ಜೀ಼ ಕನ್ನಡದ ಜನಪ್ರಿಯ ಸಂಗೀತ ಶೋ ಸರಿಗಮಪ ಲಿಟಲ್ ಚಾಂಪ್ಸ್ ಹಾಗು ಡ್ರಾಮಾ ಜ್ಯೂನಿಯರ್ಸ್ ಮತ್ತೆ ರಂಜಸಿಲು ನಿಮ್ಮ ಮುಂದೆ ಬರುತ್ತಿವೆ. ಹೌದು ಕರ್ನಾಟಕದ ರಿಯ್ಯಾಲಿಟಿ ಶೋ ಗಳ ಇತಿಹಾಸದಲ್ಲಿ ಅತೀ ದೊಡ್ಡ ಶೋ ಗಳು ಅಂದ್ರೆ ಮೊದಲು ನೆನಪಾಗೋದು ಸರಿಗಮಪ ಹಾಗು ಡ್ರಾಮಾ ಜ್ಯೂನಿಯರ್ಸ್ ಈ ಶೋ ಗಳಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿವೆ.
ಕರ್ನಾಟಕದ ಪ್ರತಿಯೊಂದು ಮನೆಯ ಪೋಷಕರ ಕನಸು ಕಾಣೋದು ನಮ್ಮ ಮಕ್ಕಳ್ಳನ್ನು ಈ ಶೋಗಳಿಗೆ ಭಾಗವಹಿಸಲು ಕಳುಹಿಸ ಬೇಕು ಅನ್ನೋದು. ಅದಕ್ಕಾಗಿ ಕನಸುಗಳನ್ನು ಕಾಣುತ್ತಾರೆ. ಅಂತಹ ಪೋಷಕರ ಕನಸನ್ನು ನನಸು ಮಾಡಲು ಜೀ಼ ಕನ್ನಡ ಒದಗಿಸುತ್ತಿದೆ ಮತ್ತೊಂದು ಸುವರ್ಣಾವಕಾಶ. ಅದೇನಂದರೆ ತಂದೆ ತಾಯಿಯರು ಮಾಡುತ್ತಿದ್ದಾರೆ ವರ್ಕ ಫ್ರಮ್ ಹೋಂ ಅದೇ ರೀತಿ ಮಕ್ಕಳಿಗಾಗಿ ಜೀ಼ ಕನ್ನಡ ಆಯೋಜಿಸುತ್ತಿದೆ ಆಡಿಷನ್ ಫ್ರಮ್ ಹೋಂ.
ಈ ಲಾಕ್ ಡೌನ್ ಸಂಧರ್ಭದಲ್ಲಿ ನಿಮ್ಮ ಮಕ್ಕಳನ್ನ ಫೇಮಸ್ ಮಾಡಲು ನಿಮಗಿದೆ ಇಲ್ಲೊಂದು ಅವಕಾಶ. ಅತಿ ದೊಡ್ಡ ಸಂಗೀತ ರಿಯಾಲಿಟಿ ಶೋಗಳಲ್ಲಿ ನಿಮ್ಮ ಮಕ್ಕಳು ಭಾಗವಹಿಸುವ ಆಸೆ ನಿಮಗಿದ್ದರೆ ನಿಮ್ಮ ಮಕ್ಕಳ ಹಾಡು, ಹಾಗು ಅಭಿನಯದ ತುಣಕನ್ನ ನಮಗೆ ಕಳುಹಿಸಿಕೊಡಿ. ವಾಟ್ಸಪ್ ನಲ್ಲಿಯೆ ನಡೆಯಲಿದೆ ಮೇಗಾ ಆಡಿಷನ್.
ನೀವು ಮಾಡಬೇಕಾಗಿರುವುದು ಇಷ್ಟೇ ಮತ್ತೆಕ್ಕೆ ತಡ ನಿಮ್ನ ಮಕ್ಕಳ ಎರಡು ನಿಮಿಷದ ಆಡಿಯೋವನ್ನು (ಸರಿಗಮಪ-18 : 9513134434) ಅಭಿನಯದ ವಿಡಿಯೋವನ್ನು (ಡ್ರಾಮಾ ಜ್ಯೂನಿಯರ್ಸ್-4 : 9538066602 ) ನಮಗೆ ಕಳುಹಿಸಿ ಕೊಡಿ.