Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಸ್ತೆಯಿಲ್ಲದ ಹಳ್ಳಿಗೆ ಟಾರ್ ರಸ್ತೆ ತಂದ ಹೈಕಳಿವರು
Posted date: 01 Sat, Jul 2017 08:42:23 AM

 ಹಿಂದಿನ ಕಾಲದಿಂದಲೂ ಗ್ರಾಮೀಣ ಪರಿಸರದ ಕಥೆಯುಳ್ಳ ಚಲನಚಿತ್ರಗಳನ್ನು ನಮ್ಮ ಪ್ರೇಕ್ಷಕರು ಒಪ್ಪಿ ಕೊಂಡೇ ಬಂದಿದ್ದಾರೆ. ಅದೇ ನಂಬಿಕೆಯಲ್ಲಿ ಯುವ ನಿರ್ದೇಶಕ ಪ್ರಸನ್ನ ಶೆಟ್ಟಿ ತಾನೇ ಬರೆದ ಕಾದಂಬರಿಯನ್ನಿಟ್ಟುಕೊಂಡು ನಿರ್ದೇಶನ ಮಾಡಿರುವ ಚಿತ್ರ  ನಮ್ಮೂರ ಹೈಕ್ಳು ಈಗ ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಹಲವಾರು ಅಂಶಗಳನ್ನು  ಮೆಚ್ಚಿಕೊಂಡಿದ್ದಾರೆ.  ರಘುರಾಜ್ ಹಾಸನ, ಕುರಿ ಸುನಿಲ್, ಪವನ್, ವಿನಯ್ ಹಾಗೂ ತೇಜಸ್ ನಮ್ಮೂರ ಹೈಕ್ಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ದಶಕಗಳಿಂದಲೂ ಒಂದು ಆಸ್ಪತ್ರೆ, ಪಟ್ಟಣಕ್ಕೆ ಹೋಗಲು ಸುಗಮವಾದ ದಾರಿ ಇಲ್ಲದೆ  ಹಿಂದುಳಿದಿದ್ದ  ಚಾತಿ ಎಂಬ ಹಳ್ಳಿಯನ್ನು  ಈ ಯುವಕರು ಉದ್ದಾರ ಮಾಡುವ ಕಥೆಯನ್ನು  ನಿರ್ದೇಶಕರು ಈ ಚಿತ್ರದಲ್ಲಿ ಹೇಳಿದ್ದಾರೆ.

ಆ ಊರಿನಲ್ಲೊಬ್ಬ ಗೌಡ, ಆತನಿಗೊಬ್ಬ ಮಗಳು, ಈ ಹುಡುಗರಲ್ಲೊಬ್ಬ ಆ ಗೌಡನ ಮಗಳನ್ನು  ಪ್ರೀತಿಸುವುದು, ಆಕೆಯ ಮೇಲೆ ಮತ್ತೊಬ್ಬನೂ ಕಣ್ಣು ಹಾಕುವುದು, ಅದೇ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದು ಮತ್ತೆ ಇಬ್ಬರೂ  ಒಂದಾಗುವುದು, ಇದರ ನಡುವೆ ಆ ಹುಡುಗರು ಹಳ್ಳಿಯಲ್ಲಿ  ನಡೆಸುವ ಒಂದಷ್ಟು ಕಪಿಚೇಷ್ಟೆ, ಹುಡುಗಾಟ ಇವನ್ನೆಲ್ಲಾ  ನಿರ್ದೇಶಕರು ಚಾಚೂ ತಪ್ಪದೆ ತೆರೆಯಮೇಲೆ  ತಂದಿದ್ದಾರೆ. ಈ ಥರದ ಸಾಕಷ್ಟು  ಕಥೆಗಳು ಕನ್ನಡ ಬೆಳ್ಳಿತೆರೆಯ ಮೇಲೆ ಬಂದು ಹೋಗಿದ್ದರೂ ಈ ಹುಡುಗರು ಚಿತ್ರದಲ್ಲಿ ಒಂದಷ್ಟು ಹೊಸತನವನ್ನು  ಮೆರೆದಿರುವುದು  ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇನ್ನು ಚಿತ್ರದಲ್ಲಿನ ಎರಡು ಹಾಡುಗಳು ಕೇಳಲು ಕಿವಿಗಿಂಪಾಗಿರುವುದಲ್ಲದೆ, ಅವುಗಳನ್ನು ತೆರೆಯಮೇಲೆ ಕೂಡ ಅಷ್ಟೇ ಸೊಗಸಾಗಿ  ಮೂಡಿಸುವಲ್ಲಿ  ನಿರ್ದೇಶಕರ  ಚಾತುರ್ಯತೆ ಎದ್ದು ಕಾಣುತ್ತದೆ. ಚಿತ್ರದ ಹಿನ್ನೆಲೆ ಸಂಗೀತವೂ ಕೂಡ ಗಮನ ಸೆಳೆಯುತ್ತದೆ. ಚಿತ್ರದಲ್ಲಿ  ಬಳಸಲಾಗಿರುವ ಮಂಡ್ಯ ಭಾಗದ  ಗ್ರಾಮೀಣ ಭಾಷೆಯ ಸೊಗಡು, ಒಂದಷ್ಟು  ಪಂಚಿಂಗ್ ಡೈಲಾಗ್‌ಗಳು ಕೂಡ ನೋಡುಗರಿಗೆ ಇಷ್ಟವಾಗುವಂತಿವೆ.

ಒಂದು ಹಳ್ಳಿಯಲ್ಲಿ ಏನೇನೆಲ್ಲಾ ನಡೆಯುತ್ತದೆ, ಊರಿನ ಗೌಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನಿಸುತ್ತಾನೆ ಎಂಬುದನ್ನೂ ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ. ನಾಯಕನಾಗಿ ಅಭಿನಯಿಸಿರುವ ರಘುರಾಜ ಹಾಸನ ನಿರ್ಮಾಪಕನಾಗಿಯೂ ಕೈ ಜೋಡಿಸಿದ್ದಾರೆ.  ಒಂದು ಹಳ್ಳಿಯ ನೈಜ ವಾತಾವರಣ ಈ ಚಿತ್ರದಲ್ಲಿದೆ. ಹಳ್ಳಿ ಸೊಗಡಿನ ಕಥೆಯನ್ನು  ನಿರ್ದೇಶಕ ಪ್ರಸನ್ನಶೆಟ್ಟಿ  ತೆರೆಮೇಲೆ ಸೊಗಸಾಗಿ  ತಂದಿದ್ದಾರೆ.  ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿರುವ  ಮಮತಾ ರಾಹುತ್ ಹಾಗೂ  ದೀಪ್ತಿ ಮಾನೆ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇನ್ನು ಊರ  ಗೌಡನಾಗಿ ಹಿರಿಯ ಕಲಾವಿದ ಸತ್ಯಜಿತ್ ಗಮನ ಸೆಳೆಯುತ್ತಾರೆ.

3/5 ***

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಸ್ತೆಯಿಲ್ಲದ ಹಳ್ಳಿಗೆ ಟಾರ್ ರಸ್ತೆ ತಂದ ಹೈಕಳಿವರು - Chitratara.com
Copyright 2009 chitratara.com Reproduction is forbidden unless authorized. All rights reserved.