Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಂಜುನಾಥನ ಗೆಳಯರಿಗಾಗಿ ಮತ್ತೆ ಬಣ್ಣ ಹಚ್ಚಿದ ಸತ್ಯಜಿತ್
Posted date: 19 Tue, Dec 2017 10:15:47 AM
ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬದುಕಿನ ಕಥೆಯನ್ನು ಹೊಂದಿರುವ ವಿನೂತನ ಚಲನಚಿತ್ರ ‘ದಿ| ಮಂಜುನಾಥನ ಗೆಳೆಯರು’ ಇದೀಗ ಚಿತ್ರೀಕರಣ ಮುಗಿಸಿ, ಮುಂದಿನ ಕಾರ್ಯಕ್ಕೆ ಅಣಿಯಾಗಿದೆ. ಅರುಣ್ ಎಸ್.ಡಿ. ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಇತ್ತೀಚೆಗಷ್ಟೇ ಗ್ಯಾಂಗಿನ್ ನಿಂದ ಕಾಲನ್ನು ಕಳೆದುಕೊಂಡಿರುವ ನಟ ಸತ್ಯಚಿತ್ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಕಮಿಷನರ್ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ ಎಂದು ನಿರ್ದೇಶಕ ಅರುಣ್ ತಿಳಿಸಿದ್ದಾರೆ. ಲವ್ ಮತ್ತು ಹಾರರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
 
೮೦೭ ಪ್ರೊಡಕ್ಷನ್ ಲಾಂಛನದಲ್ಲಿ ಅರುಣ್ ಎಸ್.ಡಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೂರ್ಣ ಮತ್ತು ಮೊಹ್ಮದ್ ಅಮಿನ್ ಛಾಯಾಗ್ರಹಣ, ವಿನಯ್ ಕುಮಾರ್ ಶಾಸ್ತ್ರಿ ಸಂಗೀತ, ಕುಮಾರ್ ಸಿಕೆ ಸಂಕಲನ, ಗೋಪಿ ಸೀಗೇಹಳ್ಳಿ-ಅರುಣ್ ಸಾಹಿತ್ಯ, ರವಿ ಪೂಜಾರ್ ಕಲಾನಿರ್ದೇಶನವಿದೆ. ರುದ್ರಪ್ರಯಾಗ್, ಶೀತಲ್ ಪಾಂಡ್ಯ, ಶಂಕರಮೂರ್ತಿ, ಸತ್ಯಜಿತ್, ಅವಿನಾಶ್ ಮುದ್ದಪ್ಪ, ರವಿ ಪೂಜಾರ್, ಹೆಚ್.ಎನ್. ಸಚಿನ್, ನವೀನ್, ಶಿವಣ್ಣ, ಮೋಹನ್ ದಾಸ್, ಸುಂಗಾರಿ ನಾಗರಾಜ್, ಹರಿಹರ ಗೋಪಾಲನ್, ಜ್ಯೋತಿ ಮೂರೂರು, ರಾಧಾ ಕೆಂಪೇಗೌಡ, ಪ್ರಭಾಕರ್ ರಾವ್ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಂಜುನಾಥನ ಗೆಳಯರಿಗಾಗಿ ಮತ್ತೆ ಬಣ್ಣ ಹಚ್ಚಿದ ಸತ್ಯಜಿತ್ - Chitratara.com
Copyright 2009 chitratara.com Reproduction is forbidden unless authorized. All rights reserved.