Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೀರ ಪರಂಪರೆ ಯಲ್ಲಿ ವೀರನ ಸಾಹಸ
Posted date: 28/July/2010

ಕನ್ನಡ ಚಿತ್ರರಂಗದ ಪ್ರಮುಖರಲ್ಲಿ ಒಬ್ಬರಾದ ಬಹುಮುಖಿ ಶಿಸ್ತಿನ ಸಿಪಾಯಿ ಅಚ್ಚುಕಟ್ಟುತನದ ಸರ್ದಾರ ಎಂದೇ ಖ್ಯಾತಿಯಾದ ಮೃದು ಮನಸ್ಸಿನ ಎಸ್. ನಾರಾಯಣ್ ಬಹು ನಿರೀಕ್ಷೆ ಹುಟ್ಟು ಹಾಕಿರುವ ವೀರ ಪರಂಪರೆ, ಚಿತ್ರಕ್ಕಾಗಿ ರೆಬಲ್ ಸ್ಟಾರ್ ಅಂಬರೀಷ್ ಅವರ ವೀರಾವೇಷದ ಸಾಹಸ ಸನ್ನಿವೇಶವನ್ನು ಡಿಫೆರೆಂಟ್ ಡ್ಯಾನಿ ಸಾಹಸ ಸಂಯೋಜನೆಯಲ್ಲಿ ಮೂರು ದಿವಸಗಳ ಚಿತ್ರೀಕರಿಸಿಕೊಂಡರು.
ಸೀನಿಯರ್ ವೀರ ಅಂಬರೀಷ್ ಯಾವುದೇ ಆಯಾಸವಿಲ್ಲದೆ ಅತ್ಯಂತ ಹುರುಪಿನಿಂದ ಸಾಹಸ ಸನ್ನಿವೇಷಗಳಲ್ಲಿ ಪಾಲ್ಗೊಂಡು ಚಿತ್ರೀಕರಣ ಸ್ಥಳದಲ್ಲಿದ್ದ ಅನೇಕರನ್ನು ಬೆರಗುಗೊಳಿಸಿದ್ದಾರೆ. ೨೦೦ ಕ್ಕೂ ಹೆಚ್ಚ ಚಿತ್ರಗಳಲ್ಲಿ ಅಭಿನಯಿಸಿರುವ ಅಂಬರೀಷ್ ತೋರಿದ ಆಸಕ್ತಿಯನ್ನು ನಿರ್ದೇಶಕ ಎಸ್. ನಾರಾಯಣ್ ಅವರು ಕೊಂಡಾಡಿದ್ದಾರೆ. ಕನಕಪುರ ಇಂಡಸ್ಟ್ರಿಯಲ್ ನಗರದಲ್ಲಿ ಸಾಹಸ ಚಿತ್ರೀಕರಣ ಸೆರೆಹಿಡಿದವರು ಆರ್.ಗಿರಿ.
ವೀರ ಪರಂಪರೆ, ಶ್ರೀ ಚೆಲುವಾಂಬಿಕಾ ಪಿಕ್ಚರ‍್ಸ್ ಲಾಂಛನದ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ನಿರ್ಮಾಣದ ಚಿತ್ರವೂ ಹೌದು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಸಹ ಬರೆಯುವುದರೊಂದಿಗೆ ಸಾಹಿತ್ಯದ ಜವಾಬ್ದಾರಿ ಸಹ ಹೊತ್ತಿದ್ದಾರೆ.
ಈವರೆಗೆ ಡಾ|| ರಾಜ್‌ಕುಮಾರ್, ಡಾ|| ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್‌ಕುಮಾರ್, ಪುನೀತ್, ರಾಘವೇಂದ್ರ ರಾಜ್‌ಕುಮಾರ್, ಗಣೇಶ್ ಅಲ್ಲದೆ ಇನ್ನೂ ಹಲವಾರು ನಾಯಕ ನಟುರುಗಳ ಚಿತ್ರ ನಿರ್ದೇಶನ ಮಾಡಿರುವ ಎಸ್. ನಾರಾಯಣ್ ವೀರ ಪರಂಪರೆ, ಚಿತ್ರವನ್ನು ಬೆಳಗಾವಿ, ಗುಲಬರ್ಗಾ, ಮೈಸೂರು, ಕಿತ್ತೂರು ಹಾಗೆ ಚೆನ್ನಮ ವಂಶಸ್ಥರ ಪುರಾತನ ೧೫೦ ವರ್ಷದ ಮನೆಯಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಬಿಸಿಲಿನ ತಾಪದೊಂದಿಗೆ ಬಿರುಸಿನ ಚಿತ್ರೀಕರಣ ಮಾಡಲಾಗಿದೆ.
ವೀರ ಪರಂಪರೆ, ಚಿತ್ರದ ಪ್ರಮುಖ ಅಂಶಗಳಲ್ಲಿ ಅಂಬರೀಷ್ ಹಾಗೂ ಖ್ಯಾತ ನಟ ಕಿಚ್ಚ ಸುದೀಪ್ ಪ್ರಥಮ ಬಾರಿ ಜೊತೆಯಾಗಿ ಅಭಿನಯಿಸುತ್ತಿರುವುದು. ತೇಜ ಪಾತ್ರದಲ್ಲಿ ಸುದೀಪ್ ಅತ್ಯಂತ ಆಸಕ್ತಿ ವಹಿಸಿ ಅಭಿನಯಿಸಿದ್ದಾರೆ. ಸುದೀಪ್ ಅವರಿಗೆ ಅಂದ್ರಿತಾ ರೇ ನಾಯಕಿ ಆಗಿ ಅಭಿನಯಿಸಿದ್ದಾರೆ. ಹಿರಿಯ ತಾರೆ, ನಿರ್ದೇಶಕಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅಂಬರೀಷ್ ಮಡದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿ. ಹರಿಕೃಷ್ಣ ಅವರ ಸಂಗೀತವಿರುವ ವೀರ ಪರಂಪರೆ, ಛಾಯಾಗ್ರಹಣ ಆರ್. ಗಿರಿ ಸಾರಥ್ಯ ವಹಿಸಿದ್ದಾರೆ.
ಹಾಸ್ಯ ನಟರಾಗಿ ಶರಣ್, ಖಳ ನಟರಾಗಿ ಸುದೀಪ್ ಥೋ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೀರ ಪರಂಪರೆ ಯಲ್ಲಿ ವೀರನ ಸಾಹಸ - Chitratara.com
Copyright 2009 chitratara.com Reproduction is forbidden unless authorized. All rights reserved.