Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭಾನು ವೆಡ್ಸ್ ಭೂಮಿ
Posted date: 22 Thu, Feb 2018 03:58:31 PM
ಸವಿಕಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಂ.ಸ್ವಾಮಿ, ಗುರುಲಿಂಗಯ್ಯ ಹಾಗೂ  ಜಿ.ಕೆ. ಆದಿ ನಿರ್ಮಾಣದ ಭಾನು ವೆಡ್ಸ್ ಭೂಮಿ ಚಿತ್ರದ ಮುಹೂರ್ತ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಲಿದೆ.  ಮೈಸೂರಿನ ಸುತ್ತಮುತ್ತ ನಡೆಯಲಿರುವ ಈ ಚಿತ್ರವನ್ನು  ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ.  ಈ ಚಿತ್ರದ ಛಾಯಾಗ್ರಹಣ - ಗಣೇಶ್ ಹೆಗ್ಡೆ, ಸಂಗೀತ- ಲೋಕೇಶ್, ಸಂಕನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ - ರವಿಕುಮಾರ್, ತಾರಾಗಣದಲ್ಲಿ - ನವನಾಯಕ ಪ್ರಜ್ವಲ್, ಶೋಭರಾಜ್, ಚಿಕ್ಕಣ್ಣ, ಪವನ್, ಸಂಗೀತ, ಸುಧಾ ಬೆಳವಾಡಿ, ಮುಂತಾದವರಿದ್ದು ಈ ಚಿತ್ರಕ್ಕೆ ಮುದ್ದು ಮುಖದ ಸುಂದರ ನಾಯಕಿಯ ಹುಡುಕಾಟದಲ್ಲಿದ್ದು ಉಳಿದ ತಾಂತ್ರಿಕ ಕಲಾವಿದರ ಆಯ್ಕೆ ನಡೆಯುತ್ತಿದೆ.  ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ಭಾನು ಮತ್ತು ಭೂಮಿ ಒಬ್ಬರನ್ನೊಬ್ಬರು ನೋಡುತ್ತಾ  ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭಾನು ವೆಡ್ಸ್ ಭೂಮಿ - Chitratara.com
Copyright 2009 chitratara.com Reproduction is forbidden unless authorized. All rights reserved.