Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಟ್ಟದ ದಾರಿ ಯ ಚಿತ್ರೀಕರಣ ಮುಕ್ತಾಯ
Posted date: 08 Thu, Mar 2018 01:04:04 PM
ಹಳ್ಳಿ ಮಕ್ಕಳ ಸಾಹಸದ ಕಥಾನಕವನ್ನು ಹೊಂದಿರುವ ಬೆಟ್ಟದ ದಾರಿ ಚಿತ್ರದ ಚಿತ್ರೀಕರಣ ಶಿವಗಂಗೆ, ಚನ್ನಪಟ್ಟಣ, ಬಿಜಾಪುರ ಹಾಗೂ ಉತ್ತನಾಳ್ ಸುತ್ತಮುತ್ತ ಚಿತ್ರೀಕರಣ ನಡೆಸಿ ಇದೀಗ ಮಾತಿನ ಭಾಗದ ಹಾಗೂ ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ.  ಉಳಿದ ಮೂರು ಹಾಡುಗಳ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಬಿಜಾಪುರದ ಸುತ್ತಮುತ್ತ ನಡೆಸಲಾಗುವುದು. ಈ ಹಿಂದೆ ಬಂಗಾರಿ, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾ ಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.  
 
ಹೀರಾಲಾಲ್ ಮೂವೀಸ್ ಲಾಂಛನದಲ್ಲಿ ಚಂದ್ರಕಲಾ ಟಿ.ಆರ್.ಮತ್ತು ಮಂಜುನಾಥನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಅರ್ಜುನ್ (ಕಿಟ್ಟಿ) ಸಂಕಲನ, ಡಾ: ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಗೂ ವಿಜಯ ಭರಮ ಸಾಗರ ಸಾಹಿತ್ಯವಿದೆ.  ಮಾ|| ನಿಶಾಂತ್ ಟಿ.ರಾಥೋಡ್ ಮಾ.ಅಂಕಿತ ನವನಿಧಿ, ಬೇಬಿ ಲಕ್ಷ್ಮಿ ಶ್ರೀ. ಮಾ|| ರಂಗನಾಥ್ ಯಾದವ್, ಮಾ|| ರೋಹಿತ್, ಮಾ|| ವಿಜ್ಞೇಶ, ಬೇಬಿ ಮಾನ್ಯತ, ಎಂ.ನಾಯಕ್, ಮನ್‌ದೀಪ್ ರಾಯ್ ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ನಿಶಿತ ರಾಘವೇಂದ್ರ, ಗಂಗಾಧರ್ ಗೌಡ ಆರ್.ನಾಗೇಶ್ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಟ್ಟದ ದಾರಿ ಯ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.