Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜಹಂಸ ಸೆಲೆಬ್ರಿಟಿ ಶೋ
Posted date: 14 Thu, Sep 2017 09:08:42 AM
ತುಂಬಾ ನಿರೀಕ್ಷೆ ಹುಟ್ಟಿಸಿದ್ದ ರಾಜಹಂಸ ಕನ್ನಡ ಚಿತ್ರ ಕಳೆದ ಶುಕ್ರವಾರ ಕರ್ನಾಟಕದಾದ್ಯಂತ ಬಿಡುಗಡೆಯಾಗಿತ್ತು.ಇದಕ್ಕೂ ಮೊದಲೇ ಈ ಚಿತ್ರದ ಟೀಸರ್,ಟ್ರೇಲರ್, ಹಾಡುಗಳುಹಿಟ್ಟಾಗಿ ಸದ್ದು ಮಾಡಿದ್ದವು. ಜೋಕಾಲಿ ಚಿತ್ರದ ಖ್ಯಾತಿಯಗೌರಿಶಿಖರ್ ಹಾಗೂ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜಿನಿರಾಘವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಈ ಚಿತ್ರದಲ್ಲಿ, ಡಾ. ಶ್ರೀಧರ್, ಬಿಸಿ ಪಾಟೀಲ್,ಯಮುನಾ, ರಾಜು ತಾಳಿಕೋಟೆ,ಬುಲೆಟ್ಪ್ರಕಾಶ್, ತಬಲಾನಾಣಿ, ವಿಜಯ್ ಚಂಡೂರ್ಮುಂತಾದ ಹಿರಿಯ ಕಲಾವಿದರ ದಂಡೇ ಅಭಿನಯಿಸಿದ್ದು, ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಚಿತ್ರದ ಕಥೆ,ಹಾಡುಗಳು, ಸಂಭಾಷಣೆ, ಸಂಗೀತ, ಛಾಯಾಗ್ರಹಣ, ನಟನೆ, ಎಲ್ಲದರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದು, ಹೊಸಬರಚಿತ್ರವಾದರೂ ಜನ ಕುಟುಂಬ ಸಮೇತರಾಗಿ ಬಂದು ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿ ಇಷ್ಟಪಡುತ್ತಿದ್ದಾರೆ.ಲವ್, ಫ್ಯಾಮಿಲಿ ಸೆಂಟಿಮೆಂಟ್, ಹಾಸ್ಯ, ಉತ್ತಮ ಕಥೆ, ಒಳ್ಳೆಯ ನಿರೂಪಣೆ ಎಲ್ಲವೂ ಇರುವ ಈ ಚಿತ್ರವನ್ನು ಜನ ಇಷ್ಟಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಸ್ವಚ್ಛಂದವಾಗಿ, ಹೊಗಳಿ ಬರೆಯುತ್ತಿದ್ದಾರೆ. ಕೇವಲ ಮೂರೇ ದಿನದಲ್ಲಿ ರಾಜಹಂಸ ಚಿತ್ರ ಒಂದು ಕೋಟಿ ಗಳಿಕೆ ಮಾಡಿದೆ. ಅಲ್ಲದೆ ಎರಡನೇ ವಾರಕ್ಕೆ ಕಾಲಿಟ್ಟು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಇದೇ ವಿಚಾರ ಕುರಿತಂತೆಹೊಸ ತಂಡದ ಯುವಕರ ಶ್ರಮವನ್ನು ನವರಸ ನಾಯಕ ಜಗ್ಗೇಶ್ ಅವರು ತಮ್ಮ ಟ್ವಿಟರ್ ನಲ್ಲಿಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಸಿದ್ಲಿಂಗು, ನೀರ್ ದೋಸೆ ಚಿತ್ರದ ಖ್ಯಾತಿಯ ವಿಜಯ್ ಪ್ರಸಾದ್ ಅವರು ನಿನ್ನೆಯೇಸಿನಿಮಾವನ್ನು ನೋಡಿ ಸುದೀರ್ಘವಾಗಿ ಸಿನಿಮಾ ಬಗ್ಗೆ ಮಾತಾಡಿದ್ದರು. ರಾಜಹಂಸಕ್ಕೆ ಸಿಕ್ಕ ಈ ವಿಶೇಷ ಪ್ರತಿಕ್ರಿಯೆಯಿಂದ ಖುಷಿಗೊಂಡ ರಾಜಹಂಸ ಚಿತ್ರ ತಂಡ ನೆನ್ನೆ ಒಂದು ಸೆಲೆಬ್ರಿಟಿಶೋ ಏರ್ಪಾಡು ಮಾಡಿತ್ತು. ಚಿತ್ರದ ಟೀಸರ್ಟ್ರೈಲರ್ಹಾಡುಗಳನ್ನು ನೋಡಿ ಮೆಚ್ಚಿಕೊಂಡ, ಹಾಗುಸಿನಿಮಾ ನೋಡಿರದ ಹಲವು ಹಿರಿಯ ನಿರ್ದೇಶಕರು, ನಿರ್ಮಾಪಕರು,ಸಾಹಿತಿಗಳು,ನಟರುವಾಲಂಟಿಯರ್ ಆಗಿ ರಾಜಹಂಸ ಪ್ರದರ್ಶನಕ್ಕೆ ಹಾಜರಾಗಿಚಿತ್ರವನ್ನು ಮೆಚ್ಚಿ ಮಾತಾಡಿದ್ದಾರೆ. ನಿರ್ದೇಶಕರಾದಎಂಡಿ ಶ್ರೀಧರ್, ಜಟ್ಟ, ಮೈತ್ರಿ, ಅಮರಾವತಿ ಚಿತ್ರದ ಖ್ಯಾತಿಯಬಿ.ಎಂಗಿರಿರಾಜ್.ಕರ್ವಖ್ಯಾತಿಯನಿರ್ದೇಶಕ ನವನೀತ್, ಚೌಕ ಚಿತ್ರದ ನಿರ್ದೇಶಕ ತರುಣ್ಸುಧೀರ್,ದಯಾಳ್ಪದ್ಮನಾಭನ್,ಗೀತರಚನೆ ಕಾರಕವಿರಾಜ್, ಸಂಗೀತ ನಿರ್ದೇಶಕ ಶ್ರೀಧರ್.ವಿ.ಸಂಭ್ರಮ್, ನಿರ್ಮಾಪಕರಾದ ಸೂರಪ್ಪ ಬಾಬು, ನೀರ್ ದೋಸೆ ಚಿತ್ರದ ನಿರ್ಮಾಪಕರಾದ ಪ್ರಸನ್ನ ಅವರು, ಪತ್ರಕರ್ತ ಗೌರೀಶ್ಅ ಕ್ಕಿ, ಖ್ಯಾತ ನಾಯಕನಟರಾದ ಶರಣ್,  ಹಾಗು ನಟರಾದ ವಸಿಷ್ಠ .ಎನ್. ಸಿಂಹ,ಪ್ರಮೋದ್ ಶೆಟ್ಟಿ,ನರೇಶ್ ಗೌಡಮುಂತಾದ ಚಿತ್ರರಂಗದ ಗಣ್ಯರಗಣ್ಯರು ರಾಜಹಂಸ ಚಿತ್ರವನ್ನುಸ್ವಂತ ಆಸಕ್ತಿಯಿಂದ ಬಂದು, ಸಂಪೂರ್ಣವಾಗಿ ಚಿತ್ರವನ್ನು ನೋಡಿ ಚಿತ್ರದ ಬಗ್ಗೆ ತುಂಬಾ ಒಳ್ಳೆಯ ಅನಿಸಿಕೆಯನ್ನು ನೀಡಿದರು. ಅವರ ಅನಿಸಿಕೆ ಕೇವಲ ಬಾಯಿ ಮಾತಾಗಿರದೆ ಚಿತ್ರವನ್ನು ಇಷ್ಟಪಟ್ಟಮನಸ್ಸಿನಿಂದ ಬಂದ ಮಾತಾಗಿತ್ತು. ಇಂಥ ಚಿತ್ರವನ್ನು ಕನ್ನಡ ಜನತೆ ಖಂಡಿತವಾಗಿಯೂ ಚಿತ್ರ ಮಂದಿರಗಳಿಗೆ ಹೋಗಿ ನೋಡಬೇಕು. ಹೊಸ ಹುಡುಗರು ಸುಮ್ಮನೆ ಏನೋ ಒಂದು ಚಿತ್ರ ಮಾಡಿಲ್ಲ..ತುಂಬಾ ಶ್ರದ್ಧೆಯಿಂದ ಶಿಸ್ತಿನಿಂದ ಇಡೀ ಸಿನಿಮಾವನ್ನು ಅತ್ಯಂತ ಪ್ರಾಮಾಣಿಕವಾಗಿ ಕಟ್ಟಿಕೊಟ್ಟಿದ್ದಾರೆ..ಇಂತಹ ಒಂದು ಅಭಿರುಚಿ ಪೂರ್ಣ ಚಿತ್ರವನ್ನು ಖಂಡಿತವಾಗಿ ಕನ್ನಡದ ಜನತೆ ಮಿಸ್ಮಾಡಿಕೊಳ್ಳಬಾರದು. ಖಂಡಿತವಾಗಿಯೂ ನೀವು ಕೊಟ್ಟ ಹಣಕ್ಕೆ ತಕ್ಕ ಮನರಂಜನೆ ಸಿಕ್ಕೇಸಿಗುತ್ತದೆ. ಖಂಡಿತವಾಗಿಯೂ ಇಂತಹ ಹೊಸಬರ ವಿಶೇಷ ಚಿತ್ರಗಳನ್ನ ಕನ್ನಡದ ಜನತೆ ನೋಡಿ ಹರಸಬೇಕು. ಇಡೀ ತಂಡದ ಶ್ರಮ ಚಿತ್ರದ ಒಂದೊಂದು ಫ್ರೇಮ್ನಲ್ಲೂ ಎದ್ದು ಕಾಣುತ್ತದೆ. ಆ ಯುವಕರ ಶ್ರಮ ವ್ಯರ್ಥವಾಗಬಾರದು. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ. ಎಂದು ಎಲ್ಲರೂ ತಮ್ಮ ಹೃದಯ ಪೂರ್ವಕವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. 
ಕಲೆ, ಸಂಸ್ಕೃತಿ, ಸಂಬಂಧ,ಭಾವನೆಗಳ ಬಗ್ಗೆ ತುಂಬಾ ಗೌರವ ಇಟ್ಟುಕೊಂಡು ಮಾಡಿದ ಕನ್ನಡ ಚಿತ್ರ ನೋಡಿದವರು ದಯವಿಟ್ಟು ತಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ. ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ದಯವಿಟ್ಟು ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ ನಿಮ್ಮದಾಗಲಿದೆ.
 
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜಹಂಸ ಸೆಲೆಬ್ರಿಟಿ ಶೋ - Chitratara.com
Copyright 2009 chitratara.com Reproduction is forbidden unless authorized. All rights reserved.