Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜು ಕನ್ನಡ ಮೀಡಿಯಂ - ಅಪಾರ ಬೇಡಿಕೆ ಶುರು
Posted date: 14 Thu, Sep 2017 10:40:48 AM
ಯಶಸ್ವಿ ನಿಮಾಪಕ ಕೆ ಎ ಸುರೇಶ್ ಅವರ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಕಿಚ್ಚ ಸುದೀಪ್ ಅವರು ತಾರಾಗಣದಲ್ಲಿ ಸೇರಿಕೊಂಡಾಗ ಮೂರಾನೆ ಭಲ ಸೃಷ್ಟಿ ಆಗಿರುವುದು ಟೀಸರ್ ಅವರ ಹುಟ್ಟು ಹಬ್ಬಕ್ಕೆ ಸೆಪ್ಟೆಂಬರ್ ೨ ರಂದು ಬಿಡುಗಡೆ ಆಗಿದ್ದರಿಂದಲೇ ವ್ಯಕ್ತವಾಗಿದೆ. ಥೇಟ್ ಹಿಂದಿ ಸಿನಿಮಾ ರೀತಿಯಲ್ಲಿ ಟೀಸರ್ ಕಿಚ್ಚ ಸುದೀಪ್ ಒಳಗೊಂಡದ್ದು ಈಗಾಗಲೇ  ಮಿಲಿಯನ್ ನೋಡುಗರನ್ನು ದಾಟಿ ೧೧ ಲಕ್ಷ ದಾಟಿದೆ. ಅದು ಕೇವಲ ೮ ದಿವಸಗಳಲ್ಲಿ ಎಂಬುದು ಹೆಗ್ಗಳಿಕೆ. ಈ ಟೀಸರ್ ಜೊತೆಗೆ ಚಿತ್ರದ ಮತ್ತೊಂದು ಟೀಸರ್ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಬಹಳವಾಗಿ ಬೇಡಿಕೆಯನ್ನು ಸೃಷ್ಟಿ ಮಾಡಿದ್ದೆ
 
ಅಲ್ಲದೆ, ದೂರದ ಕೆನಡ ದೇಶದಿಂದ ಈ ಚಿತ್ರದ ವಿದೇಶಿ ಹಕ್ಕು ನೀಡಬೇಕು ಎಂದು ಬೇಡಿಕೆ ನಿರ್ಮಾಪಕ ಕೆ ಎ ಸುರೇಶ್ ಬಳಿ ಇಟ್ಟಿದ್ದಾರೆ. ಸುದೀಪ್ ಅವರ ಅಭಿಮಾನಿಗಳು ಚಿತ್ರ ಯಾವಾಗ ಬಿಡುಗಡೆ ಎಂಬ ಪ್ರಶ್ನೆಗೆ ಬಹುಶಃ ದಸರಾ ಹಬ್ಬಕ್ಕೆ ‘ರಾಜು ಕನ್ನಡ ಮೀಡಿಯಂ’ ಬಿಡುಗಡೆ ಆಗುವ ಚಿಂತನೆ ಇದೆ. ಪ್ರಶಂಸೆಯ ಖದರ್ ಬಹಳವಾಗಿ ಹೆಚ್ಚಾಗಿದೆ. ಸಿನಿಮಾದ ಕುತೂಹಲ ಹೆಚ್ಚಾಗಿರುವ ಸ್ಥಿತಿ ನಿರ್ಮಾಪಕರಿಗೆ ಆನಂದವನ್ನು ನೀಡಿದೆ.
 
ಕನ್ನಡ ಮೀಡಿಯಂ ಅಲ್ಲಿ ಓದಿರುವ ಅನೇಕ ಕನ್ನಡಿಗರು ದೇಶ ವಿದೇಶದಲ್ಲಿ ಕೆಲಸದಲ್ಲಿ ಇದ್ದಾರೆ. ಬಹುತೇಕ ಟೆಕ್ಕಿಗಳು ಈ ಸಿನಿಮಾದ ವಿದೇಶದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅವರೆಲ್ಲರಿಗೆ ಚಿತ್ರದ ಶೀರ್ಷಿಕೆಯೇ ಬಹಳವಾದ ನಿರೀಕ್ಷೆ ಹುಟ್ಟು ಹಾಕಿದೆ.  ಯಶಸ್ವಿ ಜೋಡಿ ಗುರುನಂದನ್ ನಟನೆ ಹಾಗೂ ನಿರ್ದೇಶಕ ನರೇಶ್ ಕುಮಾರ್ ಎಚ್ ಎನ್ (ಹೊಸಹಳ್ಳಿ) ಅವರದು ಇಲ್ಲಿಯೂ ಮುಂದುವರೆದಿದೆ. ಕಥೆ ಹಾಗೂ ಚಿತ್ರಕಥೆ ಸಹ ಬರೆದಿರುವ ನಿರ್ದೇಶಕರು ೬೦ ದಿವಸಗಳಲ್ಲಿ ಚಿತ್ರೀಕರಣವನ್ನು ಮಾಡಿದ್ದಾರೆ.
 
‘ಎಫ್ ಆರ್ ಆರ್’ ಚಿತ್ರದಲ್ಲಿ ಸಂಗೀತದಿಂದ ಮೋಡಿ ಮಾಡಿದ ಕಿರಣ್ ರವೀಂದ್ರನಾಥ್ ಇಲ್ಲಿಯೂ ಸುಶ್ರಾವ್ಯ ಸಂಗೀತ ಐದು ಹಾಡುಗಳಿಗೆ ನೀಡಿದ್ದಾರೆ. ಶೇಖರ್ ಚಂದ್ರ ಅವರ ನೈಪುಣ್ಯತೆ ಛಾಯಾಗ್ರಹಣದಲ್ಲಿ ಕಣ್ಣಿಗೆ ಹಬ್ಬ ನೀಡುವುದರಲ್ಲಿ ಸಂದೇಹವೆ ಇಲ್ಲ ಎನ್ನುತ್ತಾರೆ ನಿರ್ಮಾಪಕ ಕೆ ಎ ಸುರೇಶ್.
 
ಸುರೇಶ್ ಅವರ ‘ಗೋವಿಂದಾಯ ನಮಹ’ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದ ಹಾಗೆ ಅವರ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲೂ ಆವಂತಿಕ ಶೆಟ್ಟಿ, ಆಶಿಕ ರಂಗನಾಥ್ ಹಾಗೂ ಅಂಜೇಲಿನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬಿಗ್ ಬಾಸ್ ಖ್ಯಾತಿಯರಾದ ಪ್ರಥಮ್, ಕಿರಿಕ್ ಕೀರ್ತಿ, ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್ ಹಾಗೂ ಇತರರು ಇದ್ದಾರೆ.
 
ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಸಹ ನಿರ್ದೇಶಕರಾಗಿ ಚೆಲುವರಾಜ್, ಅನೂಪ್ ಆರ್ಯನ್, ಹೇಮಂತ್ ಅರುಣ್, ಸಹಾಯಕ ನಿರ್ದೇಶಕರಾಗಿ ಲಕ್ಷ್ಮಿ ವಿನಾಯಕ್ ಕೆಲಸ ಮಾಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜು ಕನ್ನಡ ಮೀಡಿಯಂ - ಅಪಾರ ಬೇಡಿಕೆ ಶುರು - Chitratara.com
Copyright 2009 chitratara.com Reproduction is forbidden unless authorized. All rights reserved.