Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿರಾಡಿ ಘಾಟ್‌ನಲ್ಲಿ ಗಹನ
Posted date: 09 Thu, Aug 2018 10:42:39 AM

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‌ಸೀನು) ನಿರ್ಮಾಣದ  ಗಹನ ಚಿತ್ರಕ್ಕೆ ಮಂಗಳೂರು, ಡೆಲ್ಟಾ ಪಾಯಿಂಟ್, ಉಡುಪಿ, ಮಲ್ಪೆ, ಚಾರ್ಮುಡಿ ಘಾಟ್, ಮಡಿಕೇರಿ, ಶಿರಾಡಿಘಾಟ್‌ನಲ್ಲಿ ನಾಯಕ-ನಾಯಕಿ, ಸಹಕಲಾವಿದರು ಪಾಲ್ಗೊಂಡಿದ್ದ ದೃಶ್ಯಗಳು ಚಿತ್ರೀಕರಣವಾದವು. ಅಲ್ಲದೆ ನಾಯಕ ವಿಲ್ಲನ್‌ನೊಂದಿಗೆ ಹೊಡೆದಾಡುವ ದೃಶ್ಯಕೂಡ ಚಿತ್ರೀಕರಣವಾಯಿತು. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ - ಪ್ರೀತ್ ಹಾಸನ್, ಸಹನಿರ್ದೇಶನ - ಚಂದ್ರ ಅಂತ, ಶ್ರೀನಿವಾಸ್ ಸಿನಿ, ಛಾಯಾಗ್ರಹಣ-ಸಾಯಿ ಶ್ರೀನಿವಾಸ್, ಈ ಚಿತ್ರದ ಮೂಲಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತ-ರಘು, ಧನವಂತ್ರಿ, ಸಂಕಲನ-ರಾಜೀವ.ಜೆ, ಸಾಹಿತ್ಯ - ವಿಜಯ್ ವಿಶ್ವಮಣಿ, ನೃತ್ಯ ನಿರ್ದೇಶನ- ಸಾಯಿ ಲಕ್ಷ್ಮಣ್, ಸರಸ್ವತಿ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿರುವ  ಈ ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಮುಂತಾದವರಿದ್ದು, ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಯಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿರಾಡಿ ಘಾಟ್‌ನಲ್ಲಿ ಗಹನ - Chitratara.com
Copyright 2009 chitratara.com Reproduction is forbidden unless authorized. All rights reserved.