Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭರವಸೆಯ ಬಾಲನಟ ಅಭಿಜಯ್ ಜೋಶಿ
Posted date: 15 Mon, Oct 2018 09:12:08 AM

ಇದೀಗ ಬಿಡುಗಡೆಗೆ ಸಜ್ಜಾಗಿರುವ ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹುಡುಗನೊಬ್ಬ ಎಲ್ಲರ ಗಮನ ಸೆಳೆದಿದ್ದಾನೆ.  ಈಗಷ್ಟೇ ಆರಂಭವಾಗಿರುವ ಮಿಂಚುಹುಳು, ಈ ಪಟ್ಟಣಕ್ಕೆ ಏನಾಗಿದೆ ಚಿತ್ರಗಳಲ್ಲಿಯೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ಈತ ಅಭಿಜಯ್ ಜೋಷಿ. ಮಲ್ಲೇಶ್ವರದ ದಿ ಬ್ರಿಗೇಡ್ ಸ್ಕೂಲ್‌ನಲ್ಲಿ ೩ನೇ ತರಗರಿ ಓದುತ್ತಿರುವ ಈ ಪುಟ್ಟ ಹುಡುಗನೀಗ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನೆಲೆ ಕಂಡುಕೊಂಡಿದ್ದಾನೆ.
ಧಾರವಾಡ ಮೂಲದ ರಿತೇಶ್ ಜೋಷಿ ಮತ್ತು ರಾಧಿಕಾ ದಂಪತಿಯ ಮಗನಾದ ಅಭಿಜಯ್ ಜೋಷಿ ಬಾಲ್ಯದಿಂದಲೇ ಅಚ್ಚರಿ ಹುಟ್ಟಿಸುತ್ತಾ ಬಂದಿರೋ ಪ್ರತಿಭೆ. ತಂದೆ ತಾಯಿ ಧಾರವಾಡ ಮೂಲದವರಾದರೂ ಅವರು ಬದುಕು ಕಟ್ಟಿಕೊಂಡಿರೋದು ಬೆಂಗಳೂರಿನಲ್ಲಿಯೇ. ಇಲ್ಲಿಯೇ ಹುಟ್ಟಿ ಬೆಳೆದ ಅಭಿಜಯ್ ಜೋಷಿಗೆ ಬುದ್ಧಿ ಬಲಿಯುತ್ತಲೇ ಸಂಗೀತ ಮತ್ತು ನಟನೆಯ ಬಗ್ಗೆ ಆಸಕ್ತಿಯಿತ್ತು. ಇದನ್ನು ಗುರುತಿಸಿದ ಹೆತ್ತವರೂ ಕೂಡಾ ಅದಕ್ಕೆ ಪೂರಕವಾಗಿ ಪ್ರೋತ್ಸಾಹ ಕೊಡಲಾರಂಭಿಸಿದ್ದರು. ಇದರಿಂದಾಗಿಯೇ ಅಭಿಜಯ್ ಕೆಲ ನಟನಾ ತರಬೇತಿ ಶಿಭಿರಗಳಲ್ಲಿಯೂ ಪಾಲ್ಗೊಂಡಿದ್ದ.
ಇಂಥಾ ಬಾಲ ಪ್ರತಿಭೆ ಅಭಿಜಯ್ ಮೊದಲು ಬೆಳಕು ಕಂಡಿದ್ದು ಜಾಹೀರಾತುಗಳಲ್ಲಿ ನಟಿಸೋ ಮೂಲಕ. ಆಶೀರ್ವಾದ್ ಅಟಾ, ಕನೆಕ್ಟ್ ಇಂಡಿಯಾ, ಮ್ಯಾಕ್ಸ್ ಫ್ಯಾಷನ್, ಯುನೈಟೆಡ್ ವಾಶ್, ಟಿವಿಎಸ್ ವಿಕ್ಟರ್ ಜಾಹೀರಾತುಗಳಲ್ಲಿಯೂ ಈತ ನಟಿಸಿದ್ದಾನೆ. ಈ ಕಂಪೆನಿಗಳ ಬ್ರೋಷರಿನಲ್ಲಿಯೂ ಮಿಂಚಿದ್ದಾನೆ.
ಅಭಿಜಯ್ ನಟನೆಯ ವಿಚಾರದಲ್ಲಿ ಮೊದಲ ಅವಕಾಶ ಪಡೆದುಕೊಂಡಿದ್ದು ಮಿಸ್ಸಿಂಗ್ ಬಾಯ್ ಚಿತ್ರದ ಮೂಲಕ. ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಈ ಪುಟ್ಟ ಹುಡುಗ ನಟಿಸಿದ್ದಾನೆ. ಮಿಂಚುಹುಳ, ಈ ಪಟ್ಟಣಕ್ಕೆ ಏನಾಗಿದೆ ಹಾಗೂ ಸಂದೀಪ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾನೆ.
ನಟನೆಯನ್ನೇ ಪ್ರಧಾನವಾಗಿ ಆರಿಸಿಕೊಂಡಿರೋ ಅಭಿಜಯ್‌ಗೆ ಸ್ವಿಮಿಂಗ್ ಅಂದರೆ ಪ್ರಾಣ. ಡ್ರಮ್ಸ್‌ನಲ್ಲಿಯೂ ವಿಪರೀತ ಆಸಕ್ತಿ ಇದೆ. ದೂರದೂರಿನ ಪ್ರಯಾಣ ಇವನಿಗಿಷ್ಟವಾದ ವಿಚಾರಗಳಲ್ಲೊಂದು. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಿಗೂ ಮಾದರಿಯಾದ ಪರಿಸರ ಪ್ರೇಮ ಹೊಂದಿರೋ ಅಭಿಜಯ್, ತನ್ನ ಏರಿಯಾದಲ್ಲಿ ಎಲ್ಲರೂ ಕಸ ಬಿಸಾಡೋ ಜಾಗದಲ್ಲಿ ಪೇಂಟಿಂಗ್ ಮಾಡೋ ಮೂಲಕ ಅರಿವು ಮೂಡಿಸುವ ಕೆಲಸವನ್ನೂ ಮಾಡಿದ್ದಾನೆ.
ಸದ್ಯ ಒಂದೊಂದೇ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಅಭಿಜಯ್ ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹೊರ ಹೊಮ್ಮಿದ್ದಾನೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭರವಸೆಯ ಬಾಲನಟ ಅಭಿಜಯ್ ಜೋಶಿ - Chitratara.com
Copyright 2009 chitratara.com Reproduction is forbidden unless authorized. All rights reserved.