Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಡಿಕೇರಿಯಲ್ಲಿ ನಾಕುಮುಖ ಚಿತ್ರಕ್ಕೆ ಚಾಲನೆ
Posted date: 25 Thu, Jan 2018 01:13:50 PM
ದರ್ಶನ್ ರಾಗ್ ನಿರ್ಮಾಣದ ‘ನಾಕುಮುಖ‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ ಸನ್ನೆವೇಶಕ್ಕೆ ಶಕ್ತಿ ಪತ್ರಿಕೆಯ ಸಂಪಾದಕರಾದ ಶ್ರೀಚಿದ್‌ವಿಲಾಸ್ ಆರಂಭ ಫಲಕ ತೋರಿದರು. ಬೇಬಿ||ಧ್ವನಿ ಕ್ಯಾಮೆರಾ ಚಾಲನೆ ಮಾಡಿದರು.
ಕುಶಾನ್ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಮಹೇಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಡಿಕೇರಿಯಲ್ಲಿ ನಾಕುಮುಖ ಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.