Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾತಿನಮನೆಯಲ್ಲಿ `ತಿರುಗಿಸೋ ಮೀಸೆ`
Posted date: 26 Thu, Sep 2019 – 10:58:33 AM

ಶ್ರೀಶ್ರೀನಿವಾಸ ಮೂವೀಸ್ ಹಾಗೂ ರಿಜ್ವಾನ್ ಎಂಟರ್‌ಟೈನ್‌ಮೆಂಂಟ್ ಲಾಂಛನದಲ್ಲಿ ಶ್ರೀನಿವಾಸ್ ಜಿ ಹಾಗೂ ರಿಜ್ವಾನ್ ಅವರು ನಿರ್ಮಿಸುತ್ತಿರುವ ‘ತಿರುಗಿಸೋ ಮೀಸೆ‘ ಚಿತ್ರಕ್ಕೆ ಮಾತಿನ ಜೋಡಣೆ(ಡಬ್ಬಿಂಗ್) ಆರ್.ಪಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬೆಂಗಳೂರು, ಹಿಂದೂಪುರ, ಅನಂತಪುರ ಹಾಗೂ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಲಿರಿಕಲ್ ವಿಡಿಯೋ ವೈರಲ್ ಆಗಿದೆ. ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಮುಂದಿನ ತಿಂಗಳು ಆಡಿಯೋ ರಿಲೀಸ್ ಆಗಲಿದೆ. ವಿ.ಮನೋಹರ್, ರಾಘವೇಂದ್ರ ಕಾಮತ್ ಹಾಗೂ ಚಂದ್ರಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.
ಕೃಷ್ಣವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬಾಬ್ಲಿ ಅವರ ಸಂಗೀತ ನಿರ್ದೇಶನವಿದೆ.  ಸಿದ್ದು ಅವರ ಛಾಯಾಗ್ರಹಣವಿದೆ. ಧರ್ಮೇಂದ್ರ ಸಂಕಲನ ಹಾಗೂ ಕನಕ, ಶರ್ಮಿಳಾ ಶೆಟ್ಟಿ ಅವರ ಕಾಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀವಿಷ್ಣು, ನಿಕ್ಕಿ ತಂಬೊಲಿ, ರೋಹಿಣಿ, ಶ್ರೀಕಾಂತ್ ಅಯ್ಯಂಗಾರ್, ಕೆಂಪೇಗೌಡ, ರಾಮರಾವ್, ರವಿವರ್ಮ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾತಿನಮನೆಯಲ್ಲಿ `ತಿರುಗಿಸೋ ಮೀಸೆ` - Chitratara.com
Copyright 2009 chitratara.com Reproduction is forbidden unless authorized. All rights reserved.