Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿನೋದ್ ಪ್ರಭಾಕರ್ ನೂತನ ಚಿತ್ರ
Posted date: 15 Wed, Apr 2020 11:39:09 AM

ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ  ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರವೊಂದರ ನಾಯಕನಾಗಿ ವಿನೋದ್ ಪ್ರಭಾಕರ್ ಅಭಿನಯಿಸುತ್ತಿದ್ದಾರೆ..  ಹಿಂದೆ ಈ ಸಂಸ್ಥೆಯಿಂದ ಕುಲ್ಫಿ ಚಿತ್ರ ನಿರ್ಮಾಣವಾಗಿತ್ತು..
ಈಗಾಗಲೇ ಫೋಟೊಶೂಟ್ ಮುಗಿದಿದ್ದು, ಕೊರೋನ ಲಾಕ್ ಡೌನ್ ಆದ ಮೇಲೆ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ನಂತರ ಚಿತ್ರೀಕರಣ ಆರಂಭವಾಗಲಿದೆ.
ಗಣೇಶ್ ಅಭಿನಯದ ಗೀತ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಅರುಣ್ ಈ ಚಿತ್ರದ ನಾಯಕಿ.
ಮೂರ್ಕಲ್ ಎಸ್ಟೇಟ್ ಚಿತ್ರದ ನಿರ್ದೇಶಕ ಪ್ರಮೋದ್ ಕುಮಾರ್ ಈ ಚಿತ್ರವನ್ನು‌ ನಿರ್ದೇಶಿಸುತ್ತಿದ್ದಾರೆ.. ಲವ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ನೂತನ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ ಈ  ಹೊಸ ಚಿತ್ರದಲ್ಲಿದೆ...



Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನೋದ್ ಪ್ರಭಾಕರ್ ನೂತನ ಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.