Chief Editor
Manohar. R (Manu)
Photo Journalist
chitrataramanu@gmail.com
+91 9845549026
ರವಿವರ್ಮನ ಕುಂಚದಲ್ಲಿ ಅರಳುವ ಕಲಾಕೃತಿ
Posted date: 14 Sun, Jul 2019 06:58:28 PM

ಕಲಾವಿದನ ಕುಂಚದಲ್ಲಿ ಅರಳುವ ಕಲಾಕೃತಿಗೆ ಜೀವ ನೀಡುವುದು ಅಸಾಧ್ಯ. ಆದರೆ ಅವನದೇ ಕಲ್ಪನೆಯಲ್ಲಿ ಕಲಾಕೃತಿಗಳು ಜೀವಂತವಾಗಿರುತ್ತದೆ.ಆತ ಮನಸ್ಸು ಮಾಡಿದರೆಒಂದು ಸುಂದರಕಲಾಕೃತಿಯನ್ನುಚೆಂದವಾಗಿಸಬಹುದು, ಇಲ್ಲವೆ ವಿರೂಪಗೊಳಸಬಹುದು. ಹಾಗೆ ಕಲಾವಿದನೊಬ್ಬನಿಂದ ವಿರೂಪಗೊಂಡಕಲಾಕೃತಿಯೇ ಚಿತ್ರಕಥಾ ಸಿನಿಮಾದಕತೆಯಾಗಿದೆ.ಅಸಹಜವಾದಕಥನದಲ್ಲಿ ವಾಸ್ತವ ಮತ್ತು ಭ್ರಮೆ ಇವುಗಳ ನಡುವಿನ ವ್ಯಥೆಯಾಗಿದೆ.ಶೀರ್ಷಿಕೆ ಕೇಳಿದಾಗ ಚಿತ್ರವೊಂದರ ಒಳಗಿನ ಸಿನಿಮಾ ಅನಿಸಬಹುದು.ಅದನ್ನು ಪೂರ್ಣವಾಗಿ ಆ ರೀತಿ ಹೇಳದೆ ಕಲಾವಿದನೊಬ್ಬನ ಭ್ರಮೆಯ ಲೋಕವನ್ನುಚಿತ್ರದ ಮೂಲಕ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕರಾಣಾಗೆತಾನೊಬ್ಬಚಿತ್ರ ನಿರ್ದೇಶಕನಾಗುವ ಕನಸು.ಆದರೆ ಬರುವ ಅಡೆತಡೆಗಳಿಂದ ಆಸೆಯು ಭಗ್ನಗೊಳ್ಳುತ್ತಲಿರುವುದರಿಂದ ಕೊರತೆಕಾಡುತ್ತಿರುತ್ತದೆ. ಮತ್ತೋಂದುಕಡೆ ಪ್ರೀತಿಸಿದ ಹುಡುಗಿ ಸಿಗುತ್ತಿಲ್ಲವೆಂಬ ಖೇದದಿಂದಕುಡಿತಕ್ಕ ಶರಣಾಗುತ್ತಾನೆ. ಇದರ ಮಧ್ಯೆಅಘೋರಿ ಎಂಬ ಪಾತ್ರವು ಇವನಿಗೆ ತೊಂದರೆಕೊಡುತ್ತದೆ.ಇದನ್ನು ಬೆನ್ನು ಹತ್ತುವ ಸೈಕ್ರಿಯಾಟಿಕ್ ವೈದ್ಯೆ.ಇದರ ನಂತರ ಬೇರೆ ಭಾಗವೊಂದು ತೆರೆದುಕೊಳ್ಳುತ್ತದೆ.

ಸುಧಾರಾಣಿ, ದಿಲೀಪ್‌ರಾಜ್ ಪಾತ್ರಗಳು ಪ್ರೇಕ್ಷಕನಿಗೆ ಗಮನ ಸೆಳಯುತ್ತದೆ.ಹಿರಿಯಕಲಾವಿದೆ ಜಯಶ್ರೀ ಕೆಲ ದೃಶ್ಯ, ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸಬರುಗಳಾದ  ಸುಜಿತ್‌ರಾಥೋಡ್, ಸುಕ್ತಾ,ಮೇಘ ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಮೊದಲ  ಪ್ರಯತ್ನದಲ್ಲೆ ನಿರ್ದೇಶಕ ಯಶಸ್ವಿಬಾಲಾದಿತ್ಯ ಶ್ರಮ ಪರದೆ ಮೇಲೆ ಕಾಣಿಸುತ್ತದೆ.  ಕುತೂಹಲದಜಾನರ್‌ಆಗಿರುವುದರಿಂದಚೇತನ್‌ಕುಮಾರ್ ಸಂಗೀತ ಪರಿಣಾಮಕಾರಿಯಾಗಿದೆ. ಥ್ರಿಲ್ಲರ್ ಸಿನಿಮಾಇಷ್ಟಪಡುವವರಿಗೆ ಪೈಸಾ ವಸೂಲ್‌ಆಗುತ್ತದೆ. ಪ್ರಜ್ವಲ್.ಎಂ.ರಾಜಾ ನಿರ್ಮಾಣವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರವಿವರ್ಮನ ಕುಂಚದಲ್ಲಿ ಅರಳುವ ಕಲಾಕೃತಿ - Chitratara.com
Copyright 2009 chitratara.com Reproduction is forbidden unless authorized. All rights reserved.