Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಿಸ್ಟರ್ ಎಲ್.ಎಲ್.ಬಿ.ಗೆ ಇಡ್ಲಿ ವಡಾ ಸಾಂಗು
Posted date: 22 Tue, Aug 2017 09:55:10 AM
ಆರ್.ವಿ.ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮಿಸ್ಟರ್ ಎಲ್.ಎಲ್.ಬಿ. ಚಿತ್ರಕ್ಕೆ ಇದೇ ಸೋಮವಾರ ಮಾಗಡಿ ರೋಡಿನ ಜನಪ್ರಿಯ ಅಪಾರ್ಟ್‌ಮೆಂಟ್ಸ್ ಬಳಿಯ ಸೆಟ್ ಒಂದರಲ್ಲಿ ಬಾಂಬೆ ಬೆಡಗಿ ಅಭಿನಯಿಸಿದ ಇಡ್ಲಿ ವಡಾ ಸಾಂಬಾರ್, ಬೆಂಗಳೂರು ಮಂಗಳೂರು ನಂದೇನೆ ದರ್ಬಾರು, ದೊಡ್ಡಗೌಡ್ರು ಊರಿನಲ್ಲಿ ತುಂಬಾನೇ ಫೇಮಸ್ ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು.  ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ, ಪ್ರೇಮದೊಂದಿಗೆ ಹಾಸ್ಯನಕ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಥಮ ಪ್ರತಿ ಸದ್ಯದಲ್ಲೇ ಹೊರಬರಲಿದೆ.  
ರಘುವರ್ಧನ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಮಂಜುಚರಣ್ ಸಂಗೀತ ರಾಜು ಬೆಳಗೆರೆ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಸಂಕಲನ, ಗೌಸ್‌ಫಿರ್ ಮಂಜುಚರಣ್ ಸಾಹಿತ್ಯ ಕಲೆ ಮಾಸ್ಟರ್ ತ್ರಿಭುವನ್ ನೃತ್ಯ ನಿರ್ದೇಶನ ಪ್ರಭು ಕಲಾನಿರ್ದೇಶನವಿದೆ.  ಶಿಶಿರ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ್ರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತಾ ಆಚಾರ್ಯ, ನಾರಾಯಣಸ್ವಾಮಿ, ಡೈಮಂಡ್ ರಾಜಣ್ಣ, ಡಾ|| ಸೋಮಶೇಖರ್ ರಾಮಣ್ಣ ಮುಂತಾದವರು ತಾರಾ ಬಳಗವಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಿಸ್ಟರ್ ಎಲ್.ಎಲ್.ಬಿ.ಗೆ ಇಡ್ಲಿ ವಡಾ ಸಾಂಗು - Chitratara.com
Copyright 2009 chitratara.com Reproduction is forbidden unless authorized. All rights reserved.