Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮುಂದಿನ ತಿಂಗಳು ಹಾಲುತುಪ್ಪ
Posted date: 28 Thu, Sep 2017 08:41:26 AM
ದೊಡ್ಮನೆ ವೆಂಕಟೇಶ್ ನಿರ್ಮಾಣದ, ಶಶಾಂಕ್ ರಾಜ್ ನಿರ್ದೇಶನದ ‘ಹಾಲು ತುಪ್ಪ ಚಿತ್ರ ತಿಥಿ ಖ್ಯಾತಿಯ ಗಡ್ಡಪ್ಪನವರ ಇರುವಿಕೆಯೂ ಸೇರಿದಂತೆ ನಾನಾ ಕಾರಣಗಳಿಂದ ಸೆಟ್ಟೇರಿದ ಕ್ಷಣದಿಂದಲೂ ಸುದ್ದಿಯಲ್ಲಿತ್ತು. ಪಾಂಡವಪುರ ಸುತ್ತಮುತ್ತ ಅವಿರತವಾಗಿ ಚಿತ್ರೀಕರಣ ನಡೆಸಿಕೊಂಡಿದ್ದ ಈ ಚಿತ್ರ ಅಕ್ಟೋಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ.
 
ಇಲ್ಲಿ ಗಡ್ಡಪ್ಪ ಹಾಗೂ ಸೆಂಚುಜ಼್‌ರಿ ಗೌಡ ಇದ್ದಾರೆ ಅನ್ನುವ ಕಾರಣಕ್ಕೆ ಇದು ‘ತಿಥಿ’ ಸಾಲಿನ ಸಿನಿಮಾ ಅಲ್ಲ. ಹಾಗೆಂದೇ ಶೀರ್ಷಿಕೆಗೆ ತಿಥಿ ಅಲ್ಲ ಅಂತಾನೇ ಅಡಿಬರಹ ಬರೆದಿದ್ದಾರೆ ನಿರ್ದೇಶಕರು. ಹಾಲು-ತುಪ್ಪ ಶ್ರೇಷ್ಠವಾದದ್ದು. ಅದನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಅದರಂತೆಯೇ ನಮ್ಮ ಬದುಕು ಕೂಡ ತುಪ್ಪದಂತೆಯೇ ಸಾಗಬೇಕು ಎಂಬ ಅಂಶವನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ.
 
ಚಿತ್ರದಲ್ಲಿ ಪವನ್ ಸೂರ್ಯ ನಾಯಕರಾಗಿದ್ದಾರೆ. ಅವರಿಗೆ ಇದು ಮೂರನೇ ಸಿನಿಮಾ. ಮೌನ ಅವರಿಗೆ ನಾಯಕಿ. ಇದು ಮೌನ ಅವರ ಮೊದಲ ಚಿತ್ರ. ಇವರೊಂದಿಗೆ ಹೊನ್ನವಳ್ಳಿ ಕೃಷ್ಣ, ಜಯರಾಂ ಇತರರು ನಟಿಸಿದ್ದಾರೆ. ನಿರ್ಮಾಪಕ ದೊಡ್ಮನೆ ವೆಂಕಟೇಶ್ ಅವರು ಹಿಂದೆ ಭೂಮಿಪುತ್ರ ಶೀರ್ಷಿಕೆಯಲ್ಲಿ ಸ್ಟಾರ್ ನಟರೊಬ್ಬರ ಚಿತ್ರ ಮಾಡಲು ಅಣಿಯಾಗಿದ್ದರು. ಅಷ್ಟರಲ್ಲಿ ಶಶಾಂಕ್ ರಾಜ್ ಈ ಕಥೆ ಹೇಳಿದ್ದೇ ತಡ, ಆ ಚಿತ್ರವನ್ನು ಬದಿಗೊತ್ತಿ, ಹಾಲುತುಪ್ಪ ಚಿತ್ರ ಮಾಡಿದ್ದಾರೆ. ಇಂದ್ರ ಸೇನಾ ಸಂಗೀತ ನೀಡಿದ್ದಾರೆ. ದಿಲ್‌ಸೇ ದಿಲೀಪ್ ನಾಲ್ಕು ಗೀತೆಗಳನ್ನು ರಚಿಸಿದ್ದಾರೆ. ಜೋಗಿ ಪ್ರೇಮ್, ಚಂದನ್‌ಶೆಟ್ಟಿ, ಇಂದು ನಾಗರಾಜ್ ಹಾಡಿದ್ದಾರೆ. ಆರ್.ವಿ.ನಾಗೇಶ್ವರರಾವ್ ಅವರ ಛಾಯಾಗ್ರಹಣವಿದೆ. ಸಾಯಿರಾಂ ಸಂಭಾಷಣೆ ಬರೆದಿದ್ದಾರೆ. ಸೆಂಚುರಿ ಗೌಡ, ಗಡ್ಡಪ್ಪ, ಪವನ್, ಮೌನ, ಹೊನ್ನವಳ್ಳಿ ಕೃಷ್ಣ, ನಾಗರಾಜ ಕೋಟೆ, ಬಸವರಾಜ್ ಕಟ್ಟಿ, ಜಯರಾಂ, ಕುರಿ ಸುನೀಲ್ ತಾರಾಗಣದಲ್ಲಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮುಂದಿನ ತಿಂಗಳು ಹಾಲುತುಪ್ಪ - Chitratara.com
Copyright 2009 chitratara.com Reproduction is forbidden unless authorized. All rights reserved.