Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜು ಕನ್ನಡ ಮೀಡಿಯಂ ನಾಳೆಯಿಂದ ತೆರೆಗೆ
Posted date: 18 Thu, Jan 2018 09:49:31 AM
ಕೆ ಎ ಸುರೇಶ್ ನಿರ್ಮಾಣದ ಈ ವರ್ಷದ ಮೊದಲ ಬಿಗ್ ಬಜೆಟ್ ಸಿನಿಮಾ ‘ರಾಜು ಕನ್ನಡ ಮೀಡಿಯಂ’  ಇದೇ ಶುಕ್ರವಾರ ನಾಳೆಯಿಂದ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್ ಬಹುಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರೆಲ್ಲರ ಗಮನ ಸೆಳೆದಿರೋ ಈ ಚಿತ್ರ ರಾಜ್ಯಾಧ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.
ಈ ಹಿಂದೆ ಫಸ್ಟ್ ರ್ಯಾಂಕ್ ರಾಜು ಚಿತ್ರದಿಂದ ಖ್ಯಾತಿ ಪಡೆದ ಗುರುನಂದನ್, ನಿರ್ದೇಶಕ ನರೇಶ್ ಕುಮಾರ್, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಸಂಕಲಕಾರ ಗಿರೀಷ್ ಈ ಚಿತ್ರದಲ್ಲೂ ಒಟ್ಟಿಗೆ ಸೇರಿದ್ದಾರೆ.
ಗುರುನಂದನ್ ಜೊತೆಗೆ ಆವಂತಿಕ ಶೆಟ್ಟಿ, ಆಶಿಕ ರಂಗನಾಥ್ ಹಾಗೂ ಅಂಜೇಲಿನ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಓಂ ಪ್ರಕಾಶ್ ರಾವ್ ಹಾಗೂ ಇಂದ್ರಜಿತ್ ಲಂಕೇಶ್ ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಈ ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣದಲ್ಲಿ ಮೂಡಿ ಬಂದಿರೋಈ ಚಿತ್ರಕ್ಕೆ ಗಿರಿ ಮಹೇಶ್
ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಚೆಲುವರಾಜ್, ಅನೂಪ್ ಆರ್ಯನ್, ಹೇಮಂತ್ ಅರುಣ್, ಸಹಾಯಕ ನಿರ್ದೇಶಕರಾಗಿ ಲಕ್ಷ್ಮಿ ವಿನಾಯಕ್ ಕೆಲಸ ಮಾಡಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜು ಕನ್ನಡ ಮೀಡಿಯಂ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.