Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೆಜೆಸ್ಟಿಕ್ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರಿಗೆ ದರ್ಶನ್ ಅವರಿಂದ ಸನ್ಮಾನ!
Posted date: 09 Wed, Aug 2017 08:47:38 AM
ಐವತ್ತನೇ ಚಿತ್ರದ ಮುಹೂರ್ತದಲ್ಲಿ ಮೊದಲ ಅನ್ನದಾತರನ್ನು ನೆನೆಸಿಕೊಂಡರು ದರ್ಶನ್! ಮೆಜೆಸ್ಟಿಕ್ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರಿಗೆ ದರ್ಶನ್ ಅವರಿಂದ ಸನ್ಮಾನ!
 
ಕಡು ಕಷ್ಟದಿಂದ ಮೇಲೆದ್ದು ಬಂದ ಅನೇಕರು ಯಶಸ್ಸಿನ ಉತ್ತುಂಗಕ್ಕೆರುತ್ತಲೇ ಹಳೆಯದ್ದನ್ನೆಲ್ಲ ಮರೆತು ಮೆರೆದಾಡೋದೇ ಹೆಚ್ಚು. ಆದರೆ ಕೆಲವೇ ಕೆಲ ವ್ಯಕ್ತಿತ್ವಗಳು ಮಾತ್ರವೇ ಕಷ್ಟ ಕಾಲದಲ್ಲಿ ನೆರವಾದವರನ್ನು ಯಾವತ್ತಿಗೂ ಮರೆಯುವುದೇ ಇಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ನಿಸ್ಸಂಶಯವಾಗಿ ಅದೇ ಸಾಲಿಗೆ ಸೇರುವವರು.
 
ಈ ಮಾತಿಗೆ ತಾಜಾ ಉದಾಹರಣೆಯಂಥಾ ಸನ್ನಿವೇಶವೊಂದು ನಿನ್ನೆ ದರ್ಶನ್ ಅವರ ಮನೆಯಲ್ಲಿಯೇ ನಡೆದಿದೆ. ದರ್ಶನ್ ತಮ್ಮ ಐವತ್ತನೇ ಚಿತ್ರ ಕುರುಕ್ಷೇತ್ರದ ಮುಹೂರ್ತ ನಡೆದ ಖುಷಿಯಲ್ಲಿ ತಮಗೆ ಮೊಟ್ಟ ಮೊದಲ ಬಾರಿ ಅವಕಾಶ ನೀಡಿದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರನ್ನು ಮನೆಗೇ ಬರ ಮಾಡಿಕೊಂಡು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
 
ಎಂ.ಜಿ ರಾಮಮೂರ್ತಿ ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಪಕರು. ಈ ಹಿಂದೆ ದರ್ಶನ್ ಅವರಿಗೆ  ಮೊದಲ ಸಲ ಮೆಜೆಸ್ಟಿಕ್ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದವರು .
 ದರ್ಶನ್ ಇದೀಗ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಅವರೀಗ ಸೂಪರ್ ಸ್ಟಾರ್. ಆದರೆ ತಮ್ಮ ಐವತ್ತನೇ ಚಿತ್ರ ಮುಹೂರ್ತ ಕಾಣುವ ಕ್ಷಣದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ(ನಿರ್ಮಾಪಕರ ವಲಯ) ಆಗಿರುವ ಎಂ.ಜಿ. ರಾಮಮೂರ್ತಿಯವರನ್ನು ಸನ್ಮಾನಿಸಿದ ದರ್ಶನ್ ತಾವು ನಡೆದು ಬಂದ ಹಾದಿಯನ್ನು ಎಂದೂ ಮರೆಯೋದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರ ಸಹೋದರ ದಿನಕರ್ ಕೂಡಾ ಹಾಜರಿದ್ದದ್ದು ವಿಶೇಷ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೆಜೆಸ್ಟಿಕ್ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರಿಗೆ ದರ್ಶನ್ ಅವರಿಂದ ಸನ್ಮಾನ! - Chitratara.com
Copyright 2009 chitratara.com Reproduction is forbidden unless authorized. All rights reserved.