ಅಬ್ಬಬ್ಬಾ ಈ ಫಟಿಂಗ ಕಾಶೀನಾಥ್ ಆಗಾಗ್ಗೆ ಮರೆವು ಅಂತ ಅವರೇ ಹೇಳಿದ್ದು ಇದೆ. ನಮ್ಮ ಪತ್ರಕರ್ತರಲ್ಲಿ ಗಣೇಶ್ ಕಾಸರಗೋಡು ಅವರು ಉದಯ ಮರಕಿಣಿ (ಇಬ್ಬರು ಗಡ್ಡದಾರಿಗಳು) ಎಂದು ಅನೇಕ ಬಾರಿ ಮರೆತೇ ಹೇಳುತ್ತಾ ಇದ್ದರು. ಆದರೆ ಅಗೆಲ್ಲ ಅವರು ಮರೆತರು ಸರಿಯಾದ ವಿಚಾರವನ್ನು ಹೇಳಿಕೊಳ್ಳುತ್ತ ಇದ್ದರು. ಅದರಲ್ಲಿ ಒಂದು ಈಗಲೂ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವುದು ಈ ಸಿಗ್ನಲ್ ಲೈಟ್ ಬಳಕೆಗೆ ಅಂಕಿಗಳನ್ನು ಬಳಸಬಹುದು ಎಂಬುದು ಈ ಕಾಶೀನಾಥ್ ಅವರು ಹಲ್ವಾ ರೀತಿ ಐಡಿಯಾ ನೀಡಿದವರು.
ಅದೆಲ್ಲ ಬಿಡಿ ಇವರಿಗೆ ಮರೆವು ಇರಬೇಕು ಎಂದು ಅವರ ಬಳಿ ‘ಓಳು ಮುನಿಸ್ವಾಮಿ’ ಪತ್ರಿಕಾ ಘೋಷ್ಟಿಯ ನಂತರ ಕುಳಿತರೆ, ಮಾರಾಯ್ರೆ ಇವರ ಜ್ಞಾಪಕ ಶಕ್ತಿಗೆ ಒಂದು ಸಲಾಂ ಹೊಡೆಯಲೇಬೇಕು ಅಂತ ಅನ್ನಿಸಿದ್ದು ಸುಳ್ಳಲ್ಲ.
ಕಾಶಿನಾಥ್ ಅವರು ಸೆಕ್ಸ್ ಸಿನಿಮಾ ಡಬಲ್ ಮೀನಿಂಗ್ ಸಿನಿಮಾ ಮಾಡುತ್ತಾರೆ ಎಂಬುದು ಹಳೆ ಕಂಪ್ಲಯಿಂಟ್ ಬಂದಾಗ ಅವರು ‘ಅನಂತನ ಆವಂತಾರ’ ಟ್ರಿಬ್ಯೂನಲ್ ಹೋಗಲು ಕಾರಣವನ್ನು ಹೇಳಿದ ಒಂದು ಸ್ಯಾಂಪಲ್ ಹೀಗಿದೆ.
ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಅನಂತನ ಆವಂತಾರ’ (ಸೇಕ್ಷುಯಲ್ ನ್ಯೂರೋಸಿಸ್) ಚಿತ್ರವನ್ನ ಸಾರಾಸಗಟಾಗಿ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಕಾರಣ ಆ ಚಿತ್ರದಲ್ಲಿ ಒಬ್ಬ ವ್ಯಕ್ತಿ ನಿರೋದ್ ತರುವುದಕ್ಕೆ ಅಂಗಡಿಗೆ ಬರುವುದು ಇದೆ. ಈ ವ್ಯಕ್ತಿಯ ಹೋಲಿಕೆ ತುಸು ಸೆನ್ಸಾರ್ ಆಧಿಕಾರಿಯವರನ್ನೆ ಹೋಲುತ್ತಾ ಇದ್ದದ್ದರಿಂದ ಅವರಿಗೆ ಕೋಪ ಬಂದು ಸಿನಿಮಾಕ್ಕೆ ಸೆನ್ಸಾರ್ ನೀಡದೆ ಕಾಶೀನಾಥ್ ಅವರು ತ್ರಿಬ್ಯೂನಲ್ ಹೋಗಲು ತೊಂದರೆ ಆಯಿತು.
ಆಗ ಟ್ರಿಬ್ಯೂನಲ್ ಅಲ್ಲಿ ಒಬ್ಬ ಮಹಿಳೆ ಅಧಿಕಾರಿ ಹೇಳಿದ್ದು ಏನು ಗೊತ್ತೇ? ಕಾಶೀನಾಥ್ ಸಾರ್ ಈ ವಿಚಾರ ಹಾಲಿವುಡ್ ಅಲ್ಲಿ ಸಹ ಹೇಳಿಲ್ಲ ಬೇಷ್ ಅಂದರಂತೆ.
ಅಸಲಿ ಆ ಚಿತ್ರದ ವಿಚಾರ ಮೊದಲ ರಾತ್ರಿಯಲ್ಲಿ ಗಂಡು ಫೆಲ್ ಆದರೆ ಅದು ಎರಡನೇ ರಾತ್ರಿಗೆ ಮೆಟ್ಟಿಲಾಗಿ ಹಾಗೆ ಅದು ಅಸಂತೋಷಕ್ಕೆ ಕಾರಣ ಒಂದು ಹೆಣ್ಣಿಗೆ ಮಾಡಿಬಿಡುತ್ತದೆ ಎಂಬುದು.
ಈಗ ಹೇಳಿ ಕಾಶೀನಾಥ್ ಅವರಿಗೆ ಮರೆವು ಇದೆಯಾ ಅಂತ. ಅವರು ನಮ್ಮ ಮುಂದೆ ಹೇಳಿದ್ದು 1988-89 ಸಮಯದ ವಿಚಾರ. ಎಲ್ಲಿಂದ ಬಂತು ಮರೆವು ಕಾಶೀನಾಥ್ ಅವರಿಗೆ.
ಸಧ್ಯಕ್ಕೆ ಅವರಿಗೆ ಇರುವುದು ತಾಯಿಗೆ ಬರುತ್ತಾ ಇದ್ದ ತಡೆಯಲಾರದ ಕೆಮ್ಮು. ಈ ಕೆಮ್ಮು ಅವರಿಗೆ ನಿದ್ರೆ ಕೊಡುತ್ತಾ ಇಲ್ಲ. ಅವರು ಕೆಲವು ಕೆಜಿ ತೂಕ ಸಹ ಕಳೆದು ಕೊಂಡಿದ್ದಾರೆ. ಆದರೂ ಓಳು ಮುನಿಸ್ವಾಮಿ ಮುಗಿಸಿಕೊಟ್ಟಿದ್ದಾರೆ. ಇತ್ತೀಚಿನ ‘ಚೌಕ’ ಅವರಿಗೆ ಹೊಸ ಬಗೆಯ ಹೆಸರು ತಂದುಕೊಟ್ಟಿದೆ. ಅವರು ಪಾತ್ರವೆ ಆಗಿ ಅಪ್ಪನ ಪಾತ್ರದಲ್ಲಿ ಮಿಂಚಿ ‘ಅಲ್ಲಾಡ್ಸ್ ಅಲ್ಲಾಡ್ಸ್...ಎಂದು ಕುಣಿದಿದ್ದಾರೆ, ಐ ಲವ್ ಯು ಅಪ್ಪ....ಎಂಬ ಹಾಡಿನಲ್ಲಿ ಕಣ್ಣು ತೋಯಿಸುವ ಹಾಗೆ ಮಾಡಿದ್ದಾರೆ.
‘ಜೂಮ್’ ಚಿತ್ರದಲ್ಲಿ ಹೇಳಿದ್ದೆ ಒಂದು ಮಾಡಿದ್ದೆ ಇನ್ನೊಂದು ಎಂದು ಕೊಂಚ ಬೇಜಾರು ಸಹ ಕಾಶೀನಾಥ್ ಮಾಡಿಕೊಳ್ಳುತ್ತಾರೆ.
ಅವರ ಬಳಿ ಇರುವ ಕೆಲವು ಕತೆಗಳಿಗೆ ಇನ್ನ ಜೀವ ಬಂದಿಲ್ಲ. ಆದರೆ ಯುವಕ ನಿರ್ದೇಶಕರುಗಳು ಅವರ ಬಳಿ ಬಂದು ಬೆಂಗಾವಲಾಗಿ ನಿಲ್ಲಿ ಅಂದರೆ ಅವರಿಗೆ ಇಷ್ಟವಿಲ್ಲದ ವಿಚಾರ.
ಕಾಶಿ ಸಧ್ಯಕ್ಕೆ ಪಾತ್ರಗಳಿಗೆ ಮಾತ್ರ ಅವಕಾಶಿ!