Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೋಜೋ ಬಗ್ಗೆ ಮಾಹಿತಿ
Posted date: 09 Sat, Dec 2017 10:36:20 AM
೨೦೧೭ ರಲ್ಲಿ ಸುಮಾರು ೧೭೫ ಕನ್ನಡ ಚಲನಚಿತ್ರಗಳು ಬಿಡುಗಡೆಯಾಗಿವೆ. ಆದರೆ ಕೇವಲ ೮ ಚಿತ್ರಗಳು ಮಾತ್ರ ೨೫ ದಿನ ಮೀರಿದ ಪ್ರದರ್ಶನ ಕಂಡಿವೆ. ಈ ಪೈಕಿ ಮೋಜೋ ಕೂಡ ಸೇರಿದೆ ಎಂಬುದು ಹೆಮ್ಮೆಯ ಸಂಗತಿ.

ಚಲನಚಿತ್ರ ಕ್ಷೇತ್ರದ ಯಾವುದೇ ಹಿನ್ನೆಲೆ ಇಲ್ಲದ ಹೊಸ ಪ್ರಯತ್ನವಾಗಿ ಮೂಡಿ ಬಂದ ಈ ಚಿತ್ರದ ಯಶಸ್ಸಿನ ಹಿಂದೆ ಯಾವುದೇ ಧೀಮಂತ ವ್ಯಕ್ತಿ ಇಲ್ಲ ಅಥವಾ ಜನಪ್ರಿಯ ತಾರೆಗಳು ಇದರ ರಾಯಭಾರಿಗಳಾಗಿರಲಿಲ್ಲ. ಆದರೆ ನೀವೆಲ್ಲರೂ ಕಳೆದೆರಡು ವರ್ಷಗಳು ನಮಗೆ ಬೆಂಬಲ ನೀಡಿದ್ದೀರಿ. ನಿರ್ದೇಶಕ ಶ್ರೀಶಾ ಬೆಳಕವಾಡಿ ಜತೆಗೆ ನಿರ್ಮಾಪಕರಾದ ಗಜಾನನ್ ಭಟ್, ಸತೀಶ್ ಫಾಟಕ್, ಸಂತೋಷ್ ಪಾಟಿಲ್ ಮತ್ತು ಮನಯ್ಯ ಬಿಳಿಗ್ನೂರು  ಕೂಡ ಶ್ರಮಿಸಿದರು. ನಮ್ಮ ತಂಡ (ಇಡೀ ಚಿತ್ರದ ನಟ-ನಟಿಯರು ಮತ್ತು ಸಿಬ್ಬಂದಿ, ವಿಶೇಷವಾಗಿ ಎಸ್.ಡಿ.ಅರವಿಂದ್) ನಮ್ಮ ಜತೆಯಾಗಿದ್ದರು. ನಮ್ಮೊಲುಮೆಯ ಕುಟುಂಬಗಳು ನಮ್ಮ ತಾಳ್ಮೆ ಮತ್ತು ಹುಚ್ಚನ್ನು ಸಹಿಸಿಕೊಂಡು ನಮಗೆ ಬೆಂಬಲ ನೀಡಿದರು. 

ಇಂದಿನ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ಹೊಸ ತಂಡವಾಗಿ ಕಾಲಿಟ್ಟು ನಾಲ್ಕು ಅಂತಾರಾಷ್ಟ್ರೀಯ ಪ್ರಶಸಿ ಪಡೆದಿರುವುದು, ಎಂಟು ಬಾರಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮಾಂಕಿತಗೊಂಡಿರುವುದು ಹಾಗೂ ಚಿತ್ರಮಂದಿರಗಳಲ್ಲಿ ಅದರಲ್ಲೂ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ೨೫ ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿರುವುದು ನಮ್ಮಲ್ಲಿನ ಅಮೂಲ್ಯವಾದ ವಿಶ್ವಾಸವನ್ನು ಬಲಗೊಳಿಸಿದೆ ಮತ್ತು ಹೆಮ್ಮೆ ತಂದಿದೆ. ಮೋಜೋ ಯಾವಾಗಲೂ ನಮಗೆ ಅತಿ ವಿಶೇಷವಾಗಿಯೇ ಇರಲಿದೆ.
 
