Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯೋಗಿ ಹುಟ್ಟುಹಬ್ಬಕೆ ಲಂಬೋದರ ಚಿತ್ರತಂಡದಿಂದ ಟೀಸರ್ ಬಿಡುಗಡೆ
Posted date: 03 Tue, Jul 2018 08:37:01 AM

ಜುಲೈ ೬ ರಂದು ಲೂಸ್‌ಮಾದ ಯೋಗಿ ಅವರ ಹುಟ್ಟುಹಬ್ಬ.  ಯೋಗಿ ಅವರ ಜನ್ಮದಿನಕ್ಕಾಗಿ ಅವರು ನಾಯಕರಾಗಿ ನಟಿಸುತ್ತಿರುವ,  ಕೆ.ಕೃಷ್ಣರಾಜ್ ನಿರ್ದೇಶನದ ‘ಲಂಬೋದರ ಚಿತ್ರತಂಡ ಟೀಸರ್ ಬಿಡುಗಡೆ ಮಾಡುತ್ತಿದೆ.  ಬಹುದಿನಗಳ ನಂತರ ಯೋಗಿ ಅವರು ನಟಿಸುತ್ತಿರುವ ಈ ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.          

ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸುತ್ತಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ‘ಲಂಬೋದರ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ.

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ. ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.  

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯೋಗಿ ಹುಟ್ಟುಹಬ್ಬಕೆ ಲಂಬೋದರ ಚಿತ್ರತಂಡದಿಂದ ಟೀಸರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.