Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿವಗಾಮಿ ಚಿತ್ರಕ್ಕೆ ಅಂತಿಮ ಹಂತದ ಚಿತ್ರೀಕರಣ ಬಾಕಿ.
Posted date: 11 Sat, Nov 2017 10:21:47 AM
ಶ್ರೀ ವಿಘ್ನೇಶ ಕಾರ್ತಿಕ್ ಸಿನಿಮಾಸ್ ಲಾಂಚನದಲ್ಲಿ ಗಂಗಪಟ್ನಂ ಶ್ರೀಧರ್ ಅವರು ಶಿವಗಾಮಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಧರ್ ಅವರು ತೆಲುಗು ನಿರ್ಮಾಪಕರು. ಈಗಾಗಲೇ ತೆಲುಗಿನಲ್ಲಿ ೫ ಸಿನಿಮಾಗಳನ್ನು ನಿರ್ಮಿಸಿರುವ, ಗಂಗಪಟ್ನಂ ಶ್ರೀಧರ್ ಅವರು ಇದೇ ಮಾದಲ ಬಾರಿಗೆ ಕನ್ನಡದಲ್ಲಿ ಶಿವಗಾಮಿ ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. 
 
ಶಿವಗಾಮಿ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬಾಕಿ ಇದ್ದು, ಅದ್ದೂರಿ ಅರಮನೆ ಸೆಟ್ ನಲ್ಲಿ ಬಹುಭಾಷ ನಟರ ತಾರಗಣದೊಂದಿಗೆ ಭರ್ಜರಿಯಾಗಿ ನಡೆಯಲಿದೆ.
 
ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಮ್ಯ ಕೃಷ್ಣ ಅವರು ಶೀರ್ಷಕೆ ಪಾತ್ರ ಶಿವಗಾಮಿಯಾಗಿ ೯ನೇ ಶತಮಾನದ ರಾಣಿಯಾಗಿ ನಟಿಸುತ್ತಿದ್ದಾರೆ.  “ಸಿಂಪಲ್ಲಾಗಿ ಇನ್ನೂಂದು ಲವ್ ಸ್ಟೋರಿ ಖ್ಯಾತಿಯ ಪ್ರವೀಣ್ ನಾಯಕರಾಗಿ ನಟಿಸುತ್ತಿದ್ದು, “ಬೆಂಗಳೂರು ಅಂಡರ್ ವಲ್ದ್ ಖ್ಯಾತಿಯಾ ಪಾಯಲ್ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ.
 
ಇನ್ನುಳಿದಂತೆ ರವಿಕಾಳೆ, ರೋಲರ್ ರಘು, ಅವಿನಾಶ್, ಗೋಲಿಸೋಡ ಮಧು, ರಮೇಶ್ ಪಂಡಿತ್, ರಿತೇಶ್ , ಕುರಿಬಾಂಡ್ ರಂಗ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಗೆ ಡಬ್ ಆಗುತ್ತಿದ್ದು, ಈಗಾಗಲೇ ದೊಡ್ಡ ಮೊತ್ತಕ್ಕೆ  ದಬ್ಬಿಂಗ್ ಹಕ್ಕಿನ ಮಾತುಕಥೆ ನಡೆಯುತ್ತಿದೆ. 
 
ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿ ಅನುಭವಿರುವ ಮಧು ಮಿಣಕನಗುರ್ಕಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ೯ನೇ ಶತಮಾನದ ಹಿಂದಿನ ರಾಜ ದರ್ಬಾರನ್ನು ಮರು ಸೃಷ್ಟಿಸುತ್ತಿರುವ ನಿರ್ದೇಶಕರು “ಬಾಹುಬಲಿ ಚಿತ್ರಕ್ಕೆ ಗ್ರಾಪಿಕ್ಸ್ ತಂತ್ರಜ್ಞರಿಂದ ಗ್ರಾಫಿಕ್ಸ್ ಕೆಲಸ ಮಾಡಿಸುತ್ತಿದ್ದು ಕನ್ನಡದಲ್ಲಿ ಅತ್ಯುನ್ನತ ತಂತ್ರಜ್ಞಾನ ಸೃಷ್ಠಿಸುವ ಉತ್ಸಾಹದಲ್ಲಿದ್ದಾರೆ. ವೀರ್ ಸಮರ್ಥ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳಿದ್ದು, ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ಬಹುದ್ದೂರ್ ಚೇತನ್, ವಿ. ನಾಗೇಂದ್ರ ಪ್ರಸಾದ್, ಗೌಸ್ ಫೀರ್, ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಛಾಯಗ್ರಾಹಕರಾದ ಬಾಲರೆಡ್ಡಿ ಅವರು ತಮ್ಮ ಕ್ಯಾಮರ ಕೈ ಚಳಕ ತೋರಿಸಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಶಿವಶಂಕರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಅಸೋಸಿಯೆಟ್ ಪ್ರಡ್ಯುಸರ್ ಕೆ.ಭಾರತಿ(ದೇವನಹಳ್ಳಿ) ಹಾಗೂ ಎಕ್ಸಿಕ್ಯುಟಿವ್ ವೇಮರೆಡ್ಡಿ . ಶಿವಗಾಮಿಯನ್ನು ಜನವರಿ ತಿಂಗಳಲ್ಲಿ ತೆರೆಗೆ ತರಲು ಚಿತ್ರ ತಂಡ ಸಿದ್ದತೆ ನಡೆಸಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿವಗಾಮಿ ಚಿತ್ರಕ್ಕೆ ಅಂತಿಮ ಹಂತದ ಚಿತ್ರೀಕರಣ ಬಾಕಿ. - Chitratara.com
Copyright 2009 chitratara.com Reproduction is forbidden unless authorized. All rights reserved.