂತಾದ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಚಿತ್ರಕ್ಕೆ ಬಾಲಿವುಡ್ ಖ್ಯಾತ ಮ್ಯೂಸಿಕ್ ಕಾಂಪೋಸರ್ ಹಾಗೂ ಸಂಗೀತ ನಿರ್ದೇಶನದ ಲೆಜೆಂಡ್ ಸಲೀಲ್ ಚೌಧುರಿಯವರ ಪುತ್ರ ಸಂಜೋಯ್ ಚೌಧುರಿ ಮ್ಯೂಸಿಕ್ ನೀಡಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ಹಾಡುಗಳೇ ಇಲ್ಲದಿದ್ದರೂ, ಇದರ ಹಿನ್ನೆಲೆ ಸಂಗೀತಕ್ಕೆ ಮಹತ್ವದ ಸ್ಥಾನವಿದೆ. ಹೀಗಾಗಿ, ಹಿಂದಿಯ ಬಹುತೇಖ ಖ್ಯಾತ ಸ್ಟಾರ್ಗಳ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿರೋ ಸಲೀಸ್ ಚೌಧುರಿ ಚಿತ್ರದ ಸಂಗೀತ ನಿರ್ದೇಶಕರಾಗಿ ಅದ್ಭುತ ಮ್ಯೂಸಿಕ್ ನೀಡಿದ್ದಾರೆ.

ಜೊತೆಗೆ ಡಿಓಪಿಯಾಗಿ ಖ್ಯಾತ ಛಾಯಾಗ್ರಹಕ ಪಿ.ರಾಜನ್ ಹಾಗೂ ಇತ್ತೀಚೆಗಷ್ಟೇ ನಿಧನರಾದ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ವೆಂಕಟ್ ಹಾಗೂ ನಭಾ ಸುಬ್ಬು ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಬಿ.ಎಸ್ ಕೆಂಪರಾಜು ಸಂಕಲನ ಮಾಡಿದ್ದರೆ, ನಾಗಭೂಷಣ್ ಅವರು ವಿಭಿನ್ನ ರೀತಿಯಲ್ಲಿ ಪೋಸ್ಟರ್ ಡಿಸೈನ್ ಮಾಡಿ ಕೊಟ್ಟಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಹು ನಿರೀಕ್ಷಿತ ಉದ್ಘರ್ಷ ನಾಳೆಯಿಂದ ತೆರೆಕಾಣಲಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.