Chief Editor
Manohar. R (Manu)
Photo Journalist
chitrataramanu@gmail.com
+91 9845549026
ವೈರ ಬಿಡುಗಡೆ
Posted date: 28 Thu, Sep 2017 08:54:43 AM
ಈ ಹಿಂದೆ ರಥಾವರ ನಿರ್ಮಿಸಿದ್ದ ಧರ್ಮಶ್ರೀ ಮಂಜುನಾಥ್ ನಿರ್ಮಿಸಿರುವ ವೈರ ಚಿತ್ರ ಅಕ್ಟೋಬರ್ ೬ರಂದು ರಾಜ್ಯಾಧ್ಯಂತ ತೆರೆ ಕಾಣಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನವರಸನ್ ನಿಭಾಯಿಸಿದ್ದಾರೆ. 
 
ನಿರ್ಮಾಪಕ ಮಂಜುನಾಥ್ ಅವರು ಈ ಸಿನಿಮಾ ನಿರ್ಮಿಸಲು ಕಾರಣ ಚಿತ್ರದ ಕಥೆಯಂತೆ. ನಿರ್ದೇಶಕ ನವರಸನ್ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂಬ ಮೆಚ್ಚುಗೆ ಖುದ್ದು ನಿರ್ಮಾಪಕರು ಮತ್ತು ಚಿತ್ರತಂಡದ ಕಡೆಯಿಂದ ಕೇಳಿ ಬರುತ್ತಿದೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನವರಸನ್ ಕಾಣಿಸಿಕೊಂಡಿರೋದು ವಿಶೇಷ. ಈ ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಎಲಿಮೆಂಟ್ ಹೊಂದಿದೆಯಂತೆ. ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ.
  ಧರ್ಮಶ್ರೀ ಎಂಟರ್ ಪ್ರೈಸಸ್ ಮತ್ತು ಗೀತಾ ಎಂಟರ್ ಟೈನರ‍್ಸ್ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಮಹೇಶ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರವಿ ಪೂಜಾರ್ ಕಲೆ ಹಾಗೂ ಕಿನಾಲ್ ರಾಜ್ ಗೀತ ರಚನೆ ಇದೆ. ನವರಸನ್, ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣಿ, ಕೌತಾರ್, ಮಂಜುಳಾ, ಹ್ಯಾರಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವೈರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.