Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೇತಾಳ ಕಾಮಿಡಿ ಹಾರರ್ ಚಿತ್ರ ಆರಂಭ
Posted date: 30 Thu, Nov 2017 08:45:06 AM
ಭೂಮಿಕಾ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶಿವಕುಮಾರ್ ಬಿ.ಕೆ. ರವರು ನಿರ್ಮಿಸುತ್ತಿರುವ ಬೇತಾಳ ಎಂಬ ಹಾರರ್ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಹಾಸ್ಯ ಪ್ರಧಾನ ಚಿತ್ರ ಬೇತಾಳಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಕಳೆದವಾರ ಯಶವಂತಪುರ ಶನೇಶ್ವರ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.
 
ಶ್ರೀಧರ್, ಸ್ಮೈಲ್‌ಶಿವು ಹಾಗೂ ಸೋಮಗೌಡ ಅಭಿನಯದಲ್ಲಿ ಮೊದಲ ದೃಶ್ಯಕ್ಕೆ ಚಿತ್ರೀಕರಿಸಿಕೊಳ್ಳಲಾಯಿತು.  ಜಗನ್ನಾಥ್‌ಕಸ್ತೂರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ, ಬೆಂಗಳೂರು, ಮಂಗಳೂರು, ಮಡಿಕೇರಿ ಹಾಗೂ ಬಿಜಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ಹೊಸಮನೆಗೆ ಬಾಡಿಗೆಗೆ ಬಂದ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಅಲ್ಲಿನ ದೆವ್ವವೊಂದು ಯಾವರೀತಿ ಕಾಟ ಕೊಡುತ್ತದೆ, ಕೊನೆಗೆ ಆತ ಹೇಗೆ ಹೊರಗೆ ಬಂದ ಎನ್ನುವುದೇ ಬೇತಾಳ ಚಿತ್ರದ ಕಥಾನಕ.
 
ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಜ್‌ಕಿಶೋರ್ ಸಂಗೀತ, ಕಿಟ್ಟಿ, ಕಪಿಲ್ ನೃತ್ಯ ನಿರ್ದೇಶನ, ಅಶೋಕ್ ಸಂಕಲನ, ಉಪೇಂದ್ರಗೌಡ ಸಹ ನಿರ್ಮಾಪಕರಾಗಿದ್ದು, ಶ್ರೀಧರ್, ಸ್ಮೈಲ್‌ಶಿವು, ಸೋನುಗೌಡ, ಉಪೇಂದ್ರ, ಬ್ಯಾಂಕ್ ಜನಾರ್ಧನ್, ಮೋಹನ್ ಜುನೇಜ, ರಾಣಿ, ಕಿಲ್ಲರ್ ವೆಂಕಟೇಶ್, ಉಮೇಶ್, ಅನುಮಪ, ಸ್ಮಿತಾ, ಕಾಜಲ್, ಹರ್ಷಿತ, ಸಂತೋಷ್, ಅರ್ಜುನ್, ಹರೀಶ್ ಮುಂತಾದವರ ತಾರಾಬಳಗವಿದೆ.

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೇತಾಳ ಕಾಮಿಡಿ ಹಾರರ್ ಚಿತ್ರ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.