Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಂಗಳೂರಿನಲ್ಲಿ ಗುರುರಾಂಧವಅವರ ನೃತ್ಯ ಸಂಗೀತವನ್ನು ಆನಂದಿಸಿರಿ!
Posted date: 31 Fri, May 2019 09:25:32 AM

ಪರ್ಸೆಪ್ಟ್ ಲೈವ್‌ನ ಮುಂಚೂಣಿಯ ಬಾಲಿವುಡ್‌ನಡ್ಯಾನ್ಸ್ ಮ್ಯೂಸಿಕ್ ಕಾರ್ಯಕ್ರಮ ಬಾಲಿಬೂಮ್ ಈ ವರ್ಷ 15 ನಗರಗಳ ಪ್ರವಾಸದಲ್ಲಿಖ್ಯಾತಗಾಯಕ ಮತ್ತು ಹೈ ರೇಟೆಡ್‌ಗಬ್ರು-ಗುರುರಾಂಧವಅವರನ್ನು ಬಹುನಗರಗಳ ಪ್ರವಾಸಕ್ಕೆ ಮತ್ತೆತಂದಿದೆ.ಈ ಕಾರ್ಯಕ್ರಮದ ಮೊದಲ ಹಂತ ಮೇ 18ರುಂದ ಜೂನ್ 8, 2019ರವರೆಗೆ 7 ನಗರಗಳಲ್ಲಿ ನಡೆಯಲಿದೆ.ಈ ಮನರಂಜನೀಯ ಬಹುನಗರ ಪ್ರವಾಸ ಮೇ ೧೮ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತುಜೂನ್ ೮ರಂದು ಜೆಮ್‌ಷೆಡ್‌ಪುರದಲ್ಲಿ ಸಮಾರೋಪಗೊಳ್ಳಲಿದ್ದು ಮನರಂಜಿಸುವ ಗೀತೆಗಳು ರಂಜಿಸಲಿವೆ.

ಕಳೆದ ವರ್ಷದೇಶದ೮ ನಗರಗಳಲ್ಲಿ ಸಂಚರಿಸಿ ೮೦,೦೦೦ಕ್ಕೂ ಹೆಚ್ಚು ಜನರನ್ನು ರಂಜಿಸಿದ ಅತ್ಯಂತ ಯಶಸ್ವಿ ಬಾಲಿಬೂಮ್‌ಗುರುರಾಂಧವ ಹೈ ರೇಟೆಡ್‌ಗಬ್ರುಟೂರ್‌ನ ಮೊದಲ ಆವೃತ್ತಿಯ ನಂತರಮತ್ತು ಮಲೇಷಿಯಾದಕೆಎಲ್ ಲೈವ್-ಲೈಫ್ ಸೆಂಟರ್‌ನಲ್ಲಿ ನಡೆದ ಮೊದಲ ಕನ್ಸರ್ಟ್‌ನಲ್ಲಿ ಸಾವಿರಾರು ಮಂದಿಯನ್ನು ರಂಜಿಸಿದ್ದರು.ಈ ಎರಡನೇಆವೃತ್ತಿದೇಶಾದ್ಯಂತ ವಿಸ್ತರಿಸಿದ್ದು ಹಲವಾರು ಮಾರುಕಟ್ಟೆಗಳ ವ್ಯಾಪ್ತಿ ಹೊಂದಿದ್ದುಇಲ್ಲಿಯವರೆಗೂ ಈ ಸೂಪರ್‌ಸ್ಟಾರ್‌ಗಾಯಕ ಹಾಡದೇಇರುವ ಹಲವು ಮಾರುಕಟ್ಟೆಗಳಲ್ಲಿ ರಂಜಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿಗುರುರಾಂಧವತನ್ನ ಹೊಸ ಚಾರ್ಟ್‌ಬಸ್ಟರ್ ‘ಸ್ಲೋಲಿ ಸ್ಲೋಲಿ ಪ್ರದರ್ಶಿಸಲಿದ್ದು ಮಿ.ವರ್ಲ್ಡ್‌ವೈಡ್, ಪಿಟ್‌ಬುಲ್ ಸಹಯೋಗದಲ್ಲಿಏಪ್ರಿಲ್ ೧೯ರಂದು ಬಿಡುಗಡೆಯಾಗಿತ್ತು.ಇದಲ್ಲದೆ ಹಲವು ಅವರಜನಪ್ರಿಯ ಗೀತೆಗಳನ್ನು ಪ್ರದರ್ಶಿಸಲಿದ್ದಾರೆ.ಗುರುರಾಂಧವ ಪ್ರಸ್ತುತಯೂಟ್ಯೂಬ್‌ನಲ್ಲಿಅತ್ಯಂತ ಹೆಚ್ಚು ವೀಕ್ಷಣೆ ಹೊಂದಿರುವ ಭಾರತೀಯಗಾಯಕರಾಗಿದ್ದಾರೆ ಮತ್ತುಅವರು ಹೈ ರೇಟೆಡ್‌ಗಬ್ರು, ಸೂಟ್ ಸೂಟ್, ಪಟೋಲ, ಬನ್ ಜಾತು ಮೇರಿರಾಣಿ, ಲಾಹೊರ್, ಕೌನ್ ನಚ್ಡಿ, ಮೊರ್ನಿ ಬಂಕೆ ಮತ್ತಿತರೆ ಗೀತೆಗಳ ಪ್ರದರ್ಶನ ನೀಡಲಿದ್ದಾರೆ.ಅಪಾರ ಸಂಖ್ಯೆಯಯೂಟ್ಯೂಬ್ ವೀಕ್ಷಣೆ ಹೊಂದಿರುವಗುರುರಾಂಧವಇಲ್ಲಿನಅತ್ಯಂತದೊಡ್ಡ ಲೈವ್ ಪರ್ಫಾರ್ಮರ್‌ಗಳಲ್ಲಿ ಒಬ್ಬರಾಗಿದ್ದಾರೆ.ಸ್ಲೋಲಿ ಸ್ಲೋಲಿ ೬೫ ಮಿಲಿಯನ್ ಹಿಟ್ಸ್ ಹೊಂದಿದ್ದುಇನ್ನೂ ಹೆಚ್ಚಿನಜನಪ್ರಿಯತೆ ಪಡೆಯುತ್ತಿದೆ.ಈ ದೇಸಿ ಪಾಪ್ ಸ್ಟಾರ್‌ನ ಲೈವ್‌ಕಾರ್ಯಕ್ರಮಎಲ್ಲರನ್ನೂಉತ್ಸಾಹದಲ್ಲಿ ಮಿಂದೇಳುವಂತೆ ಮಾಡಲಿದೆ.

