Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾಸ್ಟರ್ ಆನಂದ್ ನಿರ್ದೇಶನದಲ್ಲಿ ನಿಗೂಢ ರಾತ್ರಿ
Posted date: 15 Sat, Jul 2017 09:59:56 AM
ರೆಗ್ಯುಲರ್ ಫಾರ್ಮ್ಯಾಟ್ ಬಿಟ್ಟು ಹೊಸತನದ ನಿರೂಪಣೆ, ಕಥೆ ಹೊಂದಿರುವ  ಧಾರಾವಾಹಿಗಳು, ರಿಯಾಲಿಟಿ ಷೋಗಳ ಮೂಲಕ  ಕನ್ನಡ ಕಿರುತೆರೆ ವೀಕ್ಷಕರ ಮನೆಮಾತಾಗಿ ಮುಂದುವರೆದಿರುವ ಜೀ ಕನ್ನಡ ವಾಹಿನಿ ಸಧ್ಯದಲ್ಲೇ  ಮೊದಲ ಸ್ಥಾನಕ್ಕೆ ಲಗ್ಗೆ ಇಡುತ್ತಿದೆ.  ನಾಗಿಣಿ, ಗಂಗಾ, ಬ್ರಹ್ಮಗಂಟು, ಜೋಡಿ ಹಕ್ಕಿ, ಪತ್ತೆದಾರಿ ಪ್ರತಿಭಾ, ಸುಬ್ಬಲಕ್ಷ್ಮಿ ಸಂಸಾರದಂಥ ಯಶಸ್ವಿ ಧಾರಾವಾಹಿಗಳನ್ನು ಕೊಟ್ಟ ನಂತರ ಇದೀಗ ಮತ್ತೊಂದು ಹಾರರ್ ಕಥಾನಕವನ್ನು ಅರ್ಪಿಸಲು ಸಿದ್ದವಾಗಿದೆ. ನಿಗೂಢರಾತ್ರಿ ಎಂಬ ರೋಮಾಂಚಕ ಹಾರರ್ ಧಾರಾವಾಹಿಯನ್ನು ಇದೇ ಜುಲೈ 17ರಿಂದ ಆರಂಭಿಸುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ನಿಗೂಢ ರಾತ್ರಿ ಪ್ರಸಾರವಾಗಲಿದೆ.   
 
ಮಲೆನಾಡಿನ ಸುಂದರ ಹಳ್ಳಿಯ ಆಗರ್ಭ ಶ್ರೀಮಂತ ಸೂರ್ಯ ನಾರಾಯಣ ಅವರ  ಮನೆಯಲ್ಲಿ ನಡೆಯುವ ಹಲವಾರು ವಿಚಿತ್ರ ಘಟನೆಗಳನ್ನು ನಿಗೂಢರಾತ್ರಿ ಹೇಳಲಿದೆ. ಸೂರ್ಯ ನಾರಾಯಣ ಮತ್ತು ಆತನ ಆರು ಜನ ಮಕ್ಕಳು ವಾಸವಾಗಿರುವ ಆ ಮನೆಯಲ್ಲಿ ಸರಣಿಯಂತೆ ಒಂದರ ಮೇಲೊಂದು ಅನುಮಾನಾಸ್ಪದವಾದ ಘಟನೆಗಳು ನಡೆಯುತ್ತವೆ. ಅಲ್ಲದೆ ಆ ಮನೆಯ ಹಿರಿಯ ಸೂರ್ಯ ನಾರಾಯಣ ಅವರ ಅನಿರೀಕ್ಷಿತ ಸಾವು ಮನೆಯವರಿಗೆ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡುತ್ತದೆ. ಆ ಮನೆಯ ಸುತ್ತ ಸುತ್ತುತ್ತಿದ್ದ ಪ್ರೇತಾತ್ಮವೇ ಸೂರ್ಯ ನಾರಾಯಣನನ್ನು ಬಲಿ ತೆಗೆದುಕೊಂಡಿದೆ ಎಂದು ನಂಬುವ ಮನೆಯವರು ಆ ಎಲ್ಲಾ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾರೆ ಮತ್ತು ನಡೆಯುತ್ತಿರುವ ಕಲ್ಪನೆಗೂ ನಿಲುಕದ ಭಯಾನಕ ಚಟುವಟಿಕೆಗಳನ್ನು ಅವರು ಹೇಗೆ ತಡೆಯುತ್ತಾರೆ ಎಂಬ ಕತುಹಲಕಾರಿ ಚಿತ್ರಕಥೆಯೊಂದಿಗೆ ಈ ಧಾರಾವಾಹಿಯು  ಮೂಡಿ ಬರಲಿದೆ. ಹಾರರ್ ಕಥೆಗಳಲ್ಲಿಯೇ ಇದು ಹೊಸ ಟ್ರೆಂಡ್ ಸೃಷ್ಟಿ ಮಾಡಲಿದೆ ಎನ್ನಲಾಗುತ್ತಿದೆ. 
 
ನಿಗೂಢ ರಾತ್ರಿ ಧಾರಾವಾಹಿಯನ್ನು ಜೋನಿ ಫಿಲ್ಮ್ಸ್ ಸಂಸ್ಥೆಯು ನಿರ್ಮಿಸುತ್ತಿದೆ.  ಕಿರುತೆರೆಯ ಮತ್ತು ರಂಗಭೂಮಿಯ ಹಲವಾರು ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವುದು ಇಲ್ಲಿ ವಿಶೇಷ.  ಈಗಾಗಲೇ ಹಲವಾರು  ಹಾಸ್ಯ ಧಾರಾವಾಹಿಗಳನ್ನು ನಿರ್ದೇಶಿಸಿ ಈಗ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ  ಪ್ರತಿಭೆ ಮಾಸ್ಟರ್ ಆನಂದ್ ಮೊದಲ ಬಾರಿಗೆ ಹಾರರ್ ಧಾರಾವಾಹಿಯೊಂದನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಈಗಾಗಲೇ ತನ್ನ ವಿನೂತನ ಪ್ರೋಮೊಗಳ ಮೂಲಕ  ನೋಡುಗರಲ್ಲಿ ಕುತೂಹಲ ಹುಟ್ಟಿಸಿರುವ ನಿಗೂಢ ರಾತ್ರಿ ಧಾರಾವಾಹಿ ಇದೇ ಜುಲೈ 17ರಂದು ರಾತ್ರಿ 10.30ಕ್ಕೆ  ಪ್ರಸಾರ ಆರಂಭಿಸಲಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸ್ಟರ್ ಆನಂದ್ ನಿರ್ದೇಶನದಲ್ಲಿ ನಿಗೂಢ ರಾತ್ರಿ - Chitratara.com
Copyright 2009 chitratara.com Reproduction is forbidden unless authorized. All rights reserved.