Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಂಗಳೂರಿನಲ್ಲಿ ಮಾರ್ಚ್-22 ಆಡಿಯೋ ಬಿಡುಗಡೆ
Posted date: 03 Thu, Aug 2017 08:31:16 AM
ನೀರಲ್ಲಿಯೂ ಜಾತಿ ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥಾದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥಾದ್ದೇ ಜೀವಪರ ಆಶಯವುಳ್ಳ ಕಥೆ ಹೊಂದಿರುವ ಈ ಚಿತ್ರಕ್ಕೆ ಈ ಹೆಸರಲ್ಲದೇ ಬೇರ‍್ಯಾವುದೂ ಸರಿ ಹೊಂದಲಿಕ್ಕಿಲ್ಲ.. ಅದು ‘ಮಾರ್ಚ್ 22’. ಇದೊಂದೇ ಅಲ್ಲದೇ ನೀರಿನ ಸದ್ಬಳಕೆಯ ಬಗೆಗೆ ಅರಿವು ಮೂಡಿಸುವಂಥಾ ವಿಚಾರವೂ ಈ ಕಥೆಯಲ್ಲಿ ಅಡಕವಾಗಿದೆಯಂತೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರ ಸಂಪೂರ್ಣಗೊಂಡಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಕೂಡಾ ನೆರವೇರಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಈ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ ನಾಗ್ ಧ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಟ್ರೇಲರ್ ರಿಲೀಸ್ ಮಾಡಿದರು ಇನ್ನು ಭೀಮೇಶ್ವರ ಜೋಷಿ, ಹರಿಕೃಷ್ಣ ಪುನರೂರು ಮುಂತಾದ ಅನೇಕ ಗಣ್ಯರ ಸಮ್ಮುಖದಲ್ಲಿ ಆಡಿಯೋ ಅನಾವರಣಗೊಂಡಿತು.
ಈ ಚಿತ್ರಕ್ಕೆ ಆರ್ಯವರ್ಧನ, ಕಿರಣ್ ರಾವ್, ಮೇಘಶ್ರೀ, ದೀಪಾ ಶೆಟ್ಟಿ, ಶರತ್ ಲೋಹಿತಾಶ್ವ, ರವಿಶಂಕರ್, ರವಿಕಾಳೆ, ಜೈಜಗದೀಶ್, ವಿನಯಾ ಪ್ರಸಾದ್, ಪದ್ಮಜಾ ರಾವ್, ಪವಿತ್ರ ಲೋಕೇಶ್ ಮುಂತಾದವರ ತಾರಾಗಣವಿದೆ. ‘ಮಾರ್ಚ್ 22’ ಚಿತ್ರ ಚಿತ್ರೀಕರಣ ಪೂರೈಸಿ ಡಬ್ಬಿಂಗ್ ಕಾರ್ಯ ಕೂಡಾ ಸಂಪೂರ್ಣಗೊಂಡಿದೆ. ಇನ್ನು ಬಿಡುಗಡೆಯ ಹಂತದಲ್ಲಿರುವಾಗಲೇ ಹಿಂದಿ ಸೇರಿದಂತೆ ಪರಭಾಷೆಗಳಿಂದ ಡಬ್ಬಿಂಗ್ ಹಕ್ಕು ಪಡೆಯಲು ಅನೇಕರು ಮುಂದೆ ಬಂದಿದ್ದಾರೆ. 
ಇನ್ನುಳಿದಂತೆ ರವಿಶೇಖರ್ ಸಂಗೀತ, ಸುಭಾಶ್ ಕಡಕೋಳ ಕಲೆ, ಕೆ ಜಗದೀಶ ರೆಡ್ಡಿ ಸಹಕಾರ ನಿರ್ದೇಶನ, ಬಿ.ಎ ಮಧು ಸಂಭಾಷಣೆ, ಕರ್ವಾ ಖ್ಯಾತಿಯ ಮೋಹನ್ ಅವರ ಛಾಯಾಗ್ರಹಣ, ಬಸವರಾಜ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ಹರೀಶ್ ಶೇರೆಗಾರ್, ನರೇಂದ್ರ ಹಾಗೂ ರಾಜಶೇಖರ್ ನಿರ್ಮಾಪಕರಾಗಿದ್ದಾರೆ. ಸರವಣ ಮತ್ತು ನಾಗರಾಜ ಹಾಸನ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಂಗಳೂರಿನಲ್ಲಿ ಮಾರ್ಚ್-22 ಆಡಿಯೋ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.