Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿನಾಯಕನ ಸನ್ನಿಧಿಯಲ್ಲಿ ರಾಜಮಾರ್ತಾಂಡ ಆರಂಭ
Posted date: 06 Wed, Dec 2017 07:16:09 PM
 ಶ್ರೀಮಾದೇಶ್ವರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಕುಮಾರ್.ಎನ್ ಅವರು ನಿರ್ಮಿಸುತ್ತಿರುವ ‘ರಾಜಮಾರ್ತಾಂಡ‘ ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಮೋದಿ ಆಸ್ಪತ್ರೆ ಬಳಿಯ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ದೇವರ ಮೇಲೆ ಚಿತ್ರಿಸಲಾದ ಮೊದಲ ಸನ್ನಿವೇಶಕ್ಕೆ ದಿವ್ಯ.ಎನ್ ಹಾಗೂ ಕವಿತಾ ಕೆಂಪಯ್ಯ ಆರಂಭ ಫಲಕ ತೋರಿದರು. 
`ಸ್ನೇಹಿತರು, ‘ಪಪೋಟಿ, ‘ಟೈಸನ್ ಹಾಗೂ ‘ಕ್ರ್ಯಾಕ್ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ರಾಮ್‌ನಾರಾಯಣ್ ನಿರ್ದೇಶನದ ಈ ಚಿತ್ರದ ನಾಯಕಾರಾಗಿ ಚಿರಂಜೀವಿ ಸರ್ಜಾ ಅಭಿನಯಿಸುತ್ತಿದ್ದಾರೆ. ಮಾಸಾಂತ್ಯಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. 
   ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯರ ಸಂಗೀತ ನಿರ್ದೇಶನವಿದೆ. ಜಬೇಜ್ ಕೆ ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ರವಿವರ್ಮ, ವಿನೋದ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನಾಯಕನ ಸನ್ನಿಧಿಯಲ್ಲಿ ರಾಜಮಾರ್ತಾಂಡ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.