Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮನಸ್ಸಿನ ಮರೆಯಲಿ ಚಿತ್ರೀಕರಣ ಮುಕ್ತಾಯ
Posted date: 09 Tue, Jan 2018 10:29:10 AM
ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀಮತಿ. ಶಬೀನಾ ಅರಾ ಹಾಗೂ ಕಿಂಗ್ ಲಿಂಗರಾಜು ನಿರ್ಮಿಸುತ್ತಿರುವ ಮನಸ್ಸಿನ ಮರೆಯಲಿ ಚಿತ್ರಕ್ಕಾಗಿ ಕಳೆದ ವಾರ ಮಂಗಳೂರು, ಮಡಿಕೇರಿ, ಸಕಲೇಶಪುರ, ಸೂರತ್‌ಕಲ್ ಬೀಚ್ ಸುತ್ತಮುತ್ತ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.  ನಾಯಕ ಕಿಶೋರ್ ಯಾದವ್, ದಿವ್ಯ ಗೌಡ ಅಭಿನಯದ ಮನಸ್ಸಿನ ಮರೆಯಲಿ  ಒಂದು ಕವಿತೆ, ಹೃದಯದ ಗುಡಿಯಲಿ ಪ್ರೀತಿ ಹಣತೆ ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತು.
ಈ ಹಿಂದೆ ಆಸ್ಕರ್, ಮಿಸ್ ಮಲ್ಲಿಗೆ, ಮೋನಿಕಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪವನ್ ಕುಮಾರ್ ಛಾಯಾಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್.ಸಾಯಿರಾಂ ಚಿತ್ರಕಥೆ, ಸಂಭಾಷಣೆ, ಹರೀಶ್ ಗಿರಿಗೌಡ ಸಂಕಲನ, ರಾಜೇಶ್ ಜಾನ್, ನಾಗಿ ನೃತ್ಯ ನಿರ್ದೇಶನವಿದೆ.  ಕಿಶೋರ್ ಯಾದವ್, ದಿವ್ಯಗೌಡ, ಭೋಪಾಲ್, ರಾಜ್, ಭಗವತ್, ವರ್ಧನ್, ತೀರ್ಥಹಳ್ಳಿ ಮಾಸ್ಟರ್ ರಾಕಿನ್, ಪ್ರಿಯಾಂಕ, ನಂದಗೋಪಾಲ್, ಪುಷ್ಪ, ಶುಕ್ಲ ಸಂದಿಪ್ ಮುಲಾನಿ ಮುಂತಾದವರ ತಾರಾಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮನಸ್ಸಿನ ಮರೆಯಲಿ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.