ಈ ಮುಂದಿನ ಬಾಲಿಬೂಮ್ ಪ್ರವಾಸಕುರಿತುಗುರುರಾಂಧವ, ೨೦೧೮ ನನಗೆ ಅತ್ಯಂತ ಮಹತ್ವಪೂರ್ಣವಾಗಿದೆ. ಅಭಿಮಾನಿಗಳ ಎದುರಿನಲ್ಲಿ ನೇರವಾಗಿ ಹಾಡುವುದಕ್ಕಿಂತ ಹೆಚ್ಚಿನ ಸಂತೋಷಕಲಾವಿದನಿಗೆಇರುವುದಿಲ್ಲ. ಕಳೆದ ವರ್ಷ ಬಾಲಿಬೂಮ್‌ನಲ್ಲಿ ಹಾಡಲು ಮತ್ತು ನನ್ನ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಪಡೆಯಲು ಬಹಳ ಸಂತೋಷ ಹೊಂದಿದ್ದೇನೆ. ಈ ಪ್ರವಾಸದಲ್ಲಿ ನನ್ನ ಪ್ರದರ್ಶನ ಮತ್ತಷ್ಟುಅದ್ಧೂರಿಯಾಗಿರಲು ಈ ವರ್ಷ ಮತ್ತಷ್ಟುಉತ್ಸಾಹಿ ಹಾಗೂ ಸನ್ನದ್ಧನಾಗಿದ್ದೇನೆ ಎಂದರು.

ಗುರುರಾಂಧವ ಹೈ ರೇಟೆಡ್‌ಗಬ್ರುಇಂಡಿಯಾಟೂರ್ ೨.೦ ತನ್ನ ಅಭಿಮಾನಿಗಳಿಗೆ ನೇರ ಸಂಗೀತದ ಮನರಂಜನೆಅಲ್ಲದೆ ಪರ್ಕಷನಿಸ್ಟ್ಸ್, ಎಕ್ಸೋಟಿಕ್ ಪರ್ಫಾರ್ಮರ‍್ಸ್, ಆಕರ್ಷಕ ದೃಶ್ಯಗಳ ಎಸ್‌ಎಫ್‌ಎಕ್ಸ್ ಮತ್ತುಅತ್ಯಾಧುನಿಕತಂತ್ರಜ್ಞಾನ ಹೊಂದಿರುತ್ತದೆ.

ವಿವರಗಳು:
ದಿನಾಂಕ:ಜೂನ್ 1, 2019
ಸಮಯ: ಸಂಜೆ 4ರ ನಂತರ
ಸ್ಥಳ: ಫೀನಿಕ್ಸ್ ಮಾರ್ಕೆಟ್ ಸಿಟಿ, ದೇವಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಮಹಾದೇವಪುರ, ಬೆಂಗಳೂರು, ಕರ್ನಾಟಕ-560048೮.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಂಗಳೂರಿನಲ್ಲಿ ಗುರುರಾಂಧವಅವರ ನೃತ್ಯ ಸಂಗೀತವನ್ನು ಆನಂದಿಸಿರಿ! - Chitratara.com
Copyright 2009 chitratara.com Reproduction is forbidden unless authorized. All rights reserved.