Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಚಿತಾರಾಂ ಅಭಿನಯದಲ್ಲಿ `ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ`
Posted date: 25 Wed, Dec 2019 12:36:40 PM

ರಿಜ್ವಾನ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ರಿಜ್ವಾನ್ ಹಾಗೂ ಖುಷಿ ಅವರು ನಿರ್ಮಿಸುತ್ತಿರುವ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು  ಮೀನಾಕ್ಷಿ‘ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.  ಶ್ರೀನಿವಾಸ್.ಜಿ ಈ ಚಿತ್ರದ ಸಹ ನಿರ್ಮಾಪಕರು.

ಕಲ್ಯಾಣ್‌ದೇವ್(ಖ್ಯಾತ ನಟ ಚಿರಂಜೀವಿ ಅವರ ಅಳಿಯ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ರಚಿತಾರಾಂ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಿವರಾಜ್.ಕೆ.ಆರ್.ಪೇಟೆ, ಪ್ರಗತಿ, ರಾಜೇಂದ್ರಪ್ರಸಾದ್, ಅಜೇಯ್, ನರೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿತ್ತಿರುವ ಈ ಚಿತ್ರವನ್ನು ಪುಲಿ ವಾಸು ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನುಭವ ನಿರ್ದೇಶಕರಿಗಿದೆ. ಪುಲಿ ವಾಸು ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ತಂದೆ-ಮಗಳ ಬಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್, ವಿಶಾಖಪಟ್ಟಣ ಮುಂತಾದ ಕಡೆ 60 ದಿನಗಳ ಚಿತ್ರೀಕರಣ ನಡೆಯಲಿದೆ.

5 ಹಾಡುಗಳಿರುವ ಈ ಚಿತ್ರಕ್ಕೆ ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು, ಸ್ವಾಮಿ, ಡ್ರ್ಯಾಗನ್ ಪ್ರಕಾಶ್ ಅವರ ಸಾಹಸ ನಿರ್ದೇಶನವಿದೆ. ಶ್ಯಾಂ.ಕೆ.ನಾಯ್ಡು ಛಾಯಾಗ್ರಹಣ, ಮಾರ್ತಾಂಡ್.ಕೆ.ವೆಂಕಟೇಶ್ ಸಂಕಲನ, ಆಟ ನಂದೀಶ್ ನೃತ್ಯ ನಿರ್ದೇಶನ ಹಾಗೂ ಬ್ರಹ್ಮ ಕಡಲಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಚಿತಾರಾಂ ಅಭಿನಯದಲ್ಲಿ `ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ` - Chitratara.com
Copyright 2009 chitratara.com Reproduction is forbidden unless authorized. All rights reserved.