ಸುಪ್ತ ಮನಸ್ಸಿನ ಶಕ್ತಿ ಆಧಾರಿತ ದಿವ್ಯದೃಷ್ಟಿಯ ರೋಮಾಂಚನ ಕಥೆ ಹೊಂದಿರುವ ಮೋಜೋ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಮೊದಲ ಪ್ರಯತ್ನ. ನಾಯಕನ ಆರನೇ ಇಂದ್ರಿಯ (ಸಿಕ್ಸ್ತ್ ಸೆನ್ಸ್) ಆತನನ್ನು ಅಪರಾಧ, ಕೊಲೆ, ಪ್ರಣಯ ಮತ್ತು ರಹಸ್ಯಗಳಲ್ಲಿ ಹಿಡಿದಿಡುವ ಪುಳಕಗೊಳಿಸುವ ಕಥಾನಕ. ಸಾಂಪ್ರದಾಯಿಕವಲ್ಲದ ಕಥೆ ಮತ್ತು ಚಿತ್ರಕಥೆ ಹೊಂದಿರುವ ಈ ಸಿನಿಮಾಗೆ ಅಮೆರಿಕದ ಫಾಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಪ್ರಾದೇಶಿಕ ಚಿತ್ರ ಬಿರುದು ಮತ್ತು ಭಾರತದ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿ ಸೇರಿದಂತೆ ಐದು ಅಂತಾರಾಷ್ಟ್ರೀಯ ಗೌರವ (ಐದು ಅಧಿಕೃತ ಅಂತಾರಾಷ್ಟ್ರೀಯ ಮನ್ನಣೆ) ಲಭಿಸಿದೆ. 

ಮೋಜೋ ಅರ್ಹತೆ ಮತ್ತು ನಂಬಿಕೆ

ಅಮೆರಿಕದ ಫಾಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಫ್‌ಐಎಫ್‌ಎಫ್), ಗ್ಲೆಡಾಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಜಿಐಎಫ್‌ಎಫ್), ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಲ್‌ಐಎಫ್‌ಎಫ್), ಗೋಲ್ಡನ್ ಗೇಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಜಿಜಿಐಎಫ್‌ಎಫ್) ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಸಿಐಸಿಎಫ್‌ಎಫ್) ಸೇರಿದಂತೆ ಎಂಟು ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತ ಆಯ್ಕೆಯ ಗರಿ ಮೋಜೋಗೆ ಸಲ್ಲುತ್ತದೆ.
ಮೋಜೋಗೆ ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಫಾಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ, ಯುರೇಶಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ ಪ್ರಶಸ್ತಿ, ಗೋಲ್ಡನ್ ಗೇಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ ಮತ್ತು ಕೋಲ್ಕತ್ತಾ ಕಲ್ಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ/ಅಮೋಘ ಸಾಧಕ ಪ್ರಶಸ್ತಿ ಲಭಿಸಿದೆ.

ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ, ಎಂಟು ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಸುಪ್ತ ಮನಸ್ಸಿನ ರೋಮಾಂಚನ ಕಥನದ ಮೋಜೋ ಚಲನಚಿತ್ರವನ್ನು ಇನ್ನು ಕೆಲವೇ ವಾರಗಳಲ್ಲಿ ಅಮೆರಿಕದಲ್ಲಿ ಬಿಡುಗಡೆ ಮಾಡಲು ಬಯಸಿದ್ದೇವೆ. ಮೋಜೋ ಚಲನಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಜಾಲತಾಣ ಡಬ್ಲ್ಯುಡಬ್ಲ್ಯುಡಬ್ಲ್ಯು ಡಾಟ್ ಮೋಜೋದಿಫಿಲಂ ಡಾಟ್ ಕಾಮ್ (hಣಣಠಿ://ತಿತಿತಿ.moರಿoಣheಜಿiಟm.ಛಿom) ನಲ್ಲಿ ಲಭ್ಯ. ಸಾರಾಂಶ, ಸಿಬ್ಬಂದಿ/ತಂಡದ ವಿವರ, ಪ್ರಶಸ್ತಿ, ಮಾನ್ಯತೆ, ದೂರದರ್ಶನ ಪ್ರಸಾರ ವ್ಯಾಪ್ತಿ, ಸುದಿ ಮಾಧ್ಯಮ ಪ್ರಸಾರ ವ್ಯಾಪ್ತಿ, ಟ್ರೇಲರ್, ಪೋಸ್ಟರ್ ಸೇರಿದಂತೆ ವಿವಿಧ ಮಾಹಿತಿ ಜಾಲತಾಣದಲ್ಲಿ ಲಭ್ಯ.  ಅಮೆರಿಕ ಮತ್ತು ಇತರ ವಿದೇಶೀ ನೆಲದಲ್ಲಿ ಗೆಲ್ಲುವ ಹೆಚ್ಚಿನ ಸಾಧ್ಯತೆಯುಳ್ಳ ವಿಚಿತ್ರ ಬಗೆಯ ಮತ್ತು ಇತರ ಅಂತಾರಾಷ್ಟ್ರೀಯ ಶೈಲಿ ಒಳಗೊಂಡಿರುವ ವಿಶಿಷ್ಟ ಚಿತ್ರ ಮೋಜೋ. 

* ಮೋಜೋ ಶೀರ್ಷಿಕೆಯ ಮಹತ್ವವೇನು? *

ಮೋಜೋ ಪದ ಆಫ್ರಿಕಾದ (ಕ್ರಿಯೋಲಿ ಭಾಷೆ) ಮತ್ತು ಭಾರತದ (ಸಂಸ್ಕೃತ) ಭಾಷೆಯ ಮೂಲ ಹೊಂದಿದೆ. ಅದರ ಮೊದಲ ಅರ್ಥ *ಶಮನ್* (ಶಮನ ಎಂದರೆ ನೋವು ನಿವಾರಕ - ೨೫ ಸಾವಿರ ವರ್ಷಗಳು ಅಥವಾ ಅದಕ್ಕೂ ಹಿಂದಿನ ಪುರಾತನ ಧರ್ಮಗಳಲ್ಲೊಂದು ಶಮನ್ಸ್) ಅಥವಾ *ಔಷಧೀಯ ಮಾನವ* - ಯಾವುದೇ ಬಗೆಯ ರೋಗಗಳನ್ನು ನಿವಾರಿಸುವ ಪವಾಡ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಮೋಜೋ  ಅದ್ಭುತ ಅಥವಾ ಪವಾಡ ಅಥವಾ ಮೋಡಿ ಎಂಬ ಅರ್ಥಗಳನ್ನು ಹೊಂದಿದೆ.

ಮೋಜೋ ಚಲನಚಿತ್ರದಲ್ಲಿ ನಾಯಕ ತನ್ನ ಸುಪ್ತಮನಸ್ಸಿನ ಶಕ್ತಿಯಿಂದ ಭವಿಷ್ಯವನ್ನು ನೋಡಬಲ್ಲವನಾಗಿರುತ್ತಾನೆ. ಈ ಘಟನೆಗಳು ನಡೆದಂತೆ ವೀಕ್ಷಕರು ಅದ್ಭುತ ಅಥವಾ ಮ್ಯಾಜಿಕ್ ಅನುಭವ ಪಡೆಯುವರು. ಹೀಗಾಗಿ ಚಿತ್ರದ ಶೀರ್ಷಿಕೆ ಮೋಜೋ ಮಹತ್ವ ಪಡೆದಿದೆ. ಜತೆಗೆ ಚಿತ್ರದ ಮುಖ್ಯಪಾತ್ರದಾರಿಯ ಹೆಸರೂ ಕೂಡ ಮೋಜೋ ಮತ್ತು ಮೋಜೋ ಸುತ್ತ ನಡೆಯುವ ಘಟನೆಗಳೇ ಚಿತ್ರದ ಆಧಾರ. ಹಾಗಾಗಿ ಚಿತ್ರಕ್ಕೆ ಈ ಹೆಸರು ಅತಿ ಸೂಕ್ತವಾಗಿದೆ. 

ಈ ಸಮಕಾಲೀನ ಯುಗದಲ್ಲಿ, ಮೋಜೋ ಎಂದರೆ ಹೆಚ್ಚಿನ ಉತ್ಸಾಹ ಎಂದರ್ಥ. ಆದರೆ ಈ ಅರ್ಥ ಚಿತ್ರದಲ್ಲಿ ಪ್ರಸ್ತುತತೆ ಹೊಂದದೇ,  ಮೋಜೋ ಮೂಲದಲ್ಲಿ ಹೊಂದಿದ ಅರ್ಥದ ಆಧಾರದ ಮೇಲೆ ಚಿತ್ರ ರೂಪುಗೊಂಡಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೋಜೋ ಬಗ್ಗೆ ಮಾಹಿತಿ - Chitratara.com
Copyright 2009 chitratara.com Reproduction is forbidden unless authorized. All rights reserved.