Chief Editor
Manohar. R (Manu)
Photo Journalist
chitrataramanu@gmail.com
+91 9845549026
ಲಂಡನಲ್ಲಿ ಲಂಭೋದರ ಸೆಟ್ಟೇರಿತು
Posted date: 21 Wed, Mar 2018 12:58:22 PM
ಮೈ ಮಾಸ್ಟೆರ್ ಮೂವೀಸ್ ಅಡಿಯಲ್ಲಿ ‘ಲಂಡನಲ್ಲಿ ಲಂಭೋಧರ’ ಕಳೆದ ಗುರುವಾರ ನಗರದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿತು. ಸಂಗೀತ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಪಡೆದ ಸುದರ್ಶನ್ ಬಿ ಅವರ ಪ್ರಥಮ ನಿರ್ಮಾಣದ ಸಿನಿಮಾಕ್ಕೆ ಲಂಡನ್ ಅಲ್ಲಿ ನೆಲೆಸಿರುವ ಕನ್ನಡಿಗರ ತಂಡ ಲಂಡನ್ ಸ್ಕ್ರೀನ್ಸ್ ಜೊತೆ ಸೇರಿದೆ.
ಚಿತ್ರದ ಮುಹೂರ್ತಕ್ಕೆ ಹಾಸ್ಯ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ, ರಾಮನಗರ ಡಿ ಸಿ ಮಮತ ಗೌಡ, ರಾಜರಥ ನಿರ್ಮಾಪಕರಲ್ಲಿ ಒಬ್ಬರಾದ ಸತೀಶ್ ಶಾಸ್ತ್ರೀ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಶುಭ ಕೋರಿದರು.

ರಾಜ್ ಸೂರ್ಯ ಅವರ ನಿರ್ದೇಶನದ ಈ ಚಿತ್ರ ‘ಲಂಡನಲ್ಲಿ ಲಂಭೋದರ’ ಬೆಂಗಳೂರಿನ ಯುವಕ ಕೆಲವು ನಂಬಿಕೆಗಳನ್ನು ಹೊತ್ತು ಲಂಡನ್ ಸೇರುತ್ತಾನೆ. ಅಲ್ಲಿ ಆಗಮಿಸಿದಾಗ ಆಗುವ ಕಷ್ಟಗಳು ಹಾಸ್ಯಮಯ ರೂಪದಲ್ಲಿ ಚಿತ್ರಕತೆಯಲ್ಲಿ ಬೆಸೆಯಲಾಗಿದೆ. ಲಂಡನ್ ಸುತ್ತ ಮುತ್ತ ಕೆಲವು ದಿವಸಗಳ ಚಿತ್ರೀಕರಣ ಸಹ ಮಾಡಲಾಗುವುದು.
 
ಲಂಡನ್ ನಿವಾಸಿ ಸ್ವಿಂಡನ್ ಸಂತು ಚಿತ್ರದ ಕಥಾ ನಾಯಕ. ಬಿಗ್ ಬಾಸ್ 5 ಪಾಲ್ಗೊಂಡ ಸುಮುಧುರ ಗಾಯಕಿ ಶ್ರುತಿ ಪ್ರಕಾಶ್ ಚಿತ್ರದ ಕಥಾ ನಾಯಕಿ. ಸಾಧು ಕೋಕಿಲ ಮುಖ್ಯ ಪಾತ್ರದಲ್ಲಿದ್ದಾರೆ. ಅಚ್ಯುತ್ ಕುಮಾರ್, ಸಂಪತ್ ರಾಜ್, ಅರುಣ ಬಲರಾಜ್, ಕುರಿ ಪ್ರತಾಪ್, ಗಿರಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಪಣಿಧರ್ ರೇವನೂರ್ ಛಾಯಾಗ್ರಹಣ, ಪ್ರಣವ್ ಸಂಗೀತ ನಿರ್ದೇಶನಕ್ಕೆ ಪಾದ ಬೆಳಸಿದ್ದಾರೆ. ರಂಜಿತ್ ರಾ. ಸ, ನೃತ್ಯ ನಿರ್ದೇಶನ ಹೈದರಾಬಾದ್ ಗಣೇಶ್ ಮಾಡುತ್ತಿದ್ದಾರೆ. ಗೀತ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಹಾಗೂ ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲಂಡನಲ್ಲಿ ಲಂಭೋದರ ಸೆಟ್ಟೇರಿತು - Chitratara.com
Copyright 2009 chitratara.com Reproduction is forbidden unless authorized. All rights reserved.