Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಿತ್ರ ರಕ್ಷಕ-೩ ಮಾತಿನ ಭಾಗ ಮುಕ್ತಾಯ
Posted date: 28 Thu, Sep 2017 08:33:41 AM
ಸಿನಿಮಾದಲ್ಲೊಂದು ಸಿನಿಮಾ ಕಾನ್ಸೆಪ್ಟ್‌ನಲ್ಲಿ ತಯಾರಾಗಿರುವ ಮತ್ತೊಂದು ಚಿತ್ರ ಮಿತ್ರ ರಕ್ಷಕ -೩ ಹೊಸ ತರದ ಹಾರರ್ ಕಂಟೆಂಟ್ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು ೦೨ ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಈಗಾಗಲೇ ಹಲವಾರು ಚಲನಚಿತ್ರಗಳಿಗೆ ಆಕ್ಷ್ಯನ್ ಕಟ್ ಹೇಳಿ ಗುರುತಿಸಿಕೊಂಡಿರುವ ಓಂ.ಪ್ರಕಾಶ್ ನಾಯ್ಕ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದ ೦೨ ಹಾಡುಗಳನ್ನು ಚಿಕ್ಕಮಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. 
 
ಚಿತ್ರತಂಡವೊಂದು ಆಪ್ತ ಮಿತ್ರ-೩ ಎಂಬ ಚಿತ್ರದ ಶೂಟಿಂಗೆಂದು ಮಡಿಕೇರಿಯ ಕಾಡಿನ ಮನೆಯೊಂದಕ್ಕೆ ಹೋದಾಗ ತಂಡದಲ್ಲಿದ್ದವರೆಲ್ಲಾ ಒಬ್ಬೊಬ್ಬರ ಹಿಂದೆ ಒಬ್ಬೊಬ್ಬರಂತೆ ಕೊಲೆಯಾಗುತ್ತಾ ಹೋಗುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. 
 
ಮಾದೇಶ್ವರ ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಿರಣ್ ಛಾಯಾಗ್ರಹಣ, ದೇವು, ಮಧುರಾ ಸಂಗೀತಾ, ಕುಮಾರ್‌ಗೌಡ ಸಂಕಲನ, ಸಂತೋಷ್ ನೃತ್ಯ ನಿರ್ದೇಶನವಿದೆ. ಶ್ರೀಧರ್, ಸ್ವಪ್ನ, ಸ್ಮೈಲ್ ಶಿವು, ಕಾವ್ಯ, ಓಂಪ್ರಕಾಶ್ ನಾಯ್ಕ್, ಅವಿನಾಶ್ ಭಾರದ್ವಾಜ್, ಶಂಕರ್ ಬಾಬು, ರುದ್ರೇಶ್, ಸ್ಮಿತಾ, ಅನಿಲ್, ನವೀನ್, ನೆಲಮಂಗಲ ಜಗದೀಶ್ ಬಾಬು, ಪ್ರಸನ್ನ ಮುಂತಾದವರ ತಾರಾಬಳಗವಿದೆ. 


 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಿತ್ರ ರಕ್ಷಕ-೩ ಮಾತಿನ ಭಾಗ